ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮೈತ್ರಿ ಒಪ್ಪಂದ ಅರೇಂಜ್ಡ್ ಕಮ್ ಹಳ್ಳಿ ಲವ್ ಮ್ಯಾರೇಜು': ಎಚ್ಕೆ ಪಾಟೀಲ್

|
Google Oneindia Kannada News

Recommended Video

Lok Sabha Elections 2019: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಪ್ಪಂದದ ಬಗ್ಗೆ ಎಚ್ ಕೆ ಪಾಟೀಲ್ ಹೇಳಿದ್ದೇನು?

ಬಾಗಲಕೋಟೆ, ಏಪ್ರಿಲ್ 10: ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು, ಲವ್ ಮ್ಯಾರೇಜು ಹೌದು, ಇದೊಂತರಾ ಹಳ್ಳಿ ಲವ್: ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್

ಬಾಗಲಕೋಟೆ ಏಪ್ರಿಲ್ 10: ರಾಜ್ಯದ ಮೈತ್ರಿ ಒಪ್ಪಂದ ಅರೇಂಜ್ಡ್ ಮ್ಯಾರೇಜು ಹೌದು, ಲವ್ ಮ್ಯಾರೇಜ ಹೌದು... ಇದೊಂತರಾ ಹಳ್ಳಿ ಲವ್ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿಯಲ್ಲಿ ಅಲ್ಪ ಸ್ವಲ್ಪ ಗೊಂದಲ ಇದೆ. ರಾಹುಲ್ ಗಾಂಧಿ ಒಮ್ಮೆ ಬಂದು ಹೋದರೆ ಅದ ಕೂಡಾ ಸರಿಹೋಗುತ್ತದೆ ಎಂದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅವರ ಪರವಾಗಿ ಮತಯಾಚಿಸಿದರು.

ಮೋದಿ ಒಬ್ಬ ವಚನಭ್ರಷ್ಟ, ಪ್ರಣಾಳಿಕೆ ಸುಳ್ಳಿನ ಸರಮಾಲೆ : ಎಚ್ಕೆ ಪಾಟೀಲ್ ಮೋದಿ ಒಬ್ಬ ವಚನಭ್ರಷ್ಟ, ಪ್ರಣಾಳಿಕೆ ಸುಳ್ಳಿನ ಸರಮಾಲೆ : ಎಚ್ಕೆ ಪಾಟೀಲ್

ಸಿದ್ದರಾಮಯ್ಯ ಮೈಸೂರಿನಲ್ಲಿ ತಮ್ಮ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವುದೇ ಒಳ ಹೊಡೆತ ಕೊಡುವುದಿಲ್ಲಾ. ಅವರು ಅಣ್ಣ ತಮ್ಮಂದಿರ ರೀತಿ ಪ್ರೀತಿಯಿಂದ ಇದ್ದಾರೆ. ಒಳ ಹೊಡೆತ ಒಳ ಏಟು ಏನಿಲ್ಲ. ಇದೆಲ್ಲಾ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕೆ ನಿಮಗೆಲ್ಲಾ ತಿಳಿಯುತ್ತದೆ ಎಂದರು.

ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಪಾಕಿಸ್ತಾನಕ್ಕೆ ತೊಂದರೆ ಯಾದರೆ ದೋಸ್ತಿಗಳಿಗೆ ಕಣ್ಣಿರು ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ಇದು ಕೆಳಮಟ್ಟದ ವ್ಯಕ್ತಿ ಮಾತನಾಡುವ ಮಾತುಗಳು. ವಂದೇ ಮಾತರಂ ಎಂದು ಬ್ರಿಟೀಷರ ಗುಂಡಿಗೆ ಎದೆಯನ್ನು ಒಡ್ಡಿದವರು ಕಾಂಗ್ರೆಸ್ಸಿಗರಿಗೇ ದೇಶ ಭಕ್ತಿ ಹೇಳಿ ಕೊಡುತ್ತಾರ ಇವರು ಎಂದು ಪ್ರಶ್ನಿಸಿದರು.

ರಾಜಸ್ಥಾನದ ಗವರ್ನರ್ ಬಗ್ಗೆ ಎಚ್ಕೆ ಪಾಟೀಲ್

ರಾಜಸ್ಥಾನದ ಗವರ್ನರ್ ಬಗ್ಗೆ ಎಚ್ಕೆ ಪಾಟೀಲ್

ಇಂತಹ ದೇಶ ಭಕ್ತಿಯನ್ನು ಹೊಂದಿರುವ ಪ್ರಧಾನಿ ಮೋದಿ ಪುಲ್ವಾಮಾ ದಾಳಿಯಾಗಿ ಗಂಟೆಗಳ ಮೇಲೆ ಅದರ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಇಂತಹ ಉದಾಸೀನದ ಹಾಗೂ ವಚನಭ್ರಷ್ಟ ಪ್ರಧಾನಿ ನಮಗೆ ತಿಳುವಳಿಕೆ ಹೇಳಲು ಅರ್ಹರಲ್ಲ ಎಂದರು.

ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ನೋಡಿದ ನಂತರ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅದಕ್ಕಾಗಿಯೇ ನಮ್ಮ ರೀತಿಯ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಪರಿಚಯ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಪರಿಚಯ

ಮೋದಿ ಪತ್ರಿಕಾಗೋಷ್ಠಿ ನಡೆಸಿಲ್ಲ ಏಕೆ?

ಮೋದಿ ಪತ್ರಿಕಾಗೋಷ್ಠಿ ನಡೆಸಿಲ್ಲ ಏಕೆ?

ಪ್ರಜಾಪ್ರಭುತ್ವದ ದೇಶದ ಪ್ರಧಾನಿ ಮೋದಿ ಕಳೆದ 5 ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ. ಕೇವಲ ಪ್ರಾಯೋಜಿಗೋಷ್ಠಿಯನ್ನು ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿದಂತೆ ಹಲವರು ಸಂವಿಧಾನ ಬದಲಿಸುತ್ತೇವೆ. ಸಂವಿಧಾನ ಕಿತ್ತು ಹಾಕುತ್ತೇವೆ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೂಲ ಆಧಾರ ಸ್ಥಂಬವಾದ ಸಂವಿಧಾನವನ್ನು ಕಿತ್ತು ಹಾಕುವ ಮಹಾಪರಾಧ ಮಾಡಲಿಕ್ಕೆ ಬಿಜೆಪಿಯವರು ಹೋರಟಿದ್ದಾರೆ ಎಂದು ಆರೋಪಿಸಿದರು.

ರಾಜಸ್ಥಾನದ ಗವರ್ನರ್ ಬಗ್ಗೆ ಎಚ್ಕೆ ಪಾಟೀಲ್

ರಾಜಸ್ಥಾನದ ಗವರ್ನರ್ ಬಗ್ಗೆ ಎಚ್ಕೆ ಪಾಟೀಲ್

ರಾಜಸ್ತಾನದ ಗವರ್ನರ್ ನಾನು ಬಿಜೆಪಿ ಕಾರ್ಯಕರ್ತ ಎನ್ನುತ್ತಾರೆ. ರಾಜ್ಯಪಾಲರಾಗಿ ಈ ರೀತಿ ಹೇಳುವುದು ಸಂವಿಧಾನಕ್ಕೆ ಮಾಡುವಂತಹ ಅಪಚಾರ. ಇಂತಹ ವ್ಯಕ್ತಿ ಆ ಸ್ಥಾನದಲ್ಲಿರಲು ನಾಲಾಯಕ್. ಈ ವಿಚಾರದಲ್ಲಿ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸೈನಿಕರ ಡ್ರೆಸ್ ತೊಟ್ಟು ಗಾಗಲ್ ಹಾಕಿಕೊಂಡು ಚುನಾವಣಾ ಪ್ರಚಾರಕ್ಕೆ ಮುಂದಾಗಿರುವ ಪ್ರಧಾನಿ ಮೋದಿ ಅವರನ್ನು ಚುನಾವಣೆಯಿಂದ ವಜಾಗೊಳಿಸಬೇಕು ಎಂದರು.

ಪಾಟೀಲರನ್ನು ಗೆಲ್ಲಿಸಿ, ರಾಹುಲ್ ಗಾಂಧಿ ಪಿಎಂ ಮಾಡಿ : ಎಚ್ಕೆ ಪಾಟೀಲ್ ಪಾಟೀಲರನ್ನು ಗೆಲ್ಲಿಸಿ, ರಾಹುಲ್ ಗಾಂಧಿ ಪಿಎಂ ಮಾಡಿ : ಎಚ್ಕೆ ಪಾಟೀಲ್

ಬಿಜೆಪಿಯವರ ಸಂಕಲ್ಪ ಪ್ರಣಾಳಿಕೆಗೆ ಕಿಮ್ಮತ್ತಿನ ಬೆಲೆಯಿಲ್ಲ

ಬಿಜೆಪಿಯವರ ಸಂಕಲ್ಪ ಪ್ರಣಾಳಿಕೆಗೆ ಕಿಮ್ಮತ್ತಿನ ಬೆಲೆಯಿಲ್ಲ

ಬಿಜೆಪಿಯವರ ಸಂಕಲ್ಪ ಪ್ರಣಾಳಿಕೆಗೆ ಕಿಮ್ಮತ್ತಿನ ಬೆಲೆಯಿಲ್ಲ. ಆ ಪ್ರಣಾಳಿಕೆಯ ಬಗ್ಗೆ ಎಲ್ಲರೂ ಅಪಹಾಸ್ಯ ಮಾಡುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಮಾಡುತ್ತೇವೆಂದು ಮಾತು ಕೊಟ್ಟಿದ್ದೀರಿ, ರಾಮಮಂದಿರ ಇದುವರೆಗೂ ಯಾಕೆ ಮಾಡಲಿಲ್ಲಾ? ಜನರ ಅಕೌಂಟಿಗೆ ಹಣ ಹಾಕುತ್ತೆವೆಂದು ಹೇಳಿದ್ರೀ? ಅದನ್ನಾದರೂ ಮಾಡಿದಿರಾ? ವರ್ಷಕ್ಕೆ ಎರಡು ಕೋಟಿ ಜನರಿಗೆ ಉದ್ಯೋಗ ನೀಡುತ್ತೀವೆ ಎಂದಿದ್ದೀರಿ, ಇಲ್ಲಿಯವರೆಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಮೋದಿಯವರೆ ಎಂದು ಪ್ರಶ್ನಿಸಿದರು. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಆದರೆ ಅದರ ಬಗ್ಗೆ ತುಟಿಯನ್ನು ಬಿಚ್ಚದ ಪ್ರಧಾನಿಗಳು ವಿರೋಧ ಪಕ್ಷಗಳಿಗೆ ಬುದ್ದಿಹೇಳಲು ಮುಂದಾಗಿದ್ದಾರೆ ಎಂದರು.

English summary
KPCC campaign committee chief HK Patil is campaigning for Bagalkot candidate Veena Kashappanavar. HK Patil in a press meet said, JDS and Congress alliance is arranged cum Love marriage and love is like country side love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X