• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿದ್ಯುತ್ ಶಾಕ್‌: ಸಾವಿನಲ್ಲೂ ಒಂದಾದ ಬಾಗಲಕೋಟೆ ದಂಪತಿ

|

ಬಾಗಲಕೋಟೆ, ಜೂನ್ 17: ವಿದ್ಯುತ್ ವಾಟರ್ ಹೀಟರ್ ನಿಂದ ಆಗಾಗ ಅವಘಡಗಳು ಸಂಭವಿಸುತ್ತ ಇರುತ್ತದೆ. ಇಂದು ಬಾಗಲಕೋಟೆಯಲ್ಲಿ ವೃದ್ಧ ದಂಪತಿ ವಿದ್ಯುತ್ ವಾಟರ್ ಹೀಟರ್ ನಿಂದ ಶಾಕ್ ಹೊಡೆದು ಮರಣ ಹೊಂದಿದ್ದಾರೆ.

ಬಾಗಲಕೋಟೆಯ ನಗರದ ಸೆಕ್ಟರ್ ನಂಬರ್ 2 ರಲ್ಲಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಹೀಟರ್ ನಿಂದ ಮೊದಲು ವೃದ್ದೆಗೆ ಶಾಕ್ ಹೊಡೆದಿದೆ. ಆಕೆಯನ್ನು ರಕ್ಷಿಸಲು ಪತಿ ಮುಂದಾಗಿದ್ದು, ಆತನಿಗೂ ವಿದ್ಯುತ್ ಶಾಕ್‌ ಹೊಡೆದಿದೆ. ಶಾಕ್ ಪರಿಣಾಮಕ್ಕೆ ಪತಿ ಪತ್ನಿ ಇಬ್ಬರು ಮೃತರಾಗಿದ್ದಾರೆ.

ಬಾಗಲಕೋಟೆ; ಮಕ್ಕಳನ್ನು ಕಾಪಾಡಿ ಸಿಡಿಲಿಗೆ ತಾನು ಬಲಿಯಾದ ತಾಯಿ

ಮೃತ ಸ್ಥಳಕ್ಕೆ ನವನಗರ ಪೊಲೀಸ್‌ ಠಾಣೆ ಪೊಲೀಸರು ಬಂದು ತಪಾಸಣೆ ನಡೆಸಿದ್ದಾರೆ. ಸ್ವಾಮಿರಾವ್ ಕುಲಕರ್ಣಿ ಹಾಗೂ ಸರೋಜಾ ಕುಲಕರ್ಣಿ ಮರಣ ಹೊಂದಿದ್ದ ದುರ್ದೈವಿಗಳಾಗಿದ್ದಾರೆ.

ಸ್ವಾಮಿರಾವ್ ಕುಲಕರ್ಣಿರಿಂದ 75 ವರ್ಷ ವಯಸ್ಸಾಗಿದ್ದು, ಪತ್ನಿ ಸರೋಜಾ ಕುಲಕರ್ಣಿಗೆ 60 ವರ್ಷ ವಯಸ್ಸಾಗಿತ್ತು. ವಿದ್ಯುತ್ ಅವಘಡದಿಂದ ದಂಪತಿ ನಿಧನರಾಗಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.

English summary
Electric baler circuit kills Bagalkot couple. 75 years old Swamy Rao and 60 years old Saroja died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X