ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮೋದಿ, ಅಮಿತ್ ಶಾ ಮುಂದೆ ಸಿದ್ದರಾಮಯ್ಯ ಚಿಕ್ಕಬಾಲಕ ಇದ್ದಂತೆ'

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯ ಸರ್ಕಾರಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ ಎಂದ ಜಗದೀಶ್ ಶೆಟ್ಟರ್ | Oneindia Kannada

ಬಾಗಲಕೋಟೆ, ಮಾರ್ಚ್ 30 : 'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಕೈಗೊಂಬೆಯಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ದಿನಗಣನೆ ಆರಂಭವಾಗಿದೆ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಶುಕ್ರವಾರ ಬಾಗಲಕೋಟೆ ಜಿಲ್ಲೆಯ ರಾಂಪುರದಲ್ಲಿ ಮುಷ್ಠಿ ಅಕ್ಕಿ ಅಭಿಯಾನ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮೋದಿ, ಅಮಿತ್ ಶಾ ಮುಂದೆ ಸಿದ್ದರಾಮಯ್ಯ ಚಿಕ್ಕಬಾಲಕ ಇದ್ದಂತೆ' ಎಂದು ವಾಗ್ದಾಳಿ ನಡೆಸಿದರು.

ಬಾಗಲಕೋಟೆ : ಎಚ್.ವೈ.ಮೇಟಿಗೆ ಚಿರಂತಿಮಠ ಸವಾಲು!ಬಾಗಲಕೋಟೆ : ಎಚ್.ವೈ.ಮೇಟಿಗೆ ಚಿರಂತಿಮಠ ಸವಾಲು!

'ಕರ್ನಾಟಕದಲ್ಲಿ ಸರ್ಕಾರ ಉಳಿಸಿಕೊಳ್ಳಲು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸಿದ್ದರಾಮಯ್ಯ ಕೈಗೊಂಬೆಯಾಗಿದ್ದರು. ಇದರಿಂದ ಸಿದ್ದರಾಮಯ್ಯ ಅವರು ದುರಹಂಕಾರದಲ್ಲಿದ್ದಾರೆ. ಇನ್ನು ಹೆಚ್ಚು ದಿನ ಸಿದ್ದರಾಮಯ್ಯ ಅಧಿಕಾರಲ್ಲಿ ಮುಂದುವರೆಯುವುದಿಲ್ಲ' ಎಂದರು.

Countdown to Siddaramaiah govt has begun says Jagadish Shettar

'ಮೋದಿ, ಅಮಿತ್ ಶಾ ಎಲ್ಲಿ?, ಮೋದಿ, ಅಮಿತ್ ಶಾ ಮುಂದೆ ಸಿದ್ದರಾಮಯ್ಯ ಸಾಧನೆ ಏನು?. 5 ವಷ೯ದ ಆಡಳಿತವೇ ಸಾಧನೆ ಅಂತಿರೋ ಸಿದ್ದರಾಮಯ್ಯ ಜನರ ಹಿತಕ್ಕಾಗಿ ಏನು ಮಾಡಿದ್ದಾರೆ?' ಎಂದು ಪ್ರಶ್ನಿಸಿದರು.

ಬಾಗಲಕೋಟೆ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯಬಾಗಲಕೋಟೆ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ

'ಅಮಿತ್ ಶಾ, ಮೋದಿ ನೇತೃತ್ವದಲ್ಲಿ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರವಿದೆ. ಈ ಹಿಂದೆ ರಾಹುಲ್ ಮತ್ತು ಕಾಂಗ್ರೆಸ್‌ಗೆ ಮಠಮಾನ್ಯಗಳೆಂದರೆ ಅಲಜಿ೯ ಇತ್ತು. ಈಗ ಹಿಂದುಗಳು ನಮ್ಮ ವಿರುದ್ದ ಆಕ್ರೋಶಗೊಂಡಿದ್ದಾರೆಂದು ಮಠಮಾನ್ಯ ಅಲೆದಾಡುತ್ತಿದ್ದಾರೆ' ಎಂದು ಆರೋಪಿಸಿದರು.

'ಅಮಿತ್ ಶಾ, ಮೋದಿ ನೇತೃತ್ವದಲ್ಲಿ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರವಿದೆ. ಈ ಹಿಂದೆ ರಾಹುಲ್ ಮತ್ತು ಕಾಂಗ್ರೆಸ್‌ಗೆ ಮಠಮಾನ್ಯಗಳೆಂದರೆ ಅಲಜಿ೯ ಇತ್ತು. ಈಗ ಹಿಂದುಗಳು ನಮ್ಮ ವಿರುದ್ದ ಆಕ್ರೋಶಗೊಂಡಿದ್ದಾರೆಂದು ಮಠಮಾನ್ಯ ಅಲೆದಾಡುತ್ತಿದ್ದಾರೆ' ಎಂದು ಆರೋಪಿಸಿದರು.

'ಧರ್ಮವನ್ನು ಒಡೆಯುವ ಆಟ ಆಡಿದ್ದು ಸಿದ್ದರಾಮಯ್ಯ. ಕರ್ನಾಟಕ ಇತಿಹಾಸದಲ್ಲೇ ಸ್ವಾಮೀಜಿಗಳನ್ನು ಬೀದಿಗೆ ತರುವಂತಹ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ‌. ರಾಜ್ಯದ ಜನರು ಇಂತವರಿಗೆ ಬುದ್ಧಿ ಕಲಿಸುತ್ತಾರೆ' ಎಂದು ಹೇಳಿದರು.

English summary
Former CM and Opposition leader in Karnataka Assembly Jagadish Shettar said that, the countdown for the exit of the Congress government in Karnataka has begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X