ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹಕಾರ ಸಂಘ ಚುನಾವಣೆ: ಮಾಜಿ ಶಾಸಕ ಕಾಶಪ್ಪನವರ್ ಮೇಲೆ ಹಲ್ಲೆ

By Nayana
|
Google Oneindia Kannada News

ಬಾಗಲಕೋಟೆ, ಸೆಪ್ಟೆಂಬರ್ 6: ಬೆಂಗಳೂರಿನ ಸ್ಕೈಬಾರ್ ಗಲಾಟೆ ಮೂಲಕ ಹಿಂದೆ ಬಾರಿ ಸುದ್ದಿ ಮಾಡಿದ್ದ ಅಂದಿನ ಶಾಸಕ ಇಂದಿನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತೆ ಸುದ್ದಿಯಲ್ಲಿದ್ದಾರೆ.

ಪರಿಷತ್ ಚುನಾವಣೆ: ಮಾಜಿ ಸಚಿವ ಎಂ.ಬಿ. ಪಾಟೀಲ್ ಗೆ ಅಗ್ನಿ ಪರೀಕ್ಷೆಪರಿಷತ್ ಚುನಾವಣೆ: ಮಾಜಿ ಸಚಿವ ಎಂ.ಬಿ. ಪಾಟೀಲ್ ಗೆ ಅಗ್ನಿ ಪರೀಕ್ಷೆ

ಬಾಗಲಕೋಟೆಯ ಹುನಗುಂದ ವಿಧಾನಸಭಾ ಕ್ಷೇತ್ರದಿಂದ ಇತ್ತೀಚೆಗಷ್ಟೇ ಪರಾಭವಗೊಂಡಿದ್ದ ವಿಜಯಾನಂದ ಕಾಶಪ್ಪನವರ ಈಗ ಸ್ಥಳೀಯ ಸಹಕಾರ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಮಾರಾಮಾರಿಯಲ್ಲಿ ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.ಪ್ರಾಥಮಿಕ ಕೃಷಿ ಪತ್ತಿನ ಸಂಘ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ಬೆಂಬಲಿತ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಕಸರತ್ತು ನಡೆಸಿದ್ದರು.

ಮೇಟಿಗೆ ಅನ್ಯಾಯ ಮಾಡಿಲ್ಲ: ವಿಜಯಾನಂದ ಕಾಶಪ್ಪನವರ್ಮೇಟಿಗೆ ಅನ್ಯಾಯ ಮಾಡಿಲ್ಲ: ವಿಜಯಾನಂದ ಕಾಶಪ್ಪನವರ್

Clash between Bjp-Congress workers: Assault on former MLA Kashappanavar

ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರ ನಡುವೆ ಜಟಾಪಟಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಕಲ್ಲು ತೂರಾಟ ನಡೆದಿದೆ, ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಾಹನ ಸಂಪೂರ್ಣ ಜಖಂಗೊಂಡಿದೆ.ಆ ವೇಲೆ ಕಾಶಪ್ಪನವರ ಮೇಲೂ ಕಲ್ಲು ತೂರಾಟ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Former MLA Vijayanand Kashappanavar was allegedly assaulted by Congress workers in Primary Agricultural Cooperative Society elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X