ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮಖಂಡಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಆಸ್ತಿ ವಿವರ

|
Google Oneindia Kannada News

ಜಮಖಂಡಿ, ಅಕ್ಟೋಬರ್ 17: ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ನೇರ ಸ್ಪರ್ಧೆ ಇದ್ದು ಎರಡೂ ಪಕ್ಷಕ್ಕೆ ಗೆಲ್ಲುವ ಸಮಾನ ಅವಕಾಶಗಳಿವೆ.

ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಇದೀಗ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಪಕ್ಷವು ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್ ನ್ಯಾಮಗೌಡ ಅವರಿಗೆ ಟಿಕೆಟ್ ನೀಡಿದ್ದರೆ. ಬಿಜೆಪಿಯು ಕಳೆದ ಬಾರಿ ಸೋತಿದ್ದ ಶ್ರೀಕಾಂತ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿದೆ.

ಶ್ರೀಕಾಂತ್ ಅವರು ಇದೇ ವರ್ಷಾರಂಭದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಈಗ ಅವರಿಗೆ ಮತ್ತೊಂದು ಅವಕಾಶ ನೀಡಿದೆ ರಾಜ್ಯ ಬಿಜೆಪಿ.

ಮಂಡ್ಯದಲ್ಲಿ ಜೆಡಿಎಸ್‌ ವಿರುದ್ಧ ತೊಡೆತಟ್ಟಿರುವ ಬಿಜೆಪಿ ಅಭ್ಯರ್ಥಿಯ ಆಸ್ತಿ ವಿವರಮಂಡ್ಯದಲ್ಲಿ ಜೆಡಿಎಸ್‌ ವಿರುದ್ಧ ತೊಡೆತಟ್ಟಿರುವ ಬಿಜೆಪಿ ಅಭ್ಯರ್ಥಿಯ ಆಸ್ತಿ ವಿವರ

ಹಲವು ಬಿಜೆಪಿ ನಾಯಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರಾದರೂ ಯಡಿಯೂರಪ್ಪ ನೇತೃತ್ವದ ಮುಖಂಡರು ಎಲ್ಲ ಅಸಮಾಧಾನಗಳನ್ನು ದೂರ ಮಾಡಿದ್ದಾರೆ. ಶ್ರೀಕಾಂತ್ ಕುಲಕರ್ಣಿ ನಾಮಪತ್ರ ಸಲ್ಲಿಸಿದ್ದು ಅವರ ಆಸ್ತಿ ವಿವರ ಇಲ್ಲಿ ನೀಡಲಾಗಿದೆ.

ಶ್ರೀಕಾಂತ್ ಅವರ ವಾರ್ಷಿಕ ಆದಾಯ ಎಷ್ಟು?

ಶ್ರೀಕಾಂತ್ ಅವರ ವಾರ್ಷಿಕ ಆದಾಯ ಎಷ್ಟು?

* ಶ್ರೀಕಾಂತ ಕುಲಕರ್ಣಿ ಅವರ 2017-18ನೇ ಸಾಲಿನ ವಾರ್ಷಿಕ ಆದಾಯ 5.40 ಲಕ್ಷ. ಪತ್ನಿ ಶ್ರೀದೇವಿ ಅವರು ಯಾವುದೇ ಆದಾಯ ತೋರಿಸಿಲ್ಲ, ಅವರ ಮೊದಲ ಮಗ ಸಚಿನ್‌ಗೆ ಸಹ ಯಾವುದೇ ಆದಾಯ ಇಲ್ಲ ಆದರೆ ಎರಡನೇ ಮಗ ಸಮೀರ್‌ಗೆ ಈ ಸಾಲಿನಲ್ಲಿ 1.96 ಲಕ್ಷ ಆದಾಯ ಬಂದಿದೆ. ಕಿರಿಯ ಮಗ ಭರತ್‌ 5.08 ಲಕ್ಷ ಆದಾಯಕ್ಕೆ ತೆರಿಗೆ ಕಟ್ಟಿದ್ದಾರೆ.

* ಶ್ರೀಕಾಂತ್‌ ಅವರ ಬಳಿ ನಗದು 1.40 ಲಕ್ಷ ನಗದಿದೆ. ಅವರ ಪತ್ನಿ ಶ್ರೀದೇವಿ ಅವರ ಬಳಿ 1.58 ರೂಪಾಯಿ ನಗದಿದೆ. ಮಗ ಸಚಿನ್‌ ಬಳಿ 2.40 ಲಕ್ಷ, ಸಮೀರ್‌ ಬಳಿ 2.48 ಲಕ್ಷ, ಭರತ್‌ ಬಳಿ 2.46 ಲಕ್ಷ ನಗದಿದೆ.

ಹೆಂಡತಿ, ಮಕ್ಕಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ ಕೈ ಅಭ್ಯರ್ಥಿ ಉಗ್ರಪ್ಪ!ಹೆಂಡತಿ, ಮಕ್ಕಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ ಕೈ ಅಭ್ಯರ್ಥಿ ಉಗ್ರಪ್ಪ!

ಕುಲಕರ್ಣಿ ಮನೆಯಲ್ಲಿವೆ 10 ವಾಹನಗಳು

ಕುಲಕರ್ಣಿ ಮನೆಯಲ್ಲಿವೆ 10 ವಾಹನಗಳು

* ಕುಲಕರ್ಣಿ ಅವರ ಬ್ಯಾಂಕ್ ಖಾತೆಯಲ್ಲಿ 16.25 ಲಕ್ಷ ಹಣ ಇದೆ. ಮೊದಲ ಮಗನ ಖಾತೆಯಲ್ಲಿ 1.15 ಲಕ್ಷ, ಎರಡನೇ ಮಗನ ಖಾತೆಯಲ್ಲಿ 5.21 ಲಕ್ಷ, ಭರತ್‌ ಖಾತೆಯಲ್ಲಿ 5.04 ಲಕ್ಷ ಹಣವಿದೆ.

* ಕುಲಕರ್ಣಿ ಅವರ ಹೆಸರಲ್ಲಿ ಒಂದು ಟ್ರಾಕ್ಟರ್‌, ಎರಡು ಟ್ರೇಲರ್ ವಾಹನಗಳಿವೆ ಇವುಗಳ ಒಟ್ಟು ಮೌಲ್ಯ 8.30 ಲಕ್ಷ. ಮಗ ಸಚಿನ್‌ ಬಳಿ 14 ಲಕ್ಷ ಮೌಲ್ಯದ ಸ್ಕಾರ್ಪಿಯೋ, 56,000 ದ್ವಿಚಕ್ರ ಹಾಗೂ 10,000 ಮೌಲ್ಯದ ಒಂದು ದ್ವಿಚಕ್ರ ವಾಹನ ಇದೆ. ಎರಡನೇ ಅವಲಂಬಿತ ಸಮೀರ್‌ ಬಳಿ 55,000 ದ್ವಿಚಕ್ರವಾಹನ ಇದೆ. ಮೂರನೇ ಅವಲಂಬಿತ ಭರತ್‌ ಬಳಿ 14 ಲಕ್ಷ ಮೌಲ್ಯದ ಕಾರು, 3.50 ಲಕ್ಷ ಮೌಲ್ಯದ ಗೂಡ್ಸ್‌ ವಾಹನ, 1 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ ಇದೆ.

ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರ ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರ

ಕುಲಕರ್ಣಿ ಬಳಿ ಇರುವ ಚಿನ್ನ ಎಷ್ಟು?

ಕುಲಕರ್ಣಿ ಬಳಿ ಇರುವ ಚಿನ್ನ ಎಷ್ಟು?

* ಕುಲಕರ್ಣಿ ಅವರ ಬಳಿ 2.55 ಲಕ್ಷ ಮೌಲ್ಯದ ಚಿನ್ನಾಭರಣ ಇದೆ, ಪತ್ನಿ ಹೆಸರಲ್ಲಿ 1.55 ಲಕ್ಷ ಮೌಲ್ಯದ ಚಿನ್ನ ಇದೆ. ಸಚಿನ್‌ ಬಳಿ 4.50 ಲಕ್ಷ ಮೌಲ್ಯದ ಚಿನ್ನ ಇದೆ, ಸಮೀರ್ ಬಳಿ 2 ಲಕ್ಷ ಮೌಲ್ಯದ ಚಿನ್ನಾಭರಣ ಇದೆ ಇದು ಉಡುಗೊರೆ ಬಂದಿದ್ದಾಗೆ ಘೋಷಿಸಿದ್ದಾರೆ. ಭರತ್ ಬಳಿಯೂ 2 ಲಕ್ಷದ ಚಿನ್ನ ಇದೆ ಇದೂ ಸಹ ಉಡುಗೊರೆ ಎಂದು ನಮೂದಿಸಿದ್ದಾರೆ.

* ಟಿವಿ, ಸೋಫಾ, ಎಸಿ, ಪೀಠೋಪಕರಣ, ಟಿವಿ ಇನ್ನಿತರೆ ವಸ್ತುಗಳಿಗೆ ಕುಲಕರ್ಣಿ ಕುಟುಂಬವು 4.05 ಲಕ್ಷ ವ್ಯಯ ಮಾಡಿದ್ದಾರೆ.

* ಶ್ರೀಕಾಂತ್‌ ಅವರ ಒಟ್ಟು ಚರಾಸ್ತಿಯು 33 ಲಕ್ಷ ಇದೆ. ಪತ್ನಿಯ ಚರಾಸ್ತಿ 3.72 ಲಕ್ಷ ಇದೆ. ಸಚಿನ್ ಚರಾಸ್ತಿ 41.04 ಲಕ್ಷ ಇದೆ. ಸಮೀರ್ ಚರಾಸ್ತಿ 12.64 ಇದ್ದರೆ ಭರತ್ ಚರಾಸ್ತಿ 29.44 ಇದೆ.

ಕುಲಕರ್ಣಿ ಅವರ ಒಟ್ಟು ಕೃಷಿಜಮೀನೆಷ್ಟು?

ಕುಲಕರ್ಣಿ ಅವರ ಒಟ್ಟು ಕೃಷಿಜಮೀನೆಷ್ಟು?

* ಶ್ರೀಕಾಂತ್ ಕುಲಕರ್ಣಿ ಅವರಿಗೆ 8.36 ಎಕರೆ ಕೃಷಿ ಜಮೀನಿದೆ ಅದರ ಈಗಿನ ಮೌಲ್ಯ 30 ಲಕ್ಷ ಆಗುತ್ತದೆ. ಮೊದಲ ಅವಂಬಿತ ಸಚಿನ್‌ ಹೆಸರಲ್ಲಿ 8.28 ಎಕರೆ ಜಮೀನಿದೆ ಇದರ ಈಗಿನ ಮೌಲ್ಯ 25 ಲಕ್ಷ. ಸಮೀತ್ ಹೆಸರಲ್ಲಿ 3.20 ಎಕರೆ ಜಮೀನಿದೆ ಇದರ ಮೌಲ್ಯ 15 ಲಕ್ಷ, ಭರತ್‌ ಹೆಸರಲ್ಲಿ 6.40 ಎಕರೆ ಕೃಷಿ ಜಮೀನಿದೆ ಇದರ ಈಗಿನ ಮೌಲ್ಯ 7 ಲಕ್ಷ.

* ಕುಲಕರ್ಣಿ ಅವರ ಬಳಿ ಕೃಷಿಯೇತರ ಸೈಟೊಂದು ಬೆಂಗಳೂರಿನಲ್ಲಿದೆ ಅದರ ಈಗಿನ ಮೌಲ್ಯ 25 ಲಕ್ಷ. ಸಚಿನ್ ಹೆಸರಲ್ಲಿ ಒಂದು ಸೈಟಿದ್ದು ಅದರ ಮೌಲ್ಯ 10 ಲಕ್ಷ ಇದೆ. ಸಮೀರ್ ಹೆಸರಲ್ಲಿ ಇರುವ ಸೈಟಿನ ಈಗಿನ ಮೌಲ್ಯ 60 ಲಕ್ಷ. ಭರತ್ ಹೆಸರಲ್ಲಿ ಯಾವುದೇ ಕೃಷಿಯೇತರ ಜಮೀನಿಲ್ಲ.

ಎಲ್ಲರ ಹೆಸರಲ್ಲೂ ಇವೆ ವಸತಿ ಮನೆಗಳು

ಎಲ್ಲರ ಹೆಸರಲ್ಲೂ ಇವೆ ವಸತಿ ಮನೆಗಳು

* ಕುಲಕರ್ಣಿ ಅವರ ಹೆಸರಿನಲ್ಲಿ ಮೂರು ವಸತಿ ಮನೆಗಳಿದ್ದು ಅವುಗಳ ಒಟ್ಟು ಮೌಲ್ಯ 1.08 ಕೋಟಿ ರೂಪಾಯಿಗಳು. ಸಚಿನ್ ಹೆಸರಲ್ಲಿ ಎರಡು ಮನೆಗಳಿದ್ದು ಅವುಗಳ ಈಗಿನ ಮೌಲ್ಯ 67 ಲಕ್ಷ ಇದೆ. ಸಮೀರ್ ಹೆಸರಿನಲ್ಲೂ ಎರಡು ಮನೆ ಇದ್ದು ಅವುಗಳ ಮೌಲ್ಯ 23 ಲಕ್ಷ ಇದೆ. ಭರತ್ ಹೆಸರಿನಲ್ಲೂ ಎರಡು ಮನೆ ಇದ್ದು ಅದರ ಮೌಲ್ಯ 9 ಲಕ್ಷ.

* ಕುಲಕರ್ಣಿ ಅವರಿಗೆ 4.72 ಲಕ್ಷ ಸಾಲ ಇದೆ. ಅವಲಂಬಿತ ಸಚಿನ್‌ಗೆ 4.39 ಲಕ್ಷ ಸಾಲ ಇದೆ. ಸಮೀರ್‌ಗೆ 5.28 ಲಕ್ಷ ಸಾಲ ಇದೆ. ಭರತ್‌ಗೆ 12.26 ಲಕ್ಷ ಸಾಲ ಇದೆ. ಶ್ರೀಕಾಂತ ಕುಲಕರ್ಣಿ ಅವರ ಆದಾಯದ ಮೂಲ ಕೃಷಿ ಮತ್ತು ಮಾಜಿ ಶಾಸಕರ ಪಿಂಚಣಿ.

English summary
BJP's Shrikanth Kulkarni files nominats for by election 2018. He lost assembly election early this year from the same constituency against Siddu Nyamagouda unfortunatley Siddu Nyamagouda died in a accident so by election happening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X