ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಮಖಂಡಿಯಲ್ಲಿ ಕಾಂಗ್ರೆಸ್‌ಗೆ ಜಯಭೇರಿ: ಅಪ್ಪನನ್ನು ಮೀರಿಸಿದ ಮಗ

|
Google Oneindia Kannada News

ಜಮಖಂಡಿ, ನವೆಂಬರ್ 06: ಜಮಖಂಡಿ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ ಅವರು ಭರ್ಜರಿಯಾಗಿ ಜಯಗಳಿಸಿದ್ದಾರೆ. ಆ ಮೂಲಕ ಅವರ ತಂದೆ ಸಿದ್ದು ನ್ಯಾಮಗೌಡ ಅವರನ್ನು ಅವರು ಮೀರಿಸಿದ್ದಾರೆ.

ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿದ್ದು ನ್ಯಾಮಗೌಡ ಅವರು ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಅವರನ್ನು ಕೇವಲ 2795 ಮತಗಳ ಅಂತರದಿಂದ ಸೋಲಿಸಿದ್ದರು. ಆ ನಂತರ ಅವರು ಅಪಘಾತವೊಂದರಲ್ಲಿ ಅಕಾಲಿಕ ಮೃತ್ಯಗೆ ಈಡಾದರು ಹಾಗಾಗಿಯೇ ಈ ಉಪಚುನಾವಣೆ ನಡೆದಿತ್ತು.

5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು?5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು?

ಚುನಾವಣೆಯಲ್ಲಿ ಅಪ್ಪನನ್ನು ಮೀರಿಸಿರುವ ಆನಂದ್ ನ್ಯಾಮಗೌಡ 39,484 ಮತಗಳ ಭಾರಿ ಅಂತರದಿಂದ ಸೋಲಿಣಿಸಿದ್ದಾರೆ. ತಂದೆ ಸಿದ್ದು ನ್ಯಾಮಗೌಡಗೆ ಬಹಳಾ ಪೈಪೋಟಿ ನೀಡಿದ್ದ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಮಗನ ಮುಂದೆ ಸುಲಭವಾಗಿ ಮಂಡಿ ಊರಿದ್ದಾರೆ.

ಕೆಲಸ ಮಾಡಿದ ಅನುಕಂಪದ ಅಲೆ

ಕೆಲಸ ಮಾಡಿದ ಅನುಕಂಪದ ಅಲೆ

ಎರಡೂ ಪಕ್ಷಗಳು ಅನುಕಂಪದ ಅಲೆಯನ್ನೇ ಮುಖ್ಯವಾಗಿಸಿಕೊಂಡು ಕಣಕ್ಕೆ ಇಳಿದಿದ್ದವು. ಕಾಂಗ್ರೆಸ್‌ಗೆ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಸಾವಾದರೆ. ಕುಲಕರ್ಣಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಅನುಕಂಪ. ಆದರೆ ಕೊನೆಗೆ ಆನಂದ್‌ ನ್ಯಾಮಗೌಡ ಅವರ ಕಡೆಗೆ ಕ್ಷೇತ್ರದ ಮತದಾರರು ಕರುಣೆ ತೋರಿದ್ದಾರೆ. ಯುವ ನಾಯಕನ ಕಾರ್ಡ್‌ ಕೂಡ ಇಲ್ಲಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

ಕೊನೆ ಚುನಾವಣೆ ಎಂದಿದ್ದ ಕುಲಕರ್ಣಿ

ಕೊನೆ ಚುನಾವಣೆ ಎಂದಿದ್ದ ಕುಲಕರ್ಣಿ

ಆನಂದ್‌ ನ್ಯಾಮಗೌಡ ಅನುಕಂಪದ ಕಾರ್ಡ್‌ ಮುಂದೆ ಮಾಡುತ್ತಾರೆಂದು ತಿಳಿದಿದ್ದ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಅವರು ತಾವು ಸಹ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ ಅವರ ರಾಜಕೀಯ ಜೀವನ ಬಹುತೇಕ ಅಂತ್ಯವಾಗಿದೆ.

ಜಮಖಂಡಿ ವಿಧಾನಸಭೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್‌ ಜಯಭೇರಿಜಮಖಂಡಿ ವಿಧಾನಸಭೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್‌ ಜಯಭೇರಿ

ಅವಕಾಶ ಕೈಚೆಲ್ಲಿಕೊಂಡ ಬಿಜೆಪಿ

ಅವಕಾಶ ಕೈಚೆಲ್ಲಿಕೊಂಡ ಬಿಜೆಪಿ

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಎದುರು ಬಿಜೆಪಿಯ ಬಂಡಾಯ ಅಭ್ಯರ್ಥಿ ಸಂಗಮೇಶ ನಿರಾಣಿ ಸ್ಪರ್ಧಿಸಿದ್ದರು. 24,461 ಮತಗಳನ್ನು ಪಡೆದಿದ್ದ ಅವರು ಬಿಜೆಪಿ ಗೆಲುವಿಗೆ ಅಡ್ಡಗಾಲು ಹಾಕಿದ್ದರು. ಆದರೆ ಈ ಬಾರಿ ಯಡಿಯೂರಪ್ಪ ಅವರು ಸಂಧಾನದ ಮೂಲಕ ಸಂಗಮೇಶ ನಿರಾಣಿ ಅವರು ಬಿಜೆಪಿಗೆ ಕೆಲಸ ಮಾಡುವಂತೆ ಮಾಡಿದ್ದರೂ ಆದರೂ ಸಹ ಬಿಜೆಪಿ ಇಲ್ಲಿ ಸೋಲನ್ನಪ್ಪಿರುವುದು ಸೋಜಿಗ.

ಆನಂದ್‌ಗೆ ಸಿದ್ದರಾಮಯ್ಯ-ಪರಮೇಶ್ವರ್‌ ಬಲ

ಆನಂದ್‌ಗೆ ಸಿದ್ದರಾಮಯ್ಯ-ಪರಮೇಶ್ವರ್‌ ಬಲ

ಆನಂದ್ ನ್ಯಾಮಗೌಡಗೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಅವರ ಬಲ ಬಹುವಾಗಿ ಇತ್ತು. ಡಿಸಿಎಂ ಪರಮೇಶ್ವರ್‌ ಅವರು ಕ್ಷೇತ್ರದ ಉಸ್ತುವಾರಿ ವಹಿಸಿದ್ದರೆ ಸಿದ್ದರಾಮಯ್ಯ ಅವರು ಸ್ಟಾರ್ ಪ್ರಚಾರಕರಾಗಿದ್ದರು. ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದ ನೆರೆಯ ಕ್ಷೇತ್ರ ಜಮಖಂಡಿ ಆಗಿದ್ದ ಕಾರಣ ಸಿದ್ದರಾಮಯ್ಯ ಅವರು ಜಮಖಂಡಿ ಮೇಲೆ ಹೆಚ್ಚಿನ ಆಸ್ಥೆ ತೋರಿ ಪ್ರಚಾರ ಮಾಡಿದ್ದರು. ಅವರ ಶ್ರಮ ವ್ಯರ್ಥವಾಗಿಲ್ಲ.

ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು?ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು?

ಯಾರಿಗೆ ಎಷ್ಟು ಮತ?

ಯಾರಿಗೆ ಎಷ್ಟು ಮತ?

ಕಾಂಗ್ರೆಸ್‌ನ ಆನಂದ್‌ ನ್ಯಾಮಗೌಡ ಅವರು ಒಟ್ಟು 97,017 ಮತಗಳನ್ನು ಪಡೆದಿದ್ದರೆ ಶ್ರೀಕಾಂತ್ ಕುಲಕರ್ಣಿ ಅವರು 57,537 ಮತಗಳನ್ನು ಗಳಿಸಿಕೊಂಡಿದ್ದಾರೆ. ಆನಂದ್‌ ನ್ಯಾಮಗೌಡ ಅವರು ಒಟ್ಟು 39,484 ಮತಗಳ ಅಂತರದಿಂದ ಗೆದ್ದಿದ್ದಾರೆ. ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದ ಆನಂದ್‌ ಜಾಕ್‌ಪಾಟ್‌ ಹೊಡೆದಿದ್ದಾರೆ.

ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!

English summary
Congress candidate Anand Nyamagowda won the by election by very big margin. He defeat BJP's Shrikanth Kulkarni by 39000+ votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X