ತ್ಯಾಜ್ಯ ಸಂಸ್ಕರಣಾ ಘಟಕ ಸುತ್ತ ಬಫರ್ ವಲಯ: 6 ಘಟಕ ಪುನರಾರಂಭ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ಹೈಕೋರ್ಟ್ ಆದೇಶ ಪಾಲನೆಗೆ ಮುಂದಾಗಿರುವ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗು ಬಿಬಿಎಂಪಿ, ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತ ಸಂರಕ್ಷಿತ ಪ್ರದೇಶ ಗುರುತಿಸಲು ಕ್ರಮ ಕೈಗೊಳ್ಳುತ್ತಿದೆ.
ಬೆಂಗಳೂರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸಮರ್ಪಕ ತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ 7 ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಆದರೆ, ಘಟಕಗಳ ಬಗ್ಗೆ ಸುತ್ತಲಿನ ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ 7 ಘಟಕಗಳು ಸ್ಥಗಿತಗೊಂಡಿದ್ದವು. ಈ ಕುರಿತಂತೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಘಟಕಗಳನ್ನು ಪುನರಾರಂಭಿಸುವಂತೆ ಸೂಚನೆ ನೀಡಿತ್ತು.

ವರ್ತೂರು ಕೆರೆಯಲ್ಲಿ ತ್ಯಾಜ್ಯ ಸುರಿದ ಬಿಬಿಎಂಪಿ: ಸ್ಥಳೀಯರ ಆಕ್ರೋಶ

ಘಟಕದಲ್ಲಿ ಮೀಥೇನ್ ಗ್ಯಾಸ್ ಉತ್ಪತ್ತಿಯಾಗಲಿದೆ. ಹಾಗೆಯೇ, ಕಸದಿಂದ ದುರ್ವಾಸನೆ ಉಂಟಾಗಿ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಘಟಕದ ಸುತ್ತ ಸಂರಕ್ಷಿತ ವಲಯವನ್ನು ಗುರುತಿಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಅದರಂತೆ, ಇದೀಗ ಸಂರಕ್ಷಿತ ವಲಯ ಗುರುತಿಸುವ ಕಾರ್ಯ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಸಮಿತಿ ರಚನೆಗೆ ಪ್ರಸ್ತಾವಣೆ: ಸಂರಕ್ಷಿತ ವಲಯ ಗುರುತಿಸುವ ಸಲುವಾಗಿ ಸಮಿತಿ ರಚಿಸಲು ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದರಲ್ಲಿ ಕೆಎಸ್ ಪಿಬಿಸಿ ಹಿರಿಯ ಪರಿಸರ ಅಧಿಕಾರಿ, ಬಿಬಿಎಂಪಿ ಆಯುಕ್ತರು ಇನ್ನಿತರ ಅಧಿಕಾರಿಗಳಿರಲಿದ್ದಾರೆ.

Buffer zone identified surrounding waste management unit

ಆವರು ಘಟಕಗಳಿಗೆ ಭೇಟಿ ನೀಡಿ, ಅವುಗಳ ವಿಸ್ತೀರ್ಣ ಮತ್ತು ಸುತ್ತಲಿನ ಜನವಸತಿ ಪ್ರದೇಶವನ್ನಾಧರಿಸಿ ಬಫರ್ ವಲಯ ಗುರುತಿಸಲಿದ್ದಾರೆ. ಸರ್ಕಾರ ಸಮಿತಿ ರಚನೆಗೆ ಶೀಘ್ರದಲ್ಲಿ ಅನುಮತಿ ನೀಡಲಿದ್ದು, ಸಮಿತಿ ರಚನೆಯಾದ ವಾರದೊಳಗೆ ಬಫರ್ ವಲಯ ಗುರತಿಸುವ ಕೆಲಸ ಆರಂಭಿಸಲಾಗುತ್ತದೆ. ಈವರೆಗೆ ಸ್ಥಗಿತಗೊಂಡಿದ್ದ 7 ಘಟಕಗಳ ಪೈಕಿ 6 ಘಟಕಗಳು ಪುನರಾರಂಭಗೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following the high court order on closure of waste management units in Bangalore, BBMP and KSPCB have taken an initiative to identify buffer zone surrounding all seven waste management units to resolve residents complaint who were living around these units.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ