ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.17ರಂದು ಬಿಎಸ್‌ಎಫ್‌ ಸೇರಲಿವೆ ನಾಲ್ಕು ಮುಧೋಳ ನಾಯಿ

|
Google Oneindia Kannada News

ಬಾಗಲಕೋಟೆ, ಅಕ್ಟೋಬರ್ 13 : ಗಡಿ ಭದ್ರತಾ ಪಡೆಗೆ ಬಾಗಲಕೋಟೆಯ ಹೆಮ್ಮೆಯ ಮುಧೋಳ ನಾಯಿಗಳು ಸೇರ್ಪಡೆಗೊಳ್ಳಲಿವೆ. ಈಗಾಗಲೇ ಸಿಆರ್‌ಪಿಎಫ್, ಐಟಿಬಿಪಿಗಳಲ್ಲಿ ಮುಧೋಳ ತಳಿಯ ನಾಯಿಗಳು ಸೇವೆ ಸಲ್ಲಿಸುತ್ತಿವೆ.

ಬಿಎಸ್‌ಎಫ್ ನಾಲ್ಕು ನಾಯಿಮರಿಗಳಿಗೆ ಬೇಡಿಕೆ ಸಲ್ಲಿಸಿತ್ತು. ಗ್ವಾಲಿಯರ್‌ನಿಂದ ಬಿಎಸ್‌ಎಫ್‌ನ ಅಸಿಸ್ಟೆಂಟ್ ಕಮಾಂಡೆಂಟ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಅಕ್ಟೋಬರ್ 16ರಂದು ಮುಧೋಳಕ್ಕೆ ಆಗಮಿಸಲಿದೆ.

ಎನ್‌ಎಸ್‌ಜಿ ಪಡೆ ಸೇರಲಿವೆ ಬಾಗಲಕೋಟೆಯ ಮುಧೋಳ ನಾಯಿಎನ್‌ಎಸ್‌ಜಿ ಪಡೆ ಸೇರಲಿವೆ ಬಾಗಲಕೋಟೆಯ ಮುಧೋಳ ನಾಯಿ

ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ನಾಯಿ ಮರಿಗಳು ಬಿಎಸ್‌ಎಫ್‌ಗೆ ಸೇರ್ಪಡೆಯಾಗಲಿವೆ. 10 ತಿಂಗಳ ತರಬೇತಿ ಬಳಿಕ ಸೇವೆಯನ್ನು ಅವುಗಳು ಆರಂಭಿಸಲಿವೆ.

ಕರ್ನಾಟಕ ಪೊಲೀಸ್‌ ಇಲಾಖೆಗೆ ಮುಧೋಳ ನಾಯಿ ಸೇರ್ಪಡೆ ಕರ್ನಾಟಕ ಪೊಲೀಸ್‌ ಇಲಾಖೆಗೆ ಮುಧೋಳ ನಾಯಿ ಸೇರ್ಪಡೆ

BSF To Induct Mudhol Dog On October 17

ಬಿಎಸ್‌ಎಫ್ ಅಧಿಕಾರಿಗಳ ತಂಡ ತಲಾ ಎರಡು ಗಂಡು ಮತ್ತು ಹೆಣ್ಣು ಮರಿಗಳನ್ನು ತೆಗೆದುಕೊಂಡು ಹೋಗಲಿದೆ. ನಾಯಿ ಮರಿಗಳಿಗೆ ಉತ್ತರ ಪ್ರದೇಶದ ಮೀರತ್‌ನಲ್ಇ ತರಬೇತಿಯನ್ನು ನೀಡಲಾಗುತ್ತದೆ. ಬಳಿಕ ಬಿಎಸ್‌ಎಫ್‌ನಲ್ಲಿ ಸೇವೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಭಾರತೀಯ ಸೇನೆ ಸೇರಲು ಸಜ್ಜಾದ ದೇಸಿ ತಳಿ ನಾಯಿ 'ಮುಧೋಳ ಹೌಂಡ್'ಭಾರತೀಯ ಸೇನೆ ಸೇರಲು ಸಜ್ಜಾದ ದೇಸಿ ತಳಿ ನಾಯಿ 'ಮುಧೋಳ ಹೌಂಡ್'

ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿರುವ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರ ಬೀದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದ ಅಂಗ ಸಂಸ್ಥೆಯಾಗಿದೆ.

ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಶಿವಪ್ರಸಾದ್ ಮುಧೋಳ ನಾಯಿ ಮರಿಗಳನ್ನು ಬಿಎಸ್‌ಎಫ್ ಅಧಿಕಾರಿಗಳ ತಂಡಕ್ಕೆ ಹಸ್ತಾಂತರ ಮಾಡಲಿದ್ದಾರೆ. ಮೀರತ್‌ನಲ್ಲಿರುವ ಸೇನೆಯ ರಿಮೌಂಟ್ ಅಂಡ್ ವೆಟರ್ನರಿ ಕಾರ್ಪ್ ಸೆಂಟರ್‌ನಲ್ಲಿ ನಾಯಿಗಳ ತರಬೇತಿ ನಡೆಯಲಿದೆ.

ಕರ್ನಾಟಕದ ಪೊಲೀಸ್ ಇಲಾಖೆ ಸಹ ಮುಧೋಳ ತಳಿಯ ನಾಯಿಗಳಿಗಾಗಿ ಮೌಖಿಕವಾಗಿ ಬೇಡಿಕೆ ಸಲ್ಲಿಸಿದೆ. ಇಲಾಖೆಯಿಂದ ಲಿಖಿತ ರೂಪದಲ್ಲಿ ಉತ್ತರ ಬಂದರೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Recommended Video

Muniratna ಅವರಿಗೆ Ticket ಸಿಗುವ ಮುನ್ನವೇ Supreme Court ಕ್ಲೀನ್ ಚಿಟ್ | Oneindia Kannada

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ತಿಂಗಳ ರೇಡಿಯೋ ಕಾರ್ಯಕ್ರಮದಲ್ಲಿ ಮುಧೋಳ ತಳಿಯ ನಾಯಿಗಳ ಬಗ್ಗೆ ಮಾತನಾಡಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದ್ದರು.

English summary
The Border Security Force (BSF) will induct 4 Bagalkote based Mudhol dog on October 17, 2020. BSF will train the dog for six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X