ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಹ ಪರಿಸ್ಥಿತಿಯಲ್ಲೂ ಹೊಲಸು ರಾಜಕೀಯ ಮಾಡಿದ ಬಿಜೆಪಿ ಶಾಸಕ

|
Google Oneindia Kannada News

Recommended Video

Karnataka Flood : ಉತ್ತರ ಕರ್ನಾಟಕದಲ್ಲಿ ಬಿಜೆಪಿ ಶಾಸಕನ ಕೀಳು ರಾಜಕೀಯ | Oneindia Kannada

ಬಾಗಲಕೋಟೆ, ಆಗಸ್ಟ್ 13: ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷ ರಾಜಕೀಯ ಮಾಡಬಾರದು ಎಂಬ ನೈತಿಕತೆಯನ್ನು ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಹಲವು ವರ್ಷಗಳಿಂದ ಕಾಯ್ದುಕೊಂಡು ಬಂದಿವೆ. ಆದರೆ ಬಿಜೆಪಿಯ ಒಬ್ಬ ಶಾಸಕ ಈ ನೈತಿಕತೆಯನ್ನು ಮೀರಿ ಪ್ರವಾಹದಲ್ಲೂ ರಾಜಕೀಯವನ್ನು ಎಳೆತಂದಿದ್ದಾರೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಬಾಗಲಕೋಟೆ ಕ್ಷೇತ್ರದ ಬಿಜೆಪಿ ಶಾಸಕ ವೀರಣ್ಣ ಚಿರಂತಿಮಠ, ಪ್ರವಾಹ ಪೀಡಿತರ ಭೇಟಿಗೆ ತೆರಳಿ ತಮ್ಮ ಪಕ್ಷದ ಪ್ರಚಾರ ಮಾಡಿರುವುದು ಜನರ ಕಣ್ಣು ಕೆಂಪಗೆ ಮಾಡಿದೆ.

ಕುರುಕ್ಷೇತ್ರ ಸಿನಿಮಾ ಸಂಭಾವನೆಯನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ ಕುರುಕ್ಷೇತ್ರ ಸಿನಿಮಾ ಸಂಭಾವನೆಯನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ

ಬಾಗಲಕೋಟೆ ಜಿಲ್ಲೆಯ ಹಲವು ಭಾಗಗಳು ಪ್ರವಾಹಕ್ಕೆ ತುತ್ತಾಗಿವೆ. ಸಂತ್ರಸ್ತರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂತಹುದ್ದೇ ಒಂದು ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ್ದ ವೀರಣ್ಣ ಚಿರಂತಿನಮಠ ಅವರು ಅಲ್ಲಿನ ಸ್ಥಳೀಯರ ಕಷ್ಟ ವಿಚಾರಿಸುವ ಬದಲಿಗೆ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ.

BJP MLA Veeranna Chiranthimath did politics middle of flood

ಸಂತ್ರಸ್ತರ ಬಳಿ ವೀರಣ್ಣ ಚಿರಂತಿಮಠ ಅವರು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್‌ ಅನ್ನು ಹೀನ ಭಾಷೆಯಲ್ಲಿ ಬೈದಿರುವ ಚಿರಂತಿನಮಠ ಅವರು, 'ಬಿಜೆಪಿಯು 370 ತೆಗೆದುಹಾಕಿದೆ, ಇನ್ನೂ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದೆ, ನೀವು ಕಾಂಗ್ರೆಸ್‌ ಕಡೆಗೆ ಹೋಗಬೇಡಿ, ಬಿಜೆಪಿಗೆ ಬನ್ನಿ' ಎಂದು ಹೇಳಿದ್ದಾರೆ.

ಇನ್ನೂ ಮೂರು ತಿಂಗಳು ಜಲಕಂಟಕ: ಕೋಡಿಮಠದ ಶ್ರೀ ಭವಿಷ್ಯಇನ್ನೂ ಮೂರು ತಿಂಗಳು ಜಲಕಂಟಕ: ಕೋಡಿಮಠದ ಶ್ರೀ ಭವಿಷ್ಯ

ವೀರಣ್ಣ ಅವರು ಪ್ರವಾಹದಂತಹಾ ಪರಿಸ್ಥಿತಿಯನ್ನು ರಾಜಕೀಯ ಮಾಡಲು ಬಳಸಿರುವ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬಾಗಲಕೋಟೆ ಕಾಂಗ್ರೆಸ್ ಸಹ ವೀರಣ್ಣ ಅವರ ನಡೆಯನ್ನು ಖಂಡಿಸಿದೆ.

BJP MLA Veeranna Chiranthimath did politics middle of flood

ಸಿಎಂ ಯಡಿಯೂರಪ್ಪ, ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಅಂತಹವರೇ ರಾಜಕೀಯವನ್ನು ಬದಿಗೆ ಇಟ್ಟು, ಪ್ರವಾಹ ಸಂತ್ರಸ್ತರ ಪರ ನಿಂತಿರುವಾಗ, ಬಿಜೆಪಿ ಶಾಸಕ ವೀರಣ್ಣ ಅವರ ನಡೆ ಆಕ್ರೋಶಕ್ಕೆ ಗುರಿಯಾಗಿದೆ.

English summary
Bagalkote BJP MLA Veeranna Chiranthimath did dirty politics middle of flood situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X