ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಒಬ್ಬ ವಚನಭ್ರಷ್ಟ, ಪ್ರಣಾಳಿಕೆ ಸುಳ್ಳಿನ ಸರಮಾಲೆ : ಎಚ್ಕೆ ಪಾಟೀಲ್

|
Google Oneindia Kannada News

ಬಾಗಲಕೋಟೆ, ಏಪ್ರಿಲ್ 9: ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿಯ ಹೊರತಂದಿರುವ ಪ್ರಣಾಳಿಕೆ ಸುಳ್ಳುಗಳ ಸರಮಾಲೆ.

ನಿವೃತ್ತಿ ವೇತನ, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮತ್ತು ರಾಮಮಂದಿರ ನಿರ್ಮಾಣದಂತಹ ಪ್ರಸ್ತಾವನೆಗಳು ಕೇವಲ ಚುನಾವಣೆ ಬಂದಾಗ ನೆನಪಾಗೋ ಸಂಗತಿಯಾಗಿದ್ದು ಕಳೆದ 5 ವರ್ಷದಲ್ಲಿ ಇದರ ನೆನಪು ಇರಲಿಲ್ಲ ಎಂದು ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಾತನಾಡಿದ ಅವರು ಮೋದಿ ಒಬ್ಬ ವಚನಭ್ರಷ್ಟ ಎಂದು ದೂರಿದರು.

ಕಳೆದ ಬಾರಿ ಚುನಾವಣೆಯಲ್ಲಿ ಕಪ್ಪು ಹಣ ತಂದು ದೇಶದ ಪ್ರತಿಯೋಬ್ಬ ನಾಗರಿಕರ ಅಕೌಂಟ್‍ಗೆ 15 ಲಕ್ಷ ಹಾಕುವ ಭರವಸೆ ನೀಡಿದ್ದ ಮೋದಿ ಕೊನೆ ಪಕ್ಷ 15 ಸಾವಿರ ರುಪಾಯಿಯನ್ನಾದರೂ ಯಾರೊಬ್ಬರ ಖಾತೆಗೂ ಹಾಕಿಲ್ಲ. ಇಂತಹ ವಚನಭ್ರಷ್ಟ ಮೋದಿಯ ಪರವಾಗಿ ಮತಯಾಚಿಸುವ ಹಕ್ಕು ಬಿಜೆಪಿಯವರಿಗಿಲ್ಲ ಎಂದು ಹೆಚ್ ಕೆ ಪಾಟೀಲ್ ತಿಳಿಸಿದರು.

ಪ್ರಣಾಳಿಕೆಯೇ ಒಂದು ಸುಳ್ಳುಗಳ ಸರಮಾಲೆ

ಪ್ರಣಾಳಿಕೆಯೇ ಒಂದು ಸುಳ್ಳುಗಳ ಸರಮಾಲೆ

ಬಿಜೆಪಿ ಪ್ರಣಾಳಿಕೆಯೇ ಒಂದು ಸುಳ್ಳುಗಳ ಸರಮಾಲೆ 5 ವರ್ಷದ ಆಡಳಿತದಲ್ಲಿ ಪ್ರಸ್ತಾವನೆಗೆ ಬರದ ರಾಮಮಂದಿರ ವಿಚಾರವನ್ನ ಚುನಾವಣೆ ಹತ್ತಿರ ಬರುತ್ತಿದಂತೆ ಶೀಘ್ರ ಇತ್ಯರ್ಥ ಪಡಿಸುವಂತೆ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದರು. ಇನ್ನೂ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಬದಲಿಸುವ ಮಾತನ್ನ ಚುನಾವಣಾ ಸಂದರ್ಭದಲ್ಲಿ ಆಡುತ್ತಿದ್ದಾರೆ.

ಮೋದಿಯನ್ನು ತಕ್ಷಣ ಚುನಾವಣೆಯಿಂದ ಅನರ್ಹಗೊಳಿಸಿ : ಎಚ್ಕೆ ಪಾಟೀಲ್ಮೋದಿಯನ್ನು ತಕ್ಷಣ ಚುನಾವಣೆಯಿಂದ ಅನರ್ಹಗೊಳಿಸಿ : ಎಚ್ಕೆ ಪಾಟೀಲ್

ಉದ್ಯಮಿಗಳಿಗೆ ಅನುಕೂಲವಾಗುವ ಕಾನೂನು ಜಾರಿ

ಉದ್ಯಮಿಗಳಿಗೆ ಅನುಕೂಲವಾಗುವ ಕಾನೂನು ಜಾರಿ

ಆದರೆ ಅದಾನಿ- ಅಂಬಾನಿಯಂತಹ ಉದ್ಯಮಿಗಳಿಗೆ ಅನುಕೂಲವಾಗುವ ಕಾನೂನು ಜಾರಿ ಮಾಡುವಾಗ ಇದೆಲ್ಲ ನೆನಪಿಗೆ ಬರಲಿಲ್ಲ ವೆಂದು ಅವರು ಲೇವಡಿ ಮಾಡಿದರು.

ಮೋದಿ ಆಡಳಿತದಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸಿದವರು ರೈತಾಪಿ ವರ್ಗ. ಕೃಷಿಕರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿದ್ದ ಮೋದಿ ಸರ್ಕಾರದಲ್ಲಿ ಅವರ ಆದಾಯ ಅರ್ಧಕ್ಕೆ ಇಳಿದಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಡೀನೋಟಿಫಿಕೇಷನ್, ಡೀಮಾನಿಟೈಸೇಷನ್ ಬಿಜೆಪಿ ಫಲ : ಎಚ್.ಕೆ.ಪಾಟೀಲ್ ಡೀನೋಟಿಫಿಕೇಷನ್, ಡೀಮಾನಿಟೈಸೇಷನ್ ಬಿಜೆಪಿ ಫಲ : ಎಚ್.ಕೆ.ಪಾಟೀಲ್

ಅಮಾನ್ಯೀಕರಣದ ನಂತರ ನುಚ್ಚುನೂರಾಯಿತು

ಅಮಾನ್ಯೀಕರಣದ ನಂತರ ನುಚ್ಚುನೂರಾಯಿತು

ಬಿಜೆಪಿ ತೋರಿಸಿದ್ದ ಅಚ್ಛೆ ದಿನ್ ಕನಸು ನೋಟು ಅಮಾನ್ಯೀಕರಣದ ನಂತರ ನುಚ್ಚುನೂರಾಯಿತು ಎಂದು ಬಿಜೆಪಿಯ ಸೋಲಿನ ಸರಮಾಲೆಗಳನ್ನ ಹೆಚ್ ಕೆ ಪಾಟೀಲ್ ಎತ್ತಿತೋರಿಸಿದರು.

ಇನ್ನೂ ಕಾಂಗ್ರೇಸ್ ಪ್ರಣಾಳಿಕೆ ಬಗ್ಗೆ ಮಾತನಾಡಿದ ಅವರು ರೈತ ಪರ ಮತ್ತು ಜನಪರ ಅಂಶಗಳಿಗೆ ತಮ್ಮ ಪಕ್ಷ ಆದ್ಯತೆ ನೀಡಿದೆ ಎಂದರು. ರೈತರನ್ನ ಋಣಮುಕ್ತ ಗೊಳಿಸಲು ಸಾಲಮನ್ನ ಮತ್ತು ಬಡಜನರ ಜೀವನದಲ್ಲಿ ನೆಮ್ಮದಿ ಮೂಡಿಸಲು ನ್ಯಾಯ್ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.

ಪಾಟೀಲರನ್ನು ಗೆಲ್ಲಿಸಿ, ರಾಹುಲ್ ಗಾಂಧಿ ಪಿಎಂ ಮಾಡಿ : ಎಚ್ಕೆ ಪಾಟೀಲ್ ಪಾಟೀಲರನ್ನು ಗೆಲ್ಲಿಸಿ, ರಾಹುಲ್ ಗಾಂಧಿ ಪಿಎಂ ಮಾಡಿ : ಎಚ್ಕೆ ಪಾಟೀಲ್

ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ

ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ

ಕಾರ್ಯಕ್ರಮದಲ್ಲಿ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ ಕಾಶ್ಯಪ್ಪನವರ್, ಬಸವಪ್ರಭು ಸರ್ದಾರ್ ಗೌಡ, ಅಜಯ್ ಕುಮಾರ್ ಸರನಾಯಕ್, ಮಾಜಿ ಸಚಿವ ಎಸ್ ಆರ್ ಪಾಟೀಲ್ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು. ಬಾಗಲಕೋಟೆಯಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಬಿಜೆಪಿಯ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಹಾಗೂ ವೀಣಾ ಕಾಶಪ್ಪನವರ್ ನಡುವೆ ತುರುಸಿನ ಸ್ಪರ್ಧೆ ನಿರೀಕ್ಷಿಸಲಾಗಿದೆ.

English summary
KPCC Campaign Committee President HK Patil termed BJP manifesto as bunch of bluffs. He was campaigning for Bagalkot Candidate Veena Kashappanavar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X