• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಎಸ್ವೈ ಸದ್ಯಕ್ಕೆ ಬದಲಾವಣೆಯಿಲ್ಲ: ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

|
Google Oneindia Kannada News

ಬಾಗಲಕೋಟೆ, ಮೇ 28: ಬಿಜೆಪಿಯವರು ಪಕ್ಷದ ಚೌಕಟ್ಟಿನೊಳಗೆ ಜಗಳವಾಡುತ್ತಿಲ್ಲ, ಬೀದಿಬೀದಿಯಲ್ಲಿ ಜಗಳವಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

"ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇರವಾಗಿ ಯೋಗೇಶ್ವರ್ ಮೇಲೆ ವಾಗ್ದಾಳಿ ನಡೆಸುತ್ತಾರೆ. ಹಿಂದೆ ಸಚಿವರಾಗಿದ್ದಾಗ ಕೋಟಿ ಕೋಟಿ ಲೂಟಿ ಹೊಡೆದರು ಎಂದು. ಇಂತಹ ಪಕ್ಷದಿಂದ ಏನು ಆಡಳಿತ ನಿರೀಕ್ಷೆ ಮಾಡಲು ಸಾಧ್ಯ"ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದರು.

ತಣ್ಣಗಾದ ಸಿಎಂ ಬದಲಾವಣೆ ವಿಚಾರ: ಆದರೂ, ಬಿಎಸ್ವೈ ತಲೆದಂಡ ನಿಶ್ಚಿತ, ಬಟ್ ಯಾವಾಗ?ತಣ್ಣಗಾದ ಸಿಎಂ ಬದಲಾವಣೆ ವಿಚಾರ: ಆದರೂ, ಬಿಎಸ್ವೈ ತಲೆದಂಡ ನಿಶ್ಚಿತ, ಬಟ್ ಯಾವಾಗ?

"ನನಗಿರುವ ಮಾಹಿತಿಯ ಪ್ರಕಾರ, ಯಡಿಯೂರಪ್ಪನವರನ್ನು ಸದ್ಯ ಬದಲಾವಣೆ ಮಾಡುವುದಿಲ್ಲ. ಕೊರೊನಾ ಕಾರಣದಿಂದ ಅವರ ವರಿಷ್ಠರು ಸದ್ಯ ಅವರನ್ನೇ ಮುಂದುವರಿಸಲು ಚಿಂತನೆ ನಡೆಸಿರಬಹುದು"ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

"ಯಡಿಯೂರಪ್ಪನವರನ್ನು ಬಿಟ್ಟರೆ ಬಿಜೆಪಿಯಲ್ಲಿ ಯಾರೂ ಸಮರ್ಥ ಅಭ್ಯರ್ಥಿಯಿಲ್ಲ. ಅವರನ್ನು ಬದಲಾವಣೆ ಮಾಡದಿರಲು ಅದೂ ಒಂದು ಕಾರಣ. ನನಗೂ ಮತ್ತು ಯಡಿಯೂರಪ್ಪನವರಿಗೂ ವೈಯಕ್ತಿಕ ಸಂಬಂಧ ಉತ್ತಮವಾಗಿಯೇ ಇದೆ"ಎಂದು ಸಿದ್ದರಾಮಯ್ಯ ಹೇಳಿದರು.

"ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯವರೇ, ಆದರೆ ಮುಖ್ಯಮಂತ್ರಿಯಾಗಿ ಅವರು ವೈಫಲ್ಯವನ್ನು ಕಂಡಿದ್ದಾರೆ. ಅವರ ಹೈಕಮಾಂಡ್ ಮತ್ತು ಬಿಜೆಪಿ ಶಾಸಕರಲ್ಲಿ ಕೆಲವರು ಅವರ ಬದಲಾವಣೆಗೆ ಪ್ರಯತ್ನವನ್ನು ಮಾಡುತ್ತಿದ್ದರು"ಎಂದು ಸಿದ್ದರಾಮಯ್ಯ ಹೇಳಿದರು.

 ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯ ಮೊದಲ ಪ್ರತಿಕ್ರಿಯೆ ಕರ್ನಾಟಕದ ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯ ಮೊದಲ ಪ್ರತಿಕ್ರಿಯೆ

   Virat Kohli, Rohit Sharma ಮತ್ತು Joe Root ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆ | Oneindia Kannada

   ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಂವಿಧಾನದ ಈ ಯಾವ ನಿಯಮಗಳನ್ನು ಪೊಲೀಸ್ ಇಲಾಖೆ ಪಾಲಿಸುತ್ತಿಲ್ಲ. ಬಿಜೆಪಿ ಸರ್ಕಾರ ತಮಗೆ ಬೇಕಾದಂತೆ ಸಂವಿಧಾನದ ನಿಯಮಗಳನ್ನು ತಿರುಚಿಕೊಂಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.

   English summary
   BJP High Command May Not Go For Leadership Change Said Opposition Leader Siddaramaiah.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X