ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರದ ಹೆಚ್ಚಿನ ಪಾಲು ಬಿಜೆಪಿಗೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಸೆಪ್ಟೆಂಬರ್ 03: ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತೆರೆ ಬಿದ್ದಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಿನ ಅಧಿಕಾರದ ಪಾಲನ್ನು ಬಿಜೆಪಿ ಗಿಟ್ಟಿಸಿಕೊಂಡಿದೆ. ಬಾದಾಮಿಯಲ್ಲಿ ಮತದಾರ ಮತ್ತೆ ಸಿದ್ದರಾಮಯ್ಯ ಕೈ ಹಿಡಿದಿದ್ದಾನೆ.

ದಿವಂಗತ ಸಿದ್ದು ನ್ಯಾಮಗೌಡ ಅವರ ಜಮಖಂಡಿ ಕ್ಷೇತ್ರದ ಜಮಖಂಡಿ ನಗರಸಭೆ ಅಧಿಕಾರ ಕಾಂಗ್ರೆಸ್ ಪಾಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಹನ್ನೆರಡು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಅಧಿಕಾರ ಗಿಟ್ಟಿಸುವುದರ ಮೂಲಕ ವಿಧಾನಸಭೆ ಚುನಾವಣೆಯಲ್ಲಿನ ಗೆಲುವಿನ ನಾಗಾಲೋಟವನ್ನು ಮತ್ತೆ ಮುಂದುವರೆಸಿದೆ.

LIVE: ಸ್ಥಳೀಯ ಸಂಸ್ಥೆ ಫಲಿತಾಂಶ: 846 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್LIVE: ಸ್ಥಳೀಯ ಸಂಸ್ಥೆ ಫಲಿತಾಂಶ: 846 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್

ಜಿಲ್ಲೆಯ ಐದು ನಗರಸಭೆ, ಐದು ಪುರಸಭೆ, ಎರಡು ಪಟ್ಟ ಪಂಚಾಯಿತಿಗಳ 312 ವಾರ್ಡ್ ಗಳ ಪೈಕಿ 309 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯದುಂದುಬಿ ಮೊಳಗಿಸಿದೆ.

BJP has bagged more power in Bagalkot district

ಬಾಗಲಕೋಟೆ ನಗರಸಭೆ, ಮುಧೋಳ ನಗರಸಭೆ, ಇಳಕಲ್ ನಗರಸಭೆ, ರಬಕವಿ ಬನಹಟ್ಟಿ ನಗರಸಭೆ ಅಧಿಕಾರ ಬಿಜೆಪಿ ಪಾಲಾದರೆ, ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಜಮಖಂಡಿ ವಿಧಾನಸಭೆ ಕ್ಷೆತ್ರ ವ್ಯಾಪ್ತಿಯ ಜಮಖಂಡಿ ನಗರ ಸಭೆ ಕಾಂಗ್ರೆಸ್ ಪಾಲಾಗಿದೆ.

ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, ಕಾರ್ಕಳ ಅತಂತ್ರ ಫಲಿತಾಂಶಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್, ಕಾರ್ಕಳ ಅತಂತ್ರ ಫಲಿತಾಂಶ

ಇನ್ನು ಬಾದಾಮಿ ಕ್ಷೇತ್ರದ ಮತದಾರರು ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈ ಹಿಡಿದಿದ್ದಾರೆ. ಬಾದಾಮಿ ಕ್ಷೇತ್ರ ವ್ಯಾಪ್ತಿಯ ಬಾದಾಮಿ ಪುರಸಭೆ ಹಾಗೂ ಗುಳೇದಗುಡ್ಡ ಪುರಸಭೆ ಕಾಂಗ್ರೆಸ್ ಪಾಲಾಗಿವೆ. ಕೆರೂರು ಪಟ್ಟಣ ಪಂಚಾಯಿತಿ ಅತಂತ್ರವಾಗಿದೆ.

BJP has bagged more power in Bagalkot district

ಬಾಗಲಕೋಟೆ ಸ್ಥಳೀಯ ಸಂಸ್ಥೆ ಚುನಾವಣೆ ಅಂತಿಮ ಫಲಿತಾಂಶದ ವರದಿ

ಬಾಗಲಕೋಟೆ ನಗರಸಭೆ ಒಟ್ಟು ಸ್ಥಾನ 35
ಬಿಜೆಪಿ-29
ಕಾಂಗ್ರೆಸ್-5
ಪಕ್ಷೇತರ-1

ಮುಧೋಳ ನಗರಸಭೆ ಒಟ್ಟು 31 ಸ್ಥಾನ
ಬಿಜೆಪಿ-16
ಕಾಂಗ್ರೆಸ್-14
ಪಕ್ಷೇತರ-1

ಇಳಕಲ್ ನಗರಸಭೆ ಒಟ್ಟು ಸ್ಥಾನ 31
ಬಿಜೆಪಿ-20
ಕಾಂಗ್ರೆಸ್-8
ಜೆ ಡಿ ಎಸ್-2
ಪಕ್ಷೇತರ-1

ಜಮಖಂಡಿ ನಗರಸಭೆ ಒಟ್ಟು ಸ್ಥಾನ 31

ಬಿಜೆಪಿ-7
ಕಾಂಗ್ರೆಸ್-20
ಪಕ್ಷೇತರ-3
ಪಿಪಿಪಿ-1

ರಬಕವಿಬನಹಟ್ಟಿ ನಗರಸಭೆ ಒಟ್ಟು ಸ್ಥಾನ 31

ಬಿಜೆಪಿ-24
ಕಾಂಗ್ರೆಸ್-5
ಪಕ್ಷೇತರ-2

ಬೀಳಗಿ ಪಂಚಾಯತ್ ಒಟ್ಟು ಸ್ಥಾನ 18

ಬಿಜೆಪಿ-11
ಕಾಂಗ್ರೆಸ್-6
ಪಕ್ಷೇತರ-1

ಹುನಗುಂದ ಪುರಸಭೆ ಒಟ್ಟು ಸ್ಥಾನ 23

ಬಿಜೆಪಿ-8
ಕಾಂಗ್ರೆಸ್-12
ಜೆ ಡಿಎಸ್ -3

ತೇರದಾಳ ಪುರಸಭೆ ಒಟ್ಟು ಸ್ಥಾನ 23

ಬಿಜೆಪಿ -10
ಕಾಂಗ್ರೆಸ್-10
ಪಕ್ಷೇತರ-3

ಕೆರೂರು ಪಂಚಾಯತ್ ಒಟ್ಟು ಸ್ಥಾನ

ಬಿಜೆಪಿ-9
ಕಾಂಗ್ರೆಸ್-6
ಪಕ್ಷೇತರ-5

ಬಾದಾಮಿ ಪುರಸಭೆ ಒಟ್ಟು 23
ಬಿಜೆಪಿ-10
ಕಾಂಗ್ರೆಸ್-13

ಗುಳೇದಗುಡ್ಡ ಪುರಸಭೆ ಒಟ್ಟು ಸ್ಥಾನ 23

ಬಿಜೆಪಿ-2
ಕಾಂಗ್ರೆಸ್-15
ಜೆ ಡಿ ಎಸ್-5
ಪಕ್ಷೇತರ-1 ಅವಿರೋಧ

ಮಹಲಿಂಗಪುರ ಪುರಸಭೆ ಒಟ್ಟು ಸ್ಥಾನ 23

ಬಿಜೆಪಿ-14
ಕಾಂಗ್ರೆಸ್-9

English summary
BJP has bagged more power in Bagalkot district. BJP has won in Bagalkot Municipal Corporation, Mudhol Municipal Corporation, Ilkal Municipal Corporation, Rabakavi Banahatti Municipal Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X