• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಗಲಕೋಟೆ: ಮಳೆ ಬಂದರೆ ಈ ಹತ್ತು ಹಳ್ಳಿ ಜನರ ಸಂಚಾರಕ್ಕೆ ದೋಣಿಯೇ ಗತಿ

By Manjunatha
|
Google Oneindia Kannada News

ಬಾಗಲಕೋಟೆ, ಜುಲೈ 21: ಬಾಗಲಕೋಟೆ-ಬೆಳಗಾವಿ ಸುತ್ತಮುತ್ತ ಭಾರಿ ಮಳೆಯಾದರೆ ಘಟಪ್ರಭೆ ನದಿ ತುಂಬಿ ಹರಿಯುತ್ತದೇ. ನದಿ ತುಂಬಿ ಹರಿದರೆ ಒಂದೆಡೆ ಸಂತಸವಾದರೆ ಇತ್ತ ನದಿಯ ದಡದ ಸಮೀಪ ಇರುವ ಹತ್ತಕ್ಕೂ ಹೆಚ್ಚು ಜನರಿಗೆ ಸಂಕಷ್ಟ ಪ್ರಾರಂಭವಾಗುತ್ತದೆ.

ಕದಾಂಪುರ. ಸಾಳಗೊಂದಿ, ಯಂಕಂಚಿ, ಸಿದ್ನಾಳ, ಸಿಂದಗಿ. ಯಳ್ಳಿಗುತ್ತಿ, ಸೋರಕೊಪ್ಪ ಸೇರಿದಂತೆ ಹತ್ತಾರು ಗ್ರಾಮಗಳು ಘಟಪ್ರಭಾ ನದಿಯ ಸುತ್ತಮುತ್ತ ಇವೆ. ದಿನ ನಿತ್ಯ ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಬಂದು ಹೋಗಲು ಈ ಗ್ರಾಮಸ್ಥರಿಗೆ ಬಂದರು ಮತ್ತು ಒಳನಾಡ ಜಲಸಾರಿಗೆಯ ಬೋಟ್‌ ವ್ಯವಸ್ಥೆಯೇ ಇವರಿಗೆ ಆಶ್ರಯವಾಗಿದೆ.

ಮಂಗಳೂರು: ತೀವ್ರಗೊಂಡ ಕಡಲ್ಕೊರೆತಕ್ಕೆ 14 ಮನೆಗಳು ಧ್ವಂಸಮಂಗಳೂರು: ತೀವ್ರಗೊಂಡ ಕಡಲ್ಕೊರೆತಕ್ಕೆ 14 ಮನೆಗಳು ಧ್ವಂಸ

ಬೇಸಿಗೆ ಕಾಲದಲ್ಲಿ ಸುಮಾರು ಐದು ತಿಂಗಳು ಕಾಲ ಬೋಟ್ ವ್ಯವಸ್ಥೆ ಸ್ಥಗಿತಗೊಂಡಿರುತ್ತದೆ. ಆದರೆ ಮಳೆಗಾಲದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರು ಸಂಗ್ರಹ ವಾಗುವುದರಿಂದ ಸುಮಾರು ಮೂರ್ನಾಲ್ಕು ತಿಂಗಳು ಈ ಗ್ರಾಮದ ಜನರು ಸಂಚಾರಕ್ಕೆ ಬೋಟನ್ನೇ ಆಶ್ರಯಿಸುತ್ತಾರೆ.

ಯಂತ್ರಚಾಲಿತ ಬೋಟ್‌

ಯಂತ್ರಚಾಲಿತ ಬೋಟ್‌

ಯಂತ್ರಚಾಲಿತ ಬೋಟ್‌ ಇಲ್ಲಿ ಇದ್ದು ಇದರಲ್ಲಿ ನಗರಕ್ಕೆ ಬರಲು ಬರೀ ಈ ಗ್ರಾಮಗಳಿಂದ 2 ಕೀ.ಮೀ ಇದೆ.ಪ್ರಯಾಣದ ವೆಚ್ಚವೂ ಸಹ ರೂ.5 ಮಾತ್ರ ತಗಲುತ್ತದೆ. ನದಿಯ‌ಬೋಟ ಮೂಲಕ ಬರದೇ ಸುತ್ತು ಹಾಕಿ ಬಂದರೆ ಸುಮಾರು 30 ಕೀ. 30 ರಿಂದ 40 ರೂ.ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಬಾಗಲಕೋಟೆ ತಲುಪಲು ಖರ್ಚಾಗಲಿದೆ.

ತುಂಗಭದ್ರೆಯಿಂದ ಹರಿದ ಹೆಚ್ಚಿನ ನೀರು, ತೇಲಾಡುತ್ತಿವೆ ಹಂಪಿಯ ಸ್ಮಾರಕಗಳು ತುಂಗಭದ್ರೆಯಿಂದ ಹರಿದ ಹೆಚ್ಚಿನ ನೀರು, ತೇಲಾಡುತ್ತಿವೆ ಹಂಪಿಯ ಸ್ಮಾರಕಗಳು

ಆಲಮಟ್ಟಿ ಜಲಾಶಯದಿಂದ ಸೂರು ಕಳೆದುಕೊಂಡವರು

ಆಲಮಟ್ಟಿ ಜಲಾಶಯದಿಂದ ಸೂರು ಕಳೆದುಕೊಂಡವರು

ಕದಾಂಪುರ, ಸಿಂದಗಿ, ಸಿದ್ನಾಳ, ಗ್ರಾಮಗಳ ಜನರು ಭೂಮಿ ಆಲಮಟ್ಟಿ‌ ಜಲಾಶಯ ನಿರ್ಮಾಣಕ್ಕಾಗಿ ‌ಕಳೆದುಕೊಂಡು ತ್ಯಾಗಿಗಳಾಗಿದ್ದಾರೆ. ಮನೆ ಮಾತ್ರ ಊರುಗಳಲ್ಲಿ ಉಳಿದಿವೆ ಆ ಸಂದರ್ಭದಲ್ಲಿ ಅವರಿಗೆ ಜಮೀನು ಕಳೆದುಕೊಂಡಾಗ ಸರ್ಕಾರ ಪರಿಹಾರ ನೀಡಿದ್ದು ಬಿಡಿಗಾಸು ಮಾತ್ರ.

ಅರ್ಧ ಊರು ಮುಳುಗಡೆ ಆಗಿದೆ

ಅರ್ಧ ಊರು ಮುಳುಗಡೆ ಆಗಿದೆ

ಆದರೆ ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಈಗಾಗಲೇ ಅರ್ಧ ಭಾಗ ಜಮೀನು‌ ಮತ್ತು ಊರುಗಳು ಮುಳುಗಡೆ ಆಗಿವೆ ಆದರೆ 525.256 ಮೀಟರ್‌ ಎತ್ತರಿಸಿದಾಗ ಮಾತ್ರ ಈ ನದಿ ಪಕ್ಕದಲ್ಲಿ ಗ್ರಾಮಗಳು ಸಂಪೂರ್ಣ ಮುಳಗಡೆ ಆಗಲಿವೆ. ಆದರೆ ಈಗಾಗಲೇ ಈ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿಗೆ ಜನರು ಸ್ಥಳಾಂತರಗೊಂಡಿಲ್ಲ.

ಇರುವ ಜಮೀನಿನಲ್ಲೇ ಕೃಷಿ

ಇರುವ ಜಮೀನಿನಲ್ಲೇ ಕೃಷಿ

ತಮ್ಮ ಊರುಗಳಲ್ಲಿಯೇ ಇನ್ನೂ ಅರ್ಧಭಾಗ ಮುಳಗಡೆಯಾಗದೇ ಉಳಿದಿರುವ ಜಮೀನಿನಲ್ಲಿ ಉಳಮೆ ಮಾಡಿಕೊಂಡು ಜಾನುವಾರಗಳನ್ನು ಸಾಕುತ್ತಿದ್ದಾರೆ. ಪುನರ್ವಸತಿಗೆ ಹೋದರೆ ಧನಕರಗಳನ್ನ ಮೇಯಿಸಲು ಅಲ್ಲಿ ನಮಗೆ ಸರಿಯಾದ ವ್ಯವಸ್ಥೆ ಇಲ್ಲ, ಮೇವು ಸಿಗುವುದಿಲ್ಲ ಹೀಗಾಗಿ ಇಲ್ಲಿಯೇ ವಾಸವಾಗಿದ್ದೇವೆ. ನದಿ ತುಂಬಿದಾಗ ಮೂರ್ನಾಲ್ಕು ತಿಂಗಳ ತ್ರಾಸ್ ಆಗತೈತಿ ಮುಂದೆ ಮತ್ತೆ ನಮ್ಮ ಜೀವನ ನಡಿತೈತಿ ಎನ್ನುತ್ತಾರೆ ಗ್ರಾಮಸ್ಥರು.

ಪ್ರತಿನಿತ್ಯ ನೂರಾರು ಜನ ಸಂಚಾರ

ಪ್ರತಿನಿತ್ಯ ನೂರಾರು ಜನ ಸಂಚಾರ

ಹತ್ತಾರು ಗ್ರಾಮಗಳಿಂದ‌ನಿತ್ಯ ಜನರು ವ್ಯಾಪಾರ ಮಾಡಲು, ಸಾಮಾನು ಖರೀದಿಸಲು, ಮಕ್ಕಳು ಶಾಲಾ‌-ಕಾಲೇಜುಗಳಿಗೆ ಹೋಗುತ್ತಾರೆ. ಇವರನ್ನು ಐದು-ಹತ್ತು ನಿಮಿಷದಲ್ಲಿ‌ ಆ‌ ದಡ‌ದಿಂದ ಈ ದಡಕ್ಕೆ ಸುರಕ್ಷಿತವಾಗಿ ತಲುಪಿಸುತ್ತೇನೆ.

ಅದೇ ರೀತಿ ತುರ್ತು ಸಂದರ್ಭದಲ್ಲಿ ಯಾರಿಗಾದರೂ ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕಾದರೆ ಹಾಗೂ‌ ಹೆರಿಗೆ ಮಹಿಳೆಯರು ಆಸ್ಪತ್ರೆಗೆ ‌ಹೋಗುವ ಸಂದರ್ಭ‌ಬಂದಾಗ ನನಗೆ ಗ್ರಾಮಸ್ಥರು ದೂರವಾಣಿ ಕರೆ ಮಾಡಿದರೆ ಹೋಗುತ್ತೇನೆ ಎನ್ನುತ್ತಾರೆ ಬೋಟ್‌ ಚಾಲಕ ಕಲ್ಲಪ್ಪ.

English summary
Bagalkot district's 10 villages people daily use boat for transport. They were all lost half of their villages due to Alamatti dam. When Alamatti dam back water fills they should use boat to transportation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X