ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾದಾಮಿ: ಆಸ್ಟ್ರೇಲಿಯಾ ಪ್ರವಾಸಿ ಮೇಲೆ ಸ್ಥಳೀಯರಿಂದ ಹಲ್ಲೆ

|
Google Oneindia Kannada News

ಬಾಗಲಕೋಟೆ, ನವೆಂಬರ್ 19: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿ ಆಸ್ಟ್ರೇಲಿಯಾದ ಪ್ರವಾಸಿಗ ವಿಲಿಯಮ್ಸ್ ಕೆರಿಯನ್ ಜೇಮ್ಸ್ ಎಂಬುವವರ ಮೇಲೆ ಸೋಮವಾರ ರಾತ್ರಿ ತೀವ್ರ ಹಲ್ಲೆ ಮಾಡಲಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಲಿಯಮ್ಸ್ (35) ಅವರ ಕೈ,ಕಾಲುಗಳನ್ನು ಕಟ್ಟಿ ಹಲ್ಲೆ ನಡೆಸಲಾಗಿದೆ. ಆಸ್ಪತ್ರೆಗೆ ಕರೆತಂದಾಗಲೂ ಅವರು ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿಯೇ ಇದ್ದರು. ಹಲ್ಲೆಯಿಂದ ಅವರಿಗೆ ಗಂಭೀರ ಗಾಯಗಳಾಗಿವೆ. ಆದರೆ ಹಲ್ಲೆ ನಡೆಸಿದ್ದು ಯಾರು ಮತ್ತು ಅದಕ್ಕೆ ಕಾರಣಗಳೇನು ಎಂಬುದು ಗೊತ್ತಾಗಿಲ್ಲ.

Australia Tourist Attacked In A Village Of Badami Bagalkot

ವಿಲಿಯಮ್ಸ್ ಆಸ್ಟ್ರೇಲಿಯಾದ ಮೆಲ್ಬರ್ನ್ ನಿವಾಸಿಯಾಗಿದ್ದಾರೆ. ಅವರು ಬಾದಾಮಿಯಲ್ಲಿನ ಪುರಾತನ ಸ್ಮಾರಕಗಳನ್ನು ವೀಕ್ಷಿಸಲು ಬಂದಿದ್ದಾರೆ. ಸೋಮವಾರ ರಾತ್ರಿ ಬಾದಾಮಿಯಿಂದ 15 ಕಿ.ಮೀ. ದೂರದಲ್ಲಿರುವ ಕೊಂಕಣಕೊಪ್ಪ ಗ್ರಾಮಕ್ಕೆ ನಡೆದುಕೊಂಡೇ ಹೋಗಿದ್ದರು. ಗ್ರಾಮದ ಕೆಲವೆಡೆ ಅವರು ಓಡಾಡುತ್ತಿದ್ದಾಗ ಅನುಮಾನಗೊಂಡ ಸ್ಥಳೀಯರು ವಿಚಾರಿಸಿದ್ದಾರೆ. ಆದರೆ ಭಾಷೆಯ ತೊಡಕಿನಿಂದ ವಿಲಿಯಮ್ಸ್ ಅವರ ಕುರಿತು ಜನರು ತಪ್ಪಾಗಿ ಗ್ರಹಿಸಿಕೊಂಡು ಹಲ್ಲೆ ನಡೆಸಿರಬಹುದು.

ಬೆಳಗಾವಿಯಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಚಾಲಕನಿಂದ ಹಲ್ಲೆಬೆಳಗಾವಿಯಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಚಾಲಕನಿಂದ ಹಲ್ಲೆ

ಮದ್ಯಪಾನ ಮಾಡಿದ್ದ ಅವರು ಅದರ ಅಮಲಿನಲ್ಲಿ ಅಲ್ಲಿನ ಮನೆಗಳಿಗೆ ತೆರಳಿ ಜನರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಜನರು ಸಿಟ್ಟಿಗೆದ್ದು ಹಲ್ಲೆ ಮಾಡಿರಬಹುದು ಎನ್ನಲಾಗಿದೆ. ವಿಲಿಯಮ್ಸ್ ಅವರು ಮಕ್ಕಳ ಕಳ್ಳ ಇರಬಹುದು ಎಂಬ ಅನುಮಾನದಲ್ಲಿ ಸ್ಥಳೀಯರು ಹಲ್ಲೆ ನಡೆಸಿರುವ ಸಾಧ್ಯತೆ ಕೂಡ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರಿಗೆ ಬಾದಾಮಿಯ ಯಾವುದೇ ಹೋಟೆಲ್‌ನಲ್ಲಿ ವಿಲಿಯಮ್ಸ್ ಎಂಬ ಹೆಸರಿನ ವಿದೇಶಿಯರು ವಾಸ್ತವ್ಯ ಹೂಡಿರದಿರುವುದು ಕಂಡುಬಂದಿದೆ. ಹೀಗಾಗಿ ಬಾಗಲಕೋಟೆಯ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ವಿಲಿಯಮ್ಸ್ ಅವರಿಗೆ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
An Australian tourist was attacked by villagers in Badami Taluq on Monday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X