ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಣ್ಣಾ ಹೋರಾಟ ಬೆಂಬಲಿಸಿ ಬಾಗಲಕೋಟೆಯಲ್ಲಿ ಸತ್ಯಾಗ್ರಹ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಮಾರ್ಚ್ 23: ಈಗಾಗಲೇ ಅನುಮೋದನೆಗೊಂಡ ಲೋಕಪಾಲ,ಲೋಕಾಯುಕ್ತ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಅಣ್ಣಾ ಹಜಾರೆಯವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಅಣ್ಣಾ ಬೆಂಬಲಿಗರು ಬಾಗಲಕೋಟೆಯ ಜಿಲ್ಲಾ ಆಡಳಿತ ಭವನದ ಎದುರು ಸತ್ಯಾಗ್ರಹ ನಡೆಸುತ್ತಿದ್ದಾರೆ.

ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿರುವ ಅಣ್ಣಾ ಬೆಂಬಲಿಗರು ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

Anna Hazare Hunger Strike for Lokpal gets support from Bagalkot
ಲೋಕಪಾಲ ಕಾನೂನಿನ ಕಾಲಂ 63 ಹಾಗೂ ಕಾಲಂ 44ಗಳನ್ನು ದುರ್ಬಲಗೊಳಿಸುವ ತಿದ್ದುಪಡಿ ರದ್ದಾಗಬೇಕು.ಮತಪತ್ರಗಳಲ್ಲಿ ಅಭ್ಯರ್ಥಿಗಳ ವರ್ಣಚಿತ್ರವನ್ನು ಅವರ ಚುನಾವಣಾ ಚಿಹ್ನೆಯಾಗಿ ಮಾಡಬೇಕು.ಮತಗಳ ಎಣಿಕೆಗೆ ಟೋಟಲೈಜರ್ ಯಂತ್ರಗಳನ್ನು ಉಪಯೋಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೃಷಿ ಇಳುವರಿಗೆ ಖರ್ಚುವೆಚ್ಚ ಮೌಲ್ಯ ಆಧರಿಸಿ ಶೇ.50 ರಷ್ಟು ಬೆಂಬಲ ಬೆಲೆ ದೊರಕುವಂತಾಗಬೇಕು. 60 ವಯಸ್ಸಿನ ರೈತರಿಗೆ ಹಾಗೂ ಬಲಹೀನರಿಗೆ ರೂ.500 ಮಾಸಾಶಾನ ಪಿಂಚಣಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿರುವ ಮನವಿಯನ್ನು ಜಿಲ್ಲಾ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಿಸಲಾಯಿತು.

English summary
Anna Hazare launched an indefinite hunger strike against the Centre for setting up of Lokpal, at Ramlila Maidan today. Anna supporters in Bagalkot also staging strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X