ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: ಸಹಾಯಕ ಎಂಜಿನಿಯರ್ ಮನೆ-ಕಚೇರಿ ಮೇಲೆ ಎಸಿಬಿ ದಾಳಿ

By Manjunatha
|
Google Oneindia Kannada News

ಬೆಂಗಳೂರು, ಜುಲೈ 6: ಭ್ರಷ್ಟಾಚಾರ ನಿಗ್ರಹ ದಳವು ಬಾಗಲಕೋಟೆಯ ನೀರಾವರಿ ನಿಗಮದ ಸಹಾಯಕ ಎಂಜಿಯರ್ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ-ಹಣವನ್ನು ಪತ್ತೆ ಹಚ್ಚಿದೆ.

ಶಿವಲಿಂಗಪ್ಪ ಬಸ್ಪಪ್ಪ ಹಡಗಲಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಎಲೆಕ್ಟ್ರಿಕಲ್ ಸಬ್-ಡಿವಿಷನ್ ಕರ್ನಾಟಕ ನೀರಾವರಿ ನಿಗಮ, ಸವದತ್ತಿ ರವರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದೆ.

ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳುಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳು

ಬಾಗಲಕೋಟೆ ನವನಗರದಲ್ಲಿ 1 ವಾಸದ ಮನೆ & 1 ನಿವೇಶನ ಹಾಗೂ ಯರಗಟ್ಟಿ ಗ್ರಾಮದಲ್ಲಿ 1 ಮನೆ ಮತ್ತು 4 ನಿವೇಶನ, ಮುಟಗಾ, ಬೈಲಹೊಂಗಲ & ಬಸವನಕುಡಚಿ ಗ್ರಾಮದಲ್ಲಿ 1 ನಿವೇಶನ, ತೋಂಡಿಹಾಳ & ಇಳಕಲ್‌ನಲ್ಲಿ 2 ಪ್ಲಾಟ್‌ಗಳು ಮತ್ತು ಸವದತ್ತಿಯ ವಿವಿಧ ಸರ್ವೆ ನಂಬರುಗಳಲ್ಲಿ 38 ಎಕರೆ ಕೃಷಿ ಜಮೀನು, ಚಿನ್ನ 276 ಗ್ರಾಂ, ಬೆಳ್ಳಿ 832 ಗ್ರಾಂ, 1 ಮಹಿಂದ್ರಾ ಟಿಯುವಿ-300 ಜೀಪ್, 2 ದ್ವಿಚಕ್ರ ವಾಹನ, ನಗದು ₹ 55 ಸಾವಿರ ಹಾಗೂ ಬ್ಯಾಂಕ್ ಖಾತೆಯಲ್ಲಿ ₹ 39.88 ಲಕ್ಷ ಮತ್ತು ₹ 2 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿರುತ್ತದೆ.

ACB raid on Bagalakote water department assistant engineer

ತನಿಖೆ ಮುಂದುವರೆದಿದ್ದು, ಆರೋಪಿತ ಸರ್ಕಾರಿ ನೌಕರನು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

English summary
ACB raid on Bagalakote water department assistant engineer and seize many mileage property and money. ACB yesterday also raid many officers in different district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X