• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯರ ಮಂತ್ರಾಕ್ಷತೆಯಾಯ್ತು ರತ್ನಖಚಿತ ಸಾಲಿಗ್ರಾಮ! ಬಾಗಲಕೋಟೆಯಲ್ಲಿ ಈ ಪವಾಡ ನಡೆದದ್ದು ಹೇಗೆ?

|
   Bagalkot : ಬಾಗಲಕೋಟೆಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡ | Oneindia Kannada

   ಬಾಗಲಕೋಟೆ, ನವೆಂಬರ್.29: ಎಲ್ಲರಿಗೂ ಒಲಿಯುವ ರಾಘವೇಂದ್ರ ಸ್ವಾಮಿಗಳಿಂದ ಬಾಗಲಕೋಟೆಯಲ್ಲಿ ಅಚ್ಚರಿಯ ಪವಾಡವೊಂದು ನಡೆದಿದ್ದು, ರಾಯರ ಮಂತ್ರಾಕ್ಷತೆ 10 ಸಾಲಿಗ್ರಾಮಗಳಾಗಿ ಪರಿವರ್ತನೆಯಾದ ಘಟನೆ ಜರುಗಿದೆ.

   ಹೌದು, ಬಾಗಲಕೋಟೆಯ ವಿದ್ಯಾಗಿರಿ 12ನೇ ಕ್ರಾಸ್ ನಲ್ಲಿ ಪ್ರಲ್ಹಾದ ಸೀಮಿಕೆರಿ ಎಂಬುವವರು ಕಳೆದ 6 ತಿಂಗಳ ಕೆಳಗಷ್ಟೇ ಮಂತ್ರಾಲಯದಿಂದ ತಂದ ಪ್ರಸಾದವು ಸಾಲಿಗ್ರಾಮವಾಗಿ ಪರಿವರ್ತನೆಯಾಗಿದೆ.

   ನಾಗಪಾತ್ರಿ ನಾಗರಾಜ್ ಭಟ್ ಗೆ ಪ್ರೊ.ನರೇಂದ್ರ ನಾಯಕ್ ಹಾಕಿದ ಸವಾಲೇನು?

   ವರ್ಷಕ್ಕೆ ಎರಡು ಬಾರಿಯಂತೆ ಮಂತ್ರಾಲಯಕ್ಕೆ ತೆರಳುವ ಪ್ರಲ್ಹಾದ್ ಸೀಮಿಕೆರಿಯವರು ಕಳೆದ 6 ತಿಂಗಳ ಹಿಂದೆ ಕುಟುಂಬಸ್ಥರೊಂದಿಗೆ ಮಂತ್ರಾಲಯಕ್ಕೆ ತೆರಳಿದ್ದರು. ಹೀಗೆ ಅಲ್ಲಿಂದ ತಂದ ಮಂತ್ರಾಕ್ಷತೆಯನ್ನು ಮನೆಯ ಅಡುಗೆ ಮನೆಯ ಸ್ಟೋರ್ ರೂಂ ಒಂದರಲ್ಲಿ ಇರಿಸಿದ್ದರು.

   ಎಂದಿನಂತೆ ಮನೆಯನ್ನು ಸ್ವಚ್ಛಗೊಳಿಸಬೇಕಾದಾಗ ಈ ಮಂತ್ರಾಕ್ಷತೆಯನ್ನು ಒಂದು ಕವರ್ ನಲ್ಲಿ ಹಾಕಿ ಗಿಡಕ್ಕೆ ಹಾಕಿ ಬಿಡೋಣವೆಂದು ರಾತ್ರಿ ಕಟ್ಟಿಟ್ಟಿದ್ದಾರೆ. ಮಾರನೇ ದಿನ ಬೆಳಗ್ಗೆ ತೆಗೆದು ನೋಡಿದಾಗ ಒಟ್ಟು ಹತ್ತು ಸಾಲಿಗ್ರಾಮಗಳು ಪತ್ತೆಯಾಗಿದೆ.

   ಇದನ್ನು ನೋಡಿದ ಬಳಿಕ ಇದು ಸಾಲಿಗ್ರಾಮವೋ ಅಥವಾ ಇಲ್ಲವೋ ಎಂದು ಅನುಮಾನಗೊಂಡ ಪ್ರಲ್ಹಾದ ಹಾಗೂ ಅವರ ಕುಟುಂಬಸ್ಥರಾದ ಸುಧೀಂದ್ರ ಅವರು ಖಚಿತಪಡಿಸಿಕೊಳ್ಳಲು ಮಂತ್ರಾಲಯಕ್ಕೆ ತೆರಳಿದ್ದರು. ಆಗ ರಾಘವೇಂದ್ರ ಮಠದ ಶ್ರೀಗಳಾದ ಸುಭುದೇಂದ್ರ ತೀರ್ಥ ಸ್ವಾಮೀಜಿ ಅವರು ಅದು ಸಾಲಿಗ್ರಾಮ ಎಂದು ಖಚಿತಪಡಿಸಿದರು ಎಂದು ಹೇಳಿದ್ದಾರೆ.

   ಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನ

   ಹತ್ತು ಸಾಲಿಗ್ರಾಮದಲ್ಲಿ ಐದು ಸಾಲಿಗ್ರಾಮಗಳನ್ನು ಶ್ರೀಮಠದಲ್ಲಿ ದಿನನಿತ್ಯದ ಪೂಜೆಗಾಗಿ ಸೀಮಿಕೇರಿ ಕುಟುಂಬದವರು ವಿಧಿವಿಧಾನಗಳ ಮೂಲಕ ಸಮರ್ಪಣೆ ಮಾಡಿದ್ದು, ಉಳಿದ ಐದು ಸಾಲಿಗ್ರಾಮವನ್ನು ಮನೆಗೆ ಮರಳಿ ತಂದಿದ್ದಾರೆ.

    ಹರಿದು ಬರುತ್ತಿದೆ ಭಕ್ತರ ದಂಡು

   ಹರಿದು ಬರುತ್ತಿದೆ ಭಕ್ತರ ದಂಡು

   ಇನ್ನು ಈ ಪವಾಡ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರವಾಗುತ್ತಿದ್ದಂತೆ ಪ್ರಲ್ಹಾದ ಸೀಮಿಕೆರಿ ಅವರ ನಿವಾಸಕ್ಕೆ ಸಾಲಿಗ್ರಾಮ ಕಣ್ತುಂಬಿಕೊಳ್ಳಲು ಭಕ್ತರ ದಂಡು ಆಗಮಿಸುತ್ತಿದೆ. ಕೆಲವರು ಇದು ಪವಾಡವೋ ಅಥವಾ ಸುಳ್ಳೋ ಎಂದು ಅನುಮಾನಿಸಿ ಪ್ರಶ್ನಿಸುತ್ತಿದ್ದಾರೆ ಕೂಡ.

    ಈ ತೆರನಾದ ಘಟನೆ ಮೊದಲಲ್ಲ

   ಈ ತೆರನಾದ ಘಟನೆ ಮೊದಲಲ್ಲ

   ಈ ಕುರಿತಾಗಿ ಒನ್ ಇಂಡಿಯಾದೊಂದಿಗೆ ಮಾತನಾಡಿದ ಪ್ರಲ್ಹಾದ್, ನಮ್ಮ ಮನೆಯಲ್ಲಿ ಈ ತೆರನಾದ ಘಟನೆ ಇದು ಮೊದಲಲ್ಲ. ಈ ಹಿಂದೆ ನಮ್ಮ ಮನೆಯ ಹಿಂಭಾಗದಲ್ಲಿ ಕಲ್ಲಿನಲ್ಲಿ ಹನುಮಂತ ದೇವರು ಮೂಡಿದ್ದ. ನಾವು ದೈವ ಭಕ್ತರು. ದಿನನಿತ್ಯ ಪೂಜೆ , ನೈವೇದ್ಯ ಎಲ್ಲವೂ ನಡೆಯುತ್ತದೆ. ನಮ್ಮ ದೈವಭಕ್ತಿಗೆ ಮೆಚ್ಚಿ ರಾಯರೇ ನಮಗೆ ನೀಡಿರುವ ವರ ಇದು.

   ಇಂದು ಶುಭದಿನ. ರಾಘವೇಂದ್ರರ ವಾರವಾದ ಕಾರಣ ಈ ವಿಚಾರವನ್ನು ತಿಳಿಸಿದ್ದೇನೆ. ಸಾಮಾನ್ಯ ಸಾಲಿಗ್ರಾಮ ಎಲ್ಲಾ ಕಡೆ ಸಿಗುತ್ತದೆ. ಆದರೆ ನಮ್ಮ ಮನೆಯಲ್ಲಿ ಒಡಮೂಡಿರುವುದು ಎಲ್ಲವೂ ರತ್ನಖಚಿತ ಸಾಲಿಗ್ರಾಮ. ಇದು ಯಾರ ಬಳಿಯೂ ಸಿಗುವುದಿಲ್ಲ. ನಾವು ಸುಳ್ಳು ಹೇಳಿ ಯಾವ ಪ್ರಚಾರವನ್ನು ಪಡೆಯಬೇಕಿಲ್ಲ. ಇದು ಸತ್ಯ ಎಂದರು.

   ಬರದನಾಡಲ್ಲಿ ಉಕ್ಕಿದ ಜಲ, ಸೋಮೇಶ್ವರ ಸ್ವಾಮಿಯ ಶಕ್ತಿಗೆ ಉಘೇ ಎಂದ ಭಕ್ತರು

    ಸಾಲಿಗ್ರಾಮ ಎಂದರೇನು?

   ಸಾಲಿಗ್ರಾಮ ಎಂದರೇನು?

   ಭೂಮಿಯ ಮೇಲೆ ಕೋಟ್ಯಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಇದೆ. ಶಿಲಾರೂಪದ ವಿಷ್ಣುವೇ ಸಾಲಿಗ್ರಾಮ. ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ಸ್ವತಃ ದೇವರ ಎದುರು ಪೂಜೆ ಮಾಡಿದ ಸಮಾನ ಎಂಬ ನಂಬಿಕೆ ಇದೆ.

   ನೇಪಾಳದ ಮಸ್ತಾಂಗ್, ಹಿಮಾಲಯ ಪರ್ವತದ ತಪ್ಪಲಲ್ಲಿ ಹರಿಯುವ ಕಾಲಿ-ಗಂಡಕಿ ನದಿ ಸಮೀಪ ಶಾಲಗ್ರಾಮ ಎಂಬ ಸ್ಥಳ ಇದೆ. ಅಲ್ಲಿ ಈ ಕಲ್ಲು ಸಾಲಿಗ್ರಾಮದ ರೂಪ ಪಡೆಯುತ್ತದಂತೆ. ಹೀಗಾಗಿ ಆ ಪ್ರದೇಶವನ್ನು ಶಾಲಗ್ರಾಮ ಶಿಲಾ ಎಂದು ಕರೆಯಲಾಗುತ್ತದೆ. ಗಂಡಕಿ ನದಿಯ ಗರ್ಭದಲ್ಲಿ ಸಾಲಿಗ್ರಾಮ ಶಿಲೆ ಯಥೇಚ್ಛವಾಗಿ ದೊರೆಯುತ್ತದೆ.

    ವಜ್ರ ಕೀಟ ಹುಳುವಿಗೆ ಆಶ್ರಯ ತಾಣ

   ವಜ್ರ ಕೀಟ ಹುಳುವಿಗೆ ಆಶ್ರಯ ತಾಣ

   ಹಿಂದುಗಳ ಸಂಪ್ರದಾಯದಂತೆ ಈ ಕಲ್ಲು ವಜ್ರ ಕೀಟ ಎಂಬ ಹುಳುವಿಗೆ ಆಶ್ರಯ ತಾಣ. ವಜ್ರದ ಹಲ್ಲು ಹೊಂದಿರುವ ಈ ಕೀಟ ಕಲ್ಲಿಗೆ ಒಂದು ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ. ಒಳಗೆ ತನ್ನ ಹಲ್ಲುಗಳಿಂದ ಕೊರೆಯುವುದರಿಂದ ಚಕ್ರದ ರೀತಿಯ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪತ್ತಿಯಾಗುತ್ತದೆ. ಇದುವೇ ಅಸಲಿ ಸಾಲಿಗ್ರಾಮ ಎಂದು ಹೇಳಲಾಗುತ್ತದೆ.

   English summary
   A miracle happened at Prahlad Semikeri home in Bagalkot district. Read a detailed article about this.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more