ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆಯಿಂದ ಬಾಂಗ್ಲಾಗೆ ಮೆಕ್ಕೆಜೋಳ ರಫ್ತು

|
Google Oneindia Kannada News

ಬಾಗಲಕೋಟೆ, ನವೆಂಬರ್ 20 : ಕರ್ನಾಟಕದಿಂದ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತು ಮಾಡಲಾಗಿದೆ. 2500 ಟನ್ ಮೆಕ್ಕೆಜೋಳ ಹೊತ್ತ ರೈಲು ಬಾಗಲಕೋಟೆಯಿಂದ ಸಂಚಾರವನ್ನು ಆರಂಭಿಸಿದೆ.

ಕರ್ನಾಟಕದಿಂದ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತು ಮಾಡಲಾಗಿದೆ. 42 ಬೋಗಿಗಳನ್ನು ಹೊಂದಿದ್ದ ರೈಲಿಗೆ ಶುಕ್ರವಾರ ಪೂಜೆ ಸಲ್ಲಿಸಿ ಕಳುಹಿಸಿಕೊಡಲಾಯಿತು.

ಬಳ್ಳಾರಿಯಲ್ಲಿ ಸತತ ಮಳೆಗೆ ಮೆಕ್ಕೆಜೋಳ ಬೆಳೆ ಮೊಳಕೆಯೊಡೆದು ಹಾನಿಬಳ್ಳಾರಿಯಲ್ಲಿ ಸತತ ಮಳೆಗೆ ಮೆಕ್ಕೆಜೋಳ ಬೆಳೆ ಮೊಳಕೆಯೊಡೆದು ಹಾನಿ

ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ, ವಿಜಯಪುರ ಜಿಲ್ಲೆಗಳ ರೈತರಿಂದ 2500 ಟನ್ ಮೆಕ್ಕೆಜೋಳ ಖರೀದಿ ಮಾಡಲಾಗಿದೆ. ಪ್ರತಿ ಕ್ವಿಂಟಾಲ್‌ಗೆ 1400 ರಿಂದ 1450 ರೂ. ದರವನ್ನು ನೀಡಲಾಗಿದೆ.

ದಾವಣಗೆರೆ; ಮೆಕ್ಕೆಜೋಳ, ಅಡಿಕೆ ಖರೀದಿ ಕೇಂದ್ರ ಇನ್ನೂ ತೆರೆದಿಲ್ಲದಾವಣಗೆರೆ; ಮೆಕ್ಕೆಜೋಳ, ಅಡಿಕೆ ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ

 2500 Ton Maize Export From Bagalkot To Bangladesh

2010ರಿಂದ ಹಡಗುಗಳ ಮೂಲಕ ಬೇರೆ ಬೇರೆ ದೇಶಗಳಿಗೆ ಮೆಕ್ಕೆಜೋಳ ರಫ್ತು ಮಾಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ರಫ್ತು ಸ್ಥಗಿತವಾಗಿತ್ತು. ವಿದೇಶದಲ್ಲಿಯೇ ಮೆಕ್ಕೆಜೋಳಕ್ಕೆ ಬೇಡಿಕೆ ಕಡಿಮೆಯಾಗಿತ್ತು.

ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳು ಹತೋಟಿಗೆ ಸಲಹೆಗಳು ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳು ಹತೋಟಿಗೆ ಸಲಹೆಗಳು

Recommended Video

Corona ಲಸಿಕೆ ಪೂರೈಸಲು ಮಾಸ್ಟರ್ ಪ್ಲಾನ್ ಮಾಡಿದ Modi | Oneindia Kannada

ಈ ಬಾರಿ ಪುನಃ ಬೇಡಿಕೆ ಹೆಚ್ಚಿದ್ದು 2500 ಟನ್ ಕಳುಹಿಸಲಾಗಿದೆ. ಈ ವರ್ಷದ ಹಂಗಾಮಿನಲ್ಲಿ 1 ಲಕ್ಷ ಟನ್ ರಫ್ತು ಮಾಡುವ ಗುರಿಯನ್ನು ಹೊಂದಲಾಗಿದೆ. ಬಾಗಲಕೋಟೆ ವರ್ತರು ವಿಯೆಟ್ನಾಂ, ಇಂಡೋನೇಷಿಯಾ ದೇಶಗಳಿಗೂ ಮೆಕ್ಕೆಜೋಳ ರಫ್ತು ಮಾಡುವ ಆಲೋಚನೆಯಲ್ಲಿದ್ದಾರೆ.

English summary
For the first time 2500 ton of Maize export from Karnataka's Bagalkot to Bangladesh via railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X