ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಳಕಲ್‌ನಲ್ಲಿ ಗಮನ ಸೆಳೆದ 20 ಅಡಿ ವಾಟರ್‌ ಬಾಟಲ್‌ ಗಣೇಶ ಮೂರ್ತಿ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್‌, 31: ಇಳಕಲ್‌ ನಗರದ ಜೋಶಿ ಗಲ್ಲಿಯಲ್ಲಿರುವ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯರ್ಥಿಗಳು ಪ್ರತಿ ವರ್ಷವೂ ವಿವಿಧ ರೂಪದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ಹೊಸತನ್ನೇ ಹುಡುಕುವ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಈ ಬಾರಿ ವಾಟರ್‌ ಬಾಟಲ್‌ಗಳಲ್ಲಿ 20 ಅಡಿಯ ಗಣೇಶ ಮೂರ್ತಿ ನಿರ್ಮಿಸಿ ಗಮನ ಸೆಳೆದಿದ್ದಾರೆ. ಕಳೆದ 30 ವರ್ಷಗಳಿಂದಲೂ ಗಣೇಶ ಹಬ್ಬಕ್ಕೆಂದು ವಿವಿಧ ರೂಪದಲ್ಲಿ ಕಲಾಕೃತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸೊಗಡನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ರೀತಿ ಈ ಬಾರಿ ನಿರುಪಯುಕ್ತ ವಸ್ತುಗಳಿಂದ ತಯಾರಿಸಿದ ಗಣೇಶನ ಮೂರ್ತಿ ಗಮನ ಸೆಳೆದಿದೆ.

ವಾಟರ್‌ ಬಾಟಲ್‌ಗಳಿಂದ ಗಣೇಶ ಮೂರ್ತಿ ತಯಾರಿಕೆ

ಇದನ್ನು ಅನೇಕ ದಿನಗಳ ಕಾಲ ಸಾರ್ವಜನಿಕರ ವಿಕ್ಷಣೆಗೆ ಇಡಲಾಗುತ್ತದೆ. ಈ ವರ್ಷದ ವಾಟರ್‌ ಬಾಟಲ್‌ಗಳಲ್ಲಿ ತಯಾರಿಸಿದ 20 ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಬೀದಿ ಬದಿ, ಡಾಬಾಗಳು, ಹೊಟೆಲ್‌ಗಳಿಂದ ಸಾವಿರಾರು ನೀರಿನ ಬಾಟಲಿಗಳನ್ನು ಸಂಗ್ರಹಿಸಲಾಗಿತ್ತು. ಕಲಾ ಶಾಲೆಯ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಬಾಟಲಿಗಳನ್ನು ಸಂಗ್ರಹಿಸಿ ಅವುಗಳನ್ನು ಸ್ವಚ್ಚಗೊಳಿಸಿ ಗಣೇಶ ಮೂರ್ತಿಯನ್ನು ನಿರ್ಮಿಸಿದ್ದಾರೆ.

ಚಿಕ್ಕಮಗಳೂರು: ಜಾತಿ, ಧರ್ಮ ಪಕ್ಕಕ್ಕಿಟ್ಟು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಮಹಿಳೆಚಿಕ್ಕಮಗಳೂರು: ಜಾತಿ, ಧರ್ಮ ಪಕ್ಕಕ್ಕಿಟ್ಟು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ಮಹಿಳೆ

ಈಗಾಗಲೇ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು. ಅದೇ ವಾಟರ್‌ ಬಾಟಲ್‌ಗಳನ್ನು ಬಳಸಿ ಗಣೇಶವನ್ನು ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಅದರಲ್ಲಿಯೂ ಗಣೇಶನ ಮೂಲಕವೇ ಪ್ಲಾಸ್ಟಿಕ್‌ ನಿಷೇಧದ ಬಗ್ಗೆಯೂ ಸಂದೇಶ ಮೂಡಿಸಿದ್ದಾರೆ. ಎಲ್ಲರಿಗೂ ತನ್ನ ನಾಲ್ಕು ಕೈಗಳಿಂದ ಹೊಲಿದ ಕೈಚಿಲಗಳನ್ನು ನೀಡುವಂತೆ ಗಣೇಶ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ.

20 feet water bottle Ganesh idol attracted attention in Ilakal

ಪ್ಲಾಸ್ಟಿಕ್‌ ಬಾಟಲ್‌ಗಳಲ್ಲಿ ಮೂಡಿಬಂದ ಗಣಪ

ಪ್ರಾಚಾರ್ಯ ಡಾ. ಬಸವರಾಜ ಗವಿಮಠ ಅವರ ಮಾರ್ಗದರ್ಶನದಲ್ಲಿ ಉಪನ್ಯಾಸಕರಾದ ಎಂ.ಬಿ.ಬಡಿಗೇರ, ಸಿದ್ದು ಹಿರೇಮಠ ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಸತತ 10 ದಿನಗಳಿಂದ ಶ್ರಮವಹಿಸಿ ಈ ಮೂರ್ತಿಯನ್ನು ಮಾಡಲಾಗಿದ್ದು, ನಗರದ ಜೋಶಿ ಗಲ್ಲಿಯ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ ಇದನ್ನು ಪ್ರತಿಷ್ಠಾಪಿಸಲಾಗಿದೆ.

20 feet water bottle Ganesh idol attracted attention in Ilakal

ವಿಜಯ ಚಿತ್ರಕಲಾ ಮಹಾವಿದ್ಯಾಲಯವು ಗ್ರಾನೈಟ್‌ ಗಣಪ, ಗ್ಯಾರೇಜ್‌ ಗಣಪ, ಬಳೆಚೂರು ಗಣಪ, ನ್ಯೂಸ್‌ ಪೇಪರ್‌ ಗಣಪ, ಸ್ವದೇಶಿ ಕಡ್ಡಿಪಟ್ಟಣ ಗಣಪ, ಸಂತ್ರಸ್ಥರ ರಕ್ಷಿಸುವ ಗಣಪ, ಓಜೋನ್‌ ಗಣೇಶ ಸೇರಿದಂತೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಲವು ರೂಪದಲ್ಲಿ ಗಣೇಶ ಮೂರ್ತಿಯನ್ನು ನಿರ್ಮಿಸುತ್ತಾ ಬಂದಿದ್ದಾರೆ. ವಿಜಯ ಚಿತ್ರಕಲಾ ಮಹಾವಿದ್ಯಾಲದ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಅದೇ ರೀತಿ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಸಹ ನಟ ಡಾ.ಪುನೀತ್ ರಾಜ್‌ಮಾರ್ ಅವರ ಹೆಗಲ ಮೇಲೆ ಕೈಹಾಕಿ ನಿಂತಿರುವ ಗಣೇಶನ ಮೂರ್ತಿ ಗಮನ ಸೆಳೆದಿದೆ.ತರೀಕೆರೆ ಪಟ್ಟಣದ ಕುಂಬಾರ ಬೀದಿಯಲ್ಲಿ ಹತ್ತಾರು ವರ್ಷಗಳಿಂದ ವಿವಿಧ ರೀತಿಯಯಲ್ಲಿ ಗಣಪತಿ ಮೂರ್ತಿಯನ್ನು ತಯಾರು ಮಾಡುತ್ತಿದ್ದಾರೆ. ಈ ವರ್ಷ ಪುನೀತ್ ಅಗಲಿಕೆಯಿಂದ ಅವರ ಅಭಿಮಾನಿ ಆದ ಕಲಾವಿದ ಚಂದ್ರು ಹಾಗೂ ಪ್ರಸನ್ನ ಎಂಬುವವರು ಈ ಅದ್ಭುತ ಮೂರ್ತಿಯನ್ನು ನಿರ್ಮಿಸಿದ್ದಾರೆ.

ತರೀಕೆರೆ ಪಟ್ಟಣದ ಮೋಹಿತ್ ಕುಮಾರ್ ಎಂಬುವವರು ಈ ಗಣೇಶ ಮೂರ್ತಿಯನ್ನು ಹೇಳಿ ಮಾಡಿಸಿದ್ದಾರೆ. ಗಣೇಶನ ಜೊತೆ ಪುನೀತ್ ರಾಜ್‌ಕುಮಾರ್ ನಿಂತಿದ್ದು, ಈ ಮೂರ್ತಿಗೆ ಬೇಡಿಕೆಯೂ ಹೆಚ್ಚಾಗಿತ್ತು. ಯುವಕರು ಈ ಮೂರ್ತಿ ನಮಗೆ ಬೇಕು ಎಂದು ಮೂರ್ತಿ ತಯಾರಕರ ಬಳಿ ಪಟ್ಟು ಹಿಡಿದಿದ್ದರು. ಸುಮಾರು 10 ಸಾವಿರ ರೂಪಾಯಿ ಮೌಲ್ಯದ ಈ ಗಣಪತಿಗೆ ಮೋಹಿತ್ ಕುಮಾರ್ ಅವರು ಮುಂಗಡ ಹಣವನ್ನು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಯುವಕರು 15-20 ಸಾವಿರ ರೂಪಾಯಿ ಕೊಡುತ್ತೇವೆ ಈ ಮೂರ್ತಿಯನ್ನು ನಮಗೆ ಕೊಡಿ ಎಂದು ಒತ್ತಾಯಿಸಿದ್ದರು. ಆದರೆ ಚಂದ್ರು ಅವರು ಇದನ್ನು ಯಾರಿಗೂ ನೀಡಿಲ್ಲ. ಹಾಗೆಯೇ ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ರೂಪದಲ್ಲಿ ಗಣೇಶ ಮೂರ್ತಿಗಳು ಗಮನ ಸೆಳೆದಿವೆ.

English summary
Students of Vijaya Chitrakala Mahavidyalaya in Joshi Nagar, Illakal made 20 feet Ganesh idol out of water bottles, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X