ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ್ಮಿಶ್ರ ಸರ್ಕಾರಕ್ಕೆ ಶತದಿನ: ಬೆಳಗ್ಗೆದ್ದು ಯಾರ್ಯಾರ ನೆನೆದರು ಎಚ್ಡಿಕೆ?

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಶತ ದಿನ | ಧನ್ಯವಾದ ಅರ್ಪಿಸಿದ ಎಚ್ ಡಿ ಕೆ | Oneindia Kannada

ಬೆಂಗಳೂರು, ಆಗಸ್ಟ್ 30: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯುಷ್ಯವಂತೆ! 'ಆಂತರಿಕ ಭಿನ್ನಾಭಿಪ್ರಾಯ, ಸಚಿವ ಸಂಪುಟ ವಿಸ್ತರಣೆಯ ಸಮಯದ ಅತೃಪ್ತಿಯ ಹೊಗೆ ಎಂಬೆಲ್ಲ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ನೂರು ದಿನದ ಆಯುಷ್ಯವನ್ನಂತೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪೂರೈಸಿದೆ!

ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ(ಆಗಸ್ಟ್ 30) ನೂರು ದಿನ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಶತದಿನ ಪೂರೈಕೆಗೆ ಸಹಕರಿಸಿದ ಎಲ್ಲರನ್ನೂ ಮುಖ್ಯಮಂತ್ರಿ ಕುಮಾರಸ್ವಾಮಿ ನೆನೆದಿದ್ದಾರೆ. ಧನ್ಯವಾದ ಅರ್ಪಿಸಿದ್ದಾರೆ.

ರಾಹುಲ್-ಎಚ್ಡಿಕೆ ಭೇಟಿಗೆ ಕ್ಷಣಗಣನೆ: ಮಾತುಕತೆ ಹಿನ್ನೆಲೆ ಏನು?ರಾಹುಲ್-ಎಚ್ಡಿಕೆ ಭೇಟಿಗೆ ಕ್ಷಣಗಣನೆ: ಮಾತುಕತೆ ಹಿನ್ನೆಲೆ ಏನು?

ಇದೇ ಹಿನ್ನೆಲೆಯಲ್ಲಿ ಅವರು ಇಂದು ದೆಹಲಿಗೆ ಸಹ ತೆರಳಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಧನ್ಯವಾದ ಅರ್ಪಿಸಲಿದ್ದಾರೆ. ಜೊತೆಗೆ ಸಮ್ಮಿಶ್ರ ಸರ್ಕಾರದ ಸ್ಥಿತಿಗತಿ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ನೂರು ದಿನದ ಸಂಭ್ರಮದಲ್ಲಿ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಸಾಲು ಸಾಲು ಟ್ವೀಟ್ ನಲ್ಲೇನಿದೆ? ನೋಡಿ.

Array

ಎಲ್ಲರಿಗೂ ಧನ್ಯವಾದ

ಮೈತ್ರಿ ಸರ್ಕಾರವನ್ನು ಹೃದಯಪೂರ್ವಕವಾಗಿ ಬೆಂಬಲಿಸುತ್ತಿರುವ ನನ್ನ ಮೈತ್ರಪಕ್ಷದ ಸಹೋದ್ಯೋಗಿಗಳಿಗೆ, ಮುಖಂಡರಿಗೆ ಮತ್ತು ನನ್ನೆಲ್ಲ ಜನತೆಗೆ ಧನ್ಯವಾದಗಳು. ನೈಸರ್ಗಿಕ ವಿಕೋಪದ ಸಮಯದಲ್ಲಿ ನಮ್ಮೊಂದಿಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ದೇಣಿಗೆ ಸಂಗ್ರಹಿಸಿದ ಸಾರ್ವಜನಿಕ, ಖಾಸಗೀ ವಲಯಗಳು, ಕಾರ್ಯಕರ್ತರು ಮತ್ತು ಮಾಧ್ಯಮಗಳಿಗೂ ನನ್ನ ತುಂಬ ಹೃದಯದ ಕೃತಜ್ಞತೆಗಳು ಎಂದು ಎಚ್ಡಿಗೆ ಧನ್ಯವಾದ ಅರ್ಪಿಸಿದ್ದಾರೆ.

ಲೇವಾದೇವಿದಾರರ ವಿರುದ್ಧ ಸರ್ಕಾರದ ಕೆಂಗಣ್ಣು: ಸಿಎಂ ಖಡಕ್ ಆದೇಶ ಲೇವಾದೇವಿದಾರರ ವಿರುದ್ಧ ಸರ್ಕಾರದ ಕೆಂಗಣ್ಣು: ಸಿಎಂ ಖಡಕ್ ಆದೇಶ

Array

ಸರ್ವತೋಮುಖ ಬೆಳವಣಿಗೆ ನಮ್ಮ ಗುರಿ

ನಮ್ಮ ಸರ್ಕಾರ ಇಂದಿಗೆ ನೂರು ದಿನ ಪೂರೈಸುತ್ತಿದೆ. ನಮ್ಮ ದೂರದೃಷ್ಟೇನಿದ್ದರೂ ಸರ್ವತೋಮುಖ ಬೆಳವಣಿಗೆಯೆಡೆಗೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರಗತಿಗೆ ಸಮಾನ ಕೊಡುಗೆ ನೀಡುವುದು ನಮ್ಮ ಉದ್ದೇಶ. ಹಾಗೆಯೇ ಎಲ್ಲ ವಲಯದ ಮತ್ತು ಎಲ್ಲಾ ಸ್ತರದ ಜನರ ಅಭಿವೃದ್ಧಿಯೂ ನಮ್ಮ ಗುರಿ- ಎಚ್ ಡಿ ಕುಮಾರಸ್ವಾಮಿ

ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಅಮೆರಿಕ ಕನ್ನಡಿಗರ ಉದ್ದೇಶಿಸಿ ಎಚ್‌ಡಿಕೆ ಭಾಷಣ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಅಮೆರಿಕ ಕನ್ನಡಿಗರ ಉದ್ದೇಶಿಸಿ ಎಚ್‌ಡಿಕೆ ಭಾಷಣ

ಮೊದಲ ಆದ್ಯತೆ ಕೊಡಗು

ಸದ್ಯಕ್ಕೆ ನಮ್ಮ ಮೊದಲ ಆದ್ಯತೆ ಕೊಡಗು. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳನ್ನು ಸಹಜ ಸ್ಥಿತಿಗೆ ತಂದು, ಅವನ್ನು ಮತ್ತೆ ಕಟ್ಟುವುದು ನನ್ನ ಸಂಕಲ್ಪ. ಈ ಭಾಗದ ನಾಗರಿಕರಿಗೆ ಭದ್ರತಾಭಾವ ಮೂಡುವಂತೆ ನೋಡಿಕೊಳ್ಳಬೇಕಿದೆ- ಎಚ್ ಡಿ ಕುಮಾರಸ್ವಾಮಿ

ಮಾದರಿ ಜಿಲ್ಲೆಯಾಗಲಿದೆ ಕೊಡಗು

ಪ್ರವಾಹಪೀಡಿತ ಕೊಡಗನ್ನು ಪುನಶ್ಚೇತನಗೊಳಿಸಿ ಅದನ್ನೊಂದು ಮಾದರಿ ಜಿಲ್ಲೆಯನ್ನಾಗಿ ಮಾಡಲು ಸರ್ಕಾರದ ಜೊತೆ ಅಧಿಕಾರಿಗಳು, ಜನರು ಸಹಕರಿಸಿ, ಇದನ್ನು ಸವಾಲಿನಂತೆ ಸ್ವೀಕರಿಸೋಣ. ಕೊಡಗನ್ನು ದೇಶದಲ್ಲೇ ಮಾದರಿ ಜಿಲ್ಲೆಯನ್ನಾಗಿ ಮಾಡೋಣ- ಎಚ್ ಡಿ ಕುಮಾರಸ್ವಾಮಿ

English summary
Karnataka Chief minister HD Kumaraswamy posts series of tweets and remembers copletion of 100 days of coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X