ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೇನಾನಿಗಳ 'ರಾಷ್ಟ್ರಗೀತೆಗೆ' ಏಷ್ಯನ್ ಪೇಂಟ್ಸ್ ಬೆಂಬಲದ ಧ್ವನಿ

Google Oneindia Kannada News

ನವದೆಹಲಿ, ಮೇ 18: PM Cares ಫಂಡ್ ಅನ್ನು ಬೆಂಬಲಿಸಿರುವ ಏಷ್ಯನ್ ಪೇಂಟ್ಸ್, ಇದೀಗ ಕೊರೊನಾ ಸೇನಾನಿಗಳಿಗೆ (ವಾರಿಯರ್ಸ್) ಅರ್ಪಿಸಿರುವ ಹೊಸ ರಾಷ್ಟ್ರಗೀತೆಗೆ ಪ್ರಮುಖ ಆಯೋಜಕವಾಗಿದೆ. One Nation One Voice ಎಂಬ ಈ ಹೊಸ 'ರಾಷ್ಟ್ರಗೀತೆಯನ್ನು' ಮೇ 17ನೇ ತಾರೀಕಿನ ಭಾನುವಾರ ಬಿಡುಗಡೆ ಮಾಡಲಾಯಿತು.

"ಜಯತು ಜಯತು ಭಾರತಮ್, ವಸುದೇವ ಕುಟುಂಬಕಂ" ಎಂಬ ಶೀರ್ಷಿಕೆಯಿರುವ ಈ ಗೀತೆ ಹೊಸ ಚರಿತ್ರೆ ಸೃಷ್ಟಿಸಿದೆ. ಇದರಲ್ಲಿ 200 ಮಂದಿ ಗಾಯಕರು ಪಾಲ್ಗೊಂಡಿದ್ದರು. ಇಂಡಿಯನ್ ಸಿಂಗರ್ಸ್ ರೈಟ್ಸ್ ಅಸೋಸಿಯೇಷನ್ (ISRA) ಇದರಲ್ಲಿ ಭಾಗಿಯಾಗಿದ್ದರು. ಹದಿನಾಲ್ಕು ಭಾಷೆಗಳಲ್ಲಿ ಈ ಗೀತೆ ಇದೆ. ಈ ವರೆಗಿನ ಅತಿ ದೊಡ್ಡ ಗೀತೆಯ ಪ್ಲಾಟ್ ಫಾರ್ಮ್ ಇದು.

Asian Paints Supports PM Cares Fund as a Sponsor of ‘One Nation One Voice’ Anthem

ಕೋವಿಡ್- 19 ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ಭಾಗವಾಗಿ ಈ ಗೀತೆಯನ್ನು ಪ್ರಸ್ತುತಪಡಿಸಲಾಗಿದೆ. ಅಂದ ಹಾಗೆ ಈ ಆಲೋಚನೆಯು ಸೋನು ನಿಗಮ, ಶ್ರೀನಿವಾಸ್ ಮತ್ತು ISRAದ ಸಿಇಒ ಸಂಜಯ್ ಟಂಡನ್ ಅವರದು. ಲಾಕ್ ಡೌನ್ ಅವಧಿಯಲ್ಲಿ ತಮ್ಮ ಭಾಗದ ಗೀತೆಯನ್ನು ಆಯಾ ಗಾಯಕ ಅಥವಾ ಗಾಯಕಿಯರು ಮನೆಗಳಲ್ಲೇ ರೆಕಾರ್ಡ್ ಮಾಡಿದ್ದಾರೆ.

ಗಾಯಕರ ಮನೆಗಳಿಂದಲೇ ಧ್ವನಿ ಮುದ್ರಣ

ಮುಖ್ಯವಾದ ಸವಾಲೆಂದರೆ, ಹಲವು ಗಾಯಕರ ಮನೆಗಳಲ್ಲಿ ಪ್ರೊಫೆಷನಲ್ ಆದ ರೆಕಾರ್ಡಿಂಗ್ ಸಲಕರಣೆಗಳು ಸಹ ಇರಲಿಲ್ಲ. ಹದಿನಾಲ್ಕು ವಿವಿಧ ಭಾಷೆಗಳಲ್ಲಿ ಈ ಗೀತೆಯನ್ನು ಹಾಡಲಾಗಿದೆ. ಗಾಯಕರಾದ ಆಶಾ ಭೋಂಸ್ಲೆ, ಅನುಪ್ ಜಲೋಟಾ, ಆಲ್ಕಾ ಯಗ್ನಿಕ್, ಹರಿಹರನ್, ಕೈಲಾಶ್ ಖೇರ್, ಕವಿತಾ ಕೃಷ್ಣಮೂರ್ತಿ, ಕುಮಾರ್ ಸಾನು, ಮಹಾಲಕ್ಷ್ಮೀ ಅಯ್ಯರ್, ಮನು, ಪಂಕಜ್ ಉದಾಸ್, ಎಸ್. ಪಿ. ಬಾಲಸುಬ್ರಮಣಿಯನ್, ಶಾನ್, ಸೋನು ನಿಗಮ್, ಸುದೇಶ್ ಭೋಂಸ್ಲೆ, ಸುರೇಶ್ ವಾಡ್ಕರ್, ಶೈಲೇಂದ್ರ ಸಿಂಗ್, ಶ್ರೀನಿವಾಸ್, ತಲತ್ ಅಜೀಜ್, ಉದಿತ್ ನಾರಾಯಣ್, ಶಂಕರ್ ಮಹಾದೇವನ್, ಜಸ್ಬೀರ್ ಜಸ್ಸೆ ಮತ್ತು ಎಂಬತ್ತಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದಾರೆ.

Asian Paints Supports PM Cares Fund as a Sponsor of ‘One Nation One Voice’ Anthem

ಇಂಥ ದೊಡ್ಡ ಪ್ರಯತ್ನದಲ್ಲಿ ಏಷ್ಯನ್ ಪೇಂಟ್ಸ್ ಪಾತ್ರದ ಬಗ್ಗೆ ಮಾತನಾಡಿರುವ ಕಂಪೆನಿಯ ಎಂ.ಡಿ. ಹಾಗೂ ಸಿಇಒ ಅಮಿತ್ ಸಿಂಗ್ಲೆ, ಏಷ್ಯನ್ ಪೇಂಟ್ಸ್ ಸದಾ ಕಾಳಜಿ ಮಾಡುವ ಬ್ರ್ಯಾಂಡ್. ದೇಶವಾಗಿ ನಾವು ಭವಿಷ್ಯದ ಸವಾಲನ್ನು ಎದುರಿಸುತ್ತಿದ್ದೇವೆ. ಒಂದು ಹೆಜ್ಜೆ ಮುಂದಕ್ಕೆ ಇಟ್ಟು, ಕಾರ್ಯಪ್ರವೃತ್ತರಾಗಲು ಇದಕ್ಕಿಂತ ಉತ್ತಮ ಸಮಯ ಇಲ್ಲ ಎಂದಿದ್ದಾರೆ.

ಮನೆಗಳ ಜತೆಗೆ ಇರುವ ಭಾವನಾತ್ಮಕ ಬೆಸುಗೆಯೊಂದಿಗೆ ಈ ಧ್ವನಿಗಳೊಂದಿಗೂ ತಳುಕು ಹಾಕಿಕೊಂಡಿದ್ದೇವೆ. ಇನ್ನೂರು ಗಾಯಕರು ತಮ್ಮ ಮನೆಗಳಿಂದಲೇ ಈ ಗೀತೆಗೆ ಧ್ವನಿ ನೀಡಿದ್ದಾರೆ. ಭಾರತದ ಬ್ರ್ಯಾಂಡ್ ಆಗಿರುವ ಏಷ್ಯನ್ ಪೇಂಟ್ಸ್ ಪಿಎಂ ಕೇರ್ಸ್ ಫಂಡ್ ಮೂಲಕ ದೇಶದ ಜನರಿಗೆ ನೆರವು ನೀಡಲು ಬಯಸುತ್ತದೆ. ಒನ್ ನೇಷನ್ ಒನ್ ವಾಯ್ಸ್ ಅನ್ನೋದು ಕೇವಲ ಗೀತೆಯಲ್ಲ. ಈ ಕ್ಷಣಕ್ಕೆ ಜನರ ಭಾವನೆಗಳ ಪ್ರತಿಫಲನ. ಈ ಗೀತೆಯು ನಮ್ಮ ದೇಶವನ್ನು ಒಟ್ಟಿಗೆ ನಡೆಸಿ, ಈ ಬಿಕ್ಕಟ್ಟಿನಿಂದ ಹೊರಬರುವುದಕ್ಕೆ ಖಂಡಿತಾ ಸ್ಫೂರ್ತಿ ನೀಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Asian Paints Supports PM Cares Fund as a Sponsor of ‘One Nation One Voice’ Anthem

ನೂರಕ್ಕೂ ಹೆಚ್ಚು ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆ

ಪಿಎಂ ಕೇರ್ಸ್ ಫಂಡ್ ಹಾಗೂ ಇತರ ರಾಜ್ಯಗಳ ಪರಿಹಾರ ನಿಧಿಗೆ 35 ಕೋಟಿ ರುಪಾಯಿ ನೀಡಲು ಈಗಾಗಲೇ ಏಷ್ಯನ್ ಪೇಂಟ್ಸ್ ಬದ್ಧವಾಗಿದೆ. ನೂರಕ್ಕೂ ಹೆಚ್ಚು ಪ್ಲಾಟ್ ಫಾರ್ಮ್ ಗಳಲ್ಲಿ ಈ ಗೀತೆ ಬಿಡುಗಡೆ ಆಗಿದೆ. ಇದರಿಂದ ಬರುವ ಹಣ ಕೂಡ ಪಿಎಂ ಕೇರ್ಸ್ ಫಂಡ್ ಗೆ ಹೋಗುತ್ತದೆ.

ಈ ಗೀತೆಯು ಹಿಂದಿ, ಬಂಗಾಲಿ. ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಭೋಜ್ ಪುರಿ, ಅಸ್ಸಾಮಿ, ಕಾಶ್ಮೀರಿ, ಸಿಂಧಿ, ರಾಜಸ್ಥಾನಿ, ಒಡಿಯಾ ಭಾಷೆಗಳಲ್ಲಿ ಬಂದಿದೆ.

Asian Paints Supports PM Cares Fund as a Sponsor of ‘One Nation One Voice’ Anthem

ಏಷ್ಯನ್ ಪೇಂಟ್ಸ್ ಬಗ್ಗೆ:

ಏಷ್ಯನ್ ಪೇಂಟ್ಸ್ ಆರಂಭವಾದದ್ದು 1942ರಲ್ಲಿ. ಈ ಕಂಪೆನಿಯು ಭಾರತದ ಮೊದಲ ಹಾಗೂ ಏಷ್ಯಾದ ನಾಲ್ಕನೇ ಅತಿದೊಡ್ಡ ಕಂಪೆನಿ. 19,248 ಕೋಟಿ ವಹಿವಾಟು ನಡೆಸುತ್ತದೆ. ಹದಿನೈದು ದೇಶಗಳಲ್ಲಿ ಕಂಪೆನಿ ಕಾರ್ಯನಿರ್ವಹಿಸುತ್ತದೆ. ವಿಶ್ವದಲ್ಲಿ 26 ಪೇಂಟ್ ಉತ್ಪಾದನಾ ಕೇಂದ್ರಗಳಿವೆ. ಅರವತ್ತಕ್ಕೂ ಹೆಚ್ಚು ದೇಶಗಳ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

ಏಷ್ಯನ್ ಪೇಂಟ್ಸ್ ಕಂಪೆನಿಯು ಪೇಂಟ್ ವಲಯದಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕಲರ್ ಐಡಿಯಾ, ಹೋಮ್ ಸಲ್ಯೂಷನ್ಸ್, ಕಲರ್ ನೆಕ್ಸ್ಟ್ ಮತ್ತು ಕಿಡ್ಸ್ ವರ್ಲ್ಡ್ ಎಂಬ ಹೊಸ ಆಲೋಚನೆಗಳನ್ನು ಜಾರಿಗೆ ತಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X