ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಧು ವಿರುದ್ಧ 1000 ಕೋಟಿ ರು ಮಾನನಷ್ಟ ಮೊಕದ್ದಮೆ

|
Google Oneindia Kannada News

ಅಮೃತ್ ಸರ್, ಡಿಸೆಂಬರ್ 16: ರಾಜಸ್ಥಾನದ ಚುನಾವಣಾ ಪ್ರಚಾರದ ವೇಳೆ ಪಾಕಿಸ್ತಾನದ ಪರ ಘೋಷಣೆಗಳು ಕೇಳಿ ಬಂದಿದೆ ಎಂದು ಝೀ ನ್ಯೂಸ್ ಪ್ರಸಾರ ಮಾಡಿದೆ ಎಂದು ಆರೋಪ ಮಾಡಿದ್ದ ಪಂಜಾಬ್ ಮುಖ್ಯಮಂತ್ರಿ ನವಜೋತ್ ಸಿಂಗ್ ಸಿಧು ವಿರುದ್ಧ ಝೀ ನ್ಯೂಸ್ 1000 ಕೋಟಿ ರು ಕೋರಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ತಲುಪಿದ 24 ಗಂಟೆಗಳ ಒಳಗೆ ಸಿಧು ಕ್ಷಮೆ ಕೋರದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಮಾನವೀಯತೆಯ ಸಾಕಾರಮೂರ್ತಿ ಎಂದ ಸಿಧುಗೆ ಮಂಗಳಾರತಿರಾಹುಲ್ ಮಾನವೀಯತೆಯ ಸಾಕಾರಮೂರ್ತಿ ಎಂದ ಸಿಧುಗೆ ಮಂಗಳಾರತಿ

ಝೀ ನ್ಯೂಸ್ ವಿರುದ್ಧ ಪ್ರತ್ಯಕ್ಷ-ಪರೋಕ್ಷವಾಗಿ ಅವಹೇಳನಕಾರಿಯಾಗಿ ಮಾತನಾಡಬಾರದು ಎಂಬ ಷರತ್ತನ್ನು ನೋಟಿಸ್ ಜಾರಿ ಮಾಡಲಾಗಿದೆ.

Zee News Sends Rs 1,000 Cr Defamation Notice To Navjot Singh Sidhu

ಸಿಧು ಉಪಸ್ಥಿತರಿದ್ದ ರಾಜಸ್ಥಾನದ ಆಲ್ವಾರ್ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಸ್ಲೋಗನ್ ಪ್ರದರ್ಶಿಸಲ್ಪಟ್ಟಿದ್ದನ್ನು ಝೀ ನ್ಯೂಸ್ ಬಿತ್ತರಿಸಿತ್ತು. ಆದರೆ ಅದು ಫೇಕ್ ವೀಡಿಯೊ ಎಂದು ಸಿಧು ಆರೋಪಿಸಿದ್ದರು.

ನವಜೋತ್ ಸಿಂಗ್ ಸಿಧು ರಾಜೀನಾಮೆಗೆ ಪಂಜಾಬ್ ಸಚಿವರ ಆಗ್ರಹನವಜೋತ್ ಸಿಂಗ್ ಸಿಧು ರಾಜೀನಾಮೆಗೆ ಪಂಜಾಬ್ ಸಚಿವರ ಆಗ್ರಹ

ಸಿಧು ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಟನೆ ಆರೋಪ ಹೊರೆಸಲಾಗಿದೆ.

English summary
Zee News has issued a Rs 1,000 crore defamation notice to Punjab Minister Navjot Singh Sidhu for “his defamatory and false allegations against Zee Media”, said Sudhir Chaudhary, Editor-in-chief of Zee News in a tweet on Saturday, 15 December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X