ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ; ಅಬ್ಬಾ ಯಾವ ಪೈಲಟ್‌ಗೂ ಕಡಿಮೆ ಇಲ್ಲ ಈ ಟ್ರಾಕ್ಟರ್ ಡ್ರೈವರ್

|
Google Oneindia Kannada News

ಅಮೃತಸರ, ಮಾರ್ಚ್ 5: ಕೆಲವೊಂದು ವ್ಯಕ್ತಿಗಳು ಅವರು ಎಂತಹದೇ ಸನ್ನಿವೇಶದಲ್ಲಿರಲಿ ಅಥವಾ ಯಾವುದೇ ಹಂತದಲ್ಲಿರಲಿ ತಮ್ಮಲ್ಲಿನ ಅದ್ಭುತ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದು ಬಿಡುತ್ತಾರೆ.

ಪೈಲಟ್‌ಗಳು ವರ್ಷಾನುಗಟ್ಟಲೇ ಅತ್ಯಂತ ಕಠಿಣ ತರಬೇತಿ ಪಡೆದುಕೊಂಡು ಯುದ್ದ ವಿಮಾನಗಳನ್ನು ಮನಬಂದಂತೆ ಫಳಗಿಸುವುದನ್ನು ನೋಡಿದ್ದೇವೆ. ಅದೇ ರೀತಿ ಟ್ರ್ಯಾಕ್ಟರ್‌ನ್ನು ಮಾಡಲು ಸಾಧ್ಯವಾ? ಎಂದರೆ ನೀವು ಇಲ್ಲ ಎನ್ನುತ್ತಿರಿ.

Viral Video A Punjab Tractor Driver Driving Tractor Looks Like Warcraft

ಆದರೆ ಪಂಜಾಬ್‌ನ ಅಮೃತಸರದ ಗುರುವಿಂದರ್ ಸಿಂಗ್ ಎನ್ನುವ 32 ವರ್ಷದ ರೈತನೊಬ್ಬ ಟ್ರಾಕ್ಟರ್ ಎಂಜಿನ್‌ನ್ನು ಮನಬಂದಂತೆ ಒಂದು ರೀತಿ ಯುದ್ದ ವಿಮಾನ ಚಲಿಸಿದಂತೆ ಫಳಗಿಸುತ್ತಾರೆ. ಟ್ರಾಕ್ಟರ್‌ನ್ನು ನೆಲದ ಮೇಲೆ ವಿಷ್ಮಯಕಾರಿಯಾಗಿ ಚಲಾಯಿಸಿ ಸಾಹಸ ಮಾಡುವ ರೈತನ ವಿಡಿಯೋ ವೈರಲ್ ಆಗಿದೆ.

ವಾಯುಸೇನೆಯ ನಿವೃತ್ತ ಸೇನಾಧಿಕಾರಿ ಅನಿಲ್ ಚೋಪ್ರಾ ಎನ್ನುವರು ಪಂಜಾಬ್‌ನ ರೈತನ ಈ ವಿಡಿಯೋವನ್ನು ಟ್ವಟ್ಟರ್‌ನಲ್ಲಿ ಹಾಕಿಕೊಂಡಿದ್ದು, ರಷ್ಯಾದ ಪೈಲಟ್ ತನ್ನ ಯುದ್ದವಿಮಾನವನ್ನು ಓಡಿಸುವಂತೆ ನಮ್ಮ ಪಂಜಾಬ್ ರೈತ ತನ್ನ ಟ್ರಾಕ್ಟರ್ ಓಡಿಸುತ್ತಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Viral Video A Punjab Tractor Driver Driving Tractor Looks Like Warcraft. Video Goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X