ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಕೆಲಸದ ಬಗ್ಗೆ ಪ್ರಶ್ನೆ ಮಾಡಿದ ವ್ಯಕ್ತಿಗೆ ಥಳಿಸಿದ 'ಕೈ' ಶಾಸಕ

|
Google Oneindia Kannada News

ಚಂಡೀಗಢ, ಅಕ್ಟೋಬರ್ 20: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಎಡವಟ್ಟು ಮಾಡಿಕೊಂಡಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ವಿಡಿಯೋ ಆಡಳಿತ ಪಕ್ಷದ ತಲೆನೋವನ್ನು ಹೆಚ್ಚಿಸಿದೆ.

ವೀಡಿಯೊವು ಪಂಜಾಬ್ ನ ಪಠಾಣ್‌ಕೋಟ್ ಜಿಲ್ಲೆಯ ಪಾಲ್, ನವರಾತ್ರಿ ದುರ್ಗಾಮಾತೆ ಪೂಜೆ ವೇಳೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಜನಸಂದಣಿಯ ಅಂಚಿನಲ್ಲಿರುವ ಕಡು ಕಂದು ಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬನು ಅವರ ಬಳಿ ಬಂದು "ನೀವು ಏನು ಕೆಲಸ ಮಾಡಿದ್ದೀರಿ? ಎಂದು ಪ್ರಶ್ನೆ ಮಾಡುತ್ತಿದ್ದಂತೆ ಪಾಲ್ ಆ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರ ಜೋಗಿಂದರ್ ಪಾಲ್ ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿದ್ದಂತೆ ನೆರೆದ ಜನರು, ಪೊಲೀಸರು ವ್ಯಕ್ತಿಗೆ ಥಳಿಸುತ್ತಾರೆ.

ವೈರಲ್ ವಿಡಿಯೋದಲ್ಲಿ ವ್ಯಕ್ತಿ ಪಾಲ್ ಮಾತನಾಡುತ್ತಿರುವಾಗ ಅವರ ಬಳಿ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಪೊಲೀಸರು ಆತನನ್ನು ತಡೆದು ನಿಲ್ಲಿಸುತ್ತಾರೆ. ಪೋಲಿಸ್ ಅಧಿಕಾರಿಯೊಬ್ಬರು ಆತನ ಕೈ ಹಿಡಿದು ಆತನನ್ನು ಸದ್ದಿಲ್ಲದೆ ಕರೆದೊಯ್ಯಲು ಪ್ರಯತ್ನಿಸುತ್ತಾರೆ. ಸ್ವಲ್ಪ ಹೊತ್ತು ಸುಮ್ಮನೆ ನಿಂತಿದ್ದ ವ್ಯಕ್ತಿ ಪಾಲ್ ಬಳಿ ಹೋಗುತ್ತಾನೆ. ಆ ವ್ಯಕ್ತಿಯನ್ನು ನೋಡಿ ನೋಡದಂತೆ ಮಾತನಾಡುತ್ತಿದ್ದ ಪಾಲ್ ವ್ಯಕ್ತಿಯನ್ನು ಕಡೆಗಣಿಸುತ್ತಾರೆ. ಆಗ ಹತ್ತಿರಕ್ಕೆ ಹೋದ ವ್ಯಕ್ತಿ ಪಾಲ್ ಅವರಿಗೆ "ನೀವು ಏನು ಕೆಲಸ ಮಾಡಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾನೆ.

Video: Punjab Congress MLA Slaps Man Who Asks, What Work Have You Done?

ಸುದ್ದಿ ಸಂಸ್ಥೆ ಪಿಟಿಐನಿಂದ ಹರ್ಷ ಕುಮಾರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಪಾಲ್ ಅವರನ್ನು ಪ್ರಶ್ನಿಸಿದ್ದಾನೆ. ಪ್ರಶ್ನೆಯನ್ನು ಕೂಗಿ ಕೇಳಿ ಶಾಸಕರ ಪ್ರತಿಕ್ರಿಯೆಗೆ ಒತ್ತಾಯಿಸುತ್ತಾನೆ.

ಮೊದಲಿಗೆ ಶಾಂತವಾಗಿ ಪಾಲ್ ಆ ವ್ಯಕ್ತಿಯನ್ನು ಮುಂದೆ ಬರಲು ಕೇಳುತ್ತಾರೆ. ಅವನಿಗೆ ಮೈಕ್ರೊಫೋನ್ ಕೊಡುತ್ತಾರೆ. ನಂತರ ಎಂಎಲ್ಎ ಆ ವ್ಯಕ್ತಿಯ ತಲೆಯ ಮೇಲೆ ಹಲವಾರು ಬಾರಿ ಹೊಡೆಯುತ್ತಾರೆ. ಆರಂಭದಲ್ಲಿ ಯಾವುದೇ ಘರ್ಷಣೆಯಿಂದ ವ್ಯಕ್ತಿಯನ್ನು ದೂರವಿರಿಸಲು ಪ್ರಯತ್ನಿಸಿದ ಪೋಲೀಸ್ ಕೂಡ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಾರೆ. ನಂತರ ಜನ ಗುಂಪು ಸೇರಿ ವ್ಯಕ್ತಿಯನ್ನು ಥಳಿಸುತ್ತಾರೆ. ಇನ್ನೊಬ್ಬ ಪೋಲೀಸರು ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ಎಳೆದೊಯ್ಯುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಗೃಹ ಸಚಿವ ಸುಖಜಿಂದರ್ ಸಿಂಗ್ ರಾಂಧವಾ "ಶಾಸಕರು ಈ ರೀತಿ ವರ್ತಿಸಬಾರದಿತ್ತು. ನಾವು ಜನಪ್ರತಿನಿಧಿಗಳು ಮತ್ತು ಅವರ ಸೇವೆಗಾಗಿ ಇಲ್ಲಿಗೆ ಬಂದಿದ್ದೇವೆ" ಎಂದು ಕಿಡಿಕಾರಿದ್ದಾರೆ. ಹರ್ಷ ಕುಮಾರ್ ಅವರ ತಾಯಿ ಶಾಸಕರ ವರ್ತನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, 'ತನ್ನ ಮಗ ಚುನಾಯಿತ ಜನರ ಸೇವಕರಿಗೆ ಸರಳ ಪ್ರಶ್ನೆಯನ್ನು ಕೇಳಿದ್ದಾನೆ. ಆತನಿಗೆ ನ್ಯಾಯ ದೊರಕಿಸಿಕೊಡುವಂತೆ' ಅವರು ಕೋರಿದ್ದಾರೆ.

ಈ ಅಹಿತಕರ ಘಟನೆ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಬಿಜೆಪಿ ಕಾಂಗ್ರೆಸ್ ಶಾಸಕನ ವರ್ತನೆಯನ್ನು ದೂರಿದೆ.

ಪಂಜಾಬ್ ಕೆಲವು ತಿಂಗಳುಗಳಲ್ಲಿ ಹೊಸ ಸರ್ಕಾರಕ್ಕೆ ಮತ ಹಾಕುತ್ತದೆ. ಕಾಂಗ್ರೆಸ್ ನಿಯಂತ್ರಿಸುತ್ತಿರುವ ಕೆಲವು ರಾಜ್ಯಗಳಲ್ಲಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಹಿರಿಯ ನಾಯಕ ಅಮರಿಂದರ್ ಸಿಂಗ್ ಮತ್ತು ಶಾಸಕ ನವಜೋತ್ ಸಿಧು ನಡುವಿನ ಕಹಿ ಮತ್ತು ಸ್ಫೋಟಕ ವೈಷಮ್ಯವನ್ನು ಕಾಂಗ್ರೆಸ್ ಚುನಾವಣೆ ಆಗಮಿಸುತ್ತಿರುವ ಸಂದರ್ಭದಲ್ಲಿ ಕಂಡಿದೆ.

ಇನ್ನೂ ಶಾಸಕರ ಇಂಥಹ ವರ್ತನೆ ಬಿಜೆಪಿಗೆ ಕಾಲೆಖೆಯಲು ಅಸ್ತ್ರ ಸಿಕ್ಕಂತಾಗಿದೆ. ಕಾಂಗ್ರೆಸ್ ಪಾಲ್ ವರ್ತನೆಯನ್ನು ಬಿಜೆಪಿ ಕಟುವಾಗಿ ಪ್ರಶ್ನಿಸಿದೆ. ವ್ಯಕ್ತಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದೆ. ಸದ್ಯ ಕಾಂಗ್ರೆಸ್ ಶಾಸಕ ಪಾಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

English summary
A video of Congress MLA Joginder Pal assaulting a man who quizzed him over work done in his constituency has added to the ruling party's headaches ahead of next year's Assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X