ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಕದಲ್ಲಿ ದೋಷ: 13 ವರ್ಷದ ವಿದ್ಯಾರ್ಥಿಯನ್ನು ಮದುವೆಯಾದ ಶಿಕ್ಷಕಿ!

|
Google Oneindia Kannada News

ಅಮೃತಸರ, ಮಾರ್ಚ್ 18: ಜಾತಕದಲ್ಲಿ ದೋಷ ಇದೆ ಎಂಬ ಕಾರಣಕ್ಕೆ, 13 ವರ್ಷದ ವಿದ್ಯಾರ್ಥಿಯನ್ನು ಆತನ ಟ್ಯೂಷನ್ ಶಿಕ್ಷಕಿಯೇ ಮದುವೆಯಾದ ಘಟನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ. ಶಿಕ್ಷಕಿಯ ಜಾತಕದಲ್ಲಿ ಕುಜ ದೋಷವಿದ್ದು, ಅದನ್ನು ಶಮನಗೊಳಿಸಲು ಬಾಲಕನ ಜತೆ ಬಲವಂತವಾಗಿ ಮದುವೆ ಮಾಡಲಾಗಿದೆ ಎನ್ನಲಾಗಿದೆ.

ಶಿಕ್ಷಕಿಯ ಜಾತಕದಲ್ಲಿ ಕುಜ ದೋಷವಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು. ಈ ಕಾರಣದಿಂದ ತಮ್ಮ ಮಗಳಿಗೆ ಮದುವೆಯಾಗುವುದಿಲ್ಲ ಎಂದು ಆಕೆಯ ಕುಟುಂಬ ಚಿಂತೆಗೊಳಗಾಗಿತ್ತು. ಆಕೆಗೆ ಅಪ್ರಾಪ್ತ ವಯಸ್ಸಿನ ವ್ಯಕ್ತಿ ಜತೆಗೆ ಸಾಂಕೇತಿಕವಾಗಿ ಮದುವೆಯಾಗಬೇಕು. ಇದರಿಂದ ಆಕೆಯ ದೋಷ ಪರಿಹಾರವಾಗಲಿದೆ ಅಥವಾ ಕಡಿಮೆಯಾಗಲಿದೆ ಎಂದು ಜ್ಯೋತಿಷಿ ಸಲಹೆ ನೀಡಿದ್ದರು.

ದೇವರನ್ನು ಮೆಚ್ಚಿಸಲು 6 ವರ್ಷದ ಮಗನನ್ನು ಕೊಲೆ ಮಾಡಿದ ಮದರಸಾ ಶಿಕ್ಷಕಿ ದೇವರನ್ನು ಮೆಚ್ಚಿಸಲು 6 ವರ್ಷದ ಮಗನನ್ನು ಕೊಲೆ ಮಾಡಿದ ಮದರಸಾ ಶಿಕ್ಷಕಿ

ಆಕೆ ಕಲಿಸುತ್ತಿದ್ದ ಟ್ಯೂಷನ್ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದ 13 ವರ್ಷದ ಬಾಲಕನನ್ನೇ ಮದುವೆ ಗಂಡಾಗಿ ಆಯ್ಕೆ ಮಾಡಲಾಗಿತ್ತು. ಈ ನಡುವೆ ಟ್ಯೂಷನ್ ಶಿಕ್ಷಕಿ, ಟ್ಯೂಷನ್‌ಗಾಗಿ ಬಾಲಕ ತನ್ನ ಮನೆಯಲ್ಲಿಯೇ ಒಂದು ವಾರ ಇರಬೇಕಿರುವುದಾಗಿ ಬಾಲಕನ ಕುಟುಂಬದವರಿಗೆ ತಿಳಿಸಿದ್ದಳು. ಮುಂದೆ ಓದಿ.

ಮನೆಗೆ ಮರಳಿದ ಬಾಲಕ

ಮನೆಗೆ ಮರಳಿದ ಬಾಲಕ

ಒಂದು ವಾರದ ತನ್ನ ಮನೆಗೆ ಮರಳಿದ ಬಾಲಕ, ಶಿಕ್ಷಕಿಯ ಮನೆಯಲ್ಲಿ ನಡೆದ ಘಟನೆಯನ್ನು ಕುಟುಂಬದವರಿಗೆ ವಿವರಿಸಿದ ಬಳಿಕ ಇದು ಬೆಳಕಿಗೆ ಬಂದಿದೆ. ಕೂಡಲೇ ಬಸ್ತಿ ಬವಾ ಖೇಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಮದುವೆ, ಮೊದಲ ರಾತ್ರಿ!

ಮದುವೆ, ಮೊದಲ ರಾತ್ರಿ!

ಟ್ಯೂಷನ್ ಶಿಕ್ಷಕಿ ಹಾಗೂ ಆಕೆಯ ಮನೆಯವರು ಹಳದಿ-ಮೆಹಂದಿ ಕಾರ್ಯಕ್ರಮ ಸೇರಿದಂತೆ ಎಲ್ಲ ಸಂಪ್ರದಾಯಗಳನ್ನೂ ಬಲವಂತವಾಗಿ ನಡೆಸಿದ್ದರು. ಜತೆಗೆ ಮೊದಲ ರಾತ್ರಿಯನ್ನೂ ಏರ್ಪಡಿಸಿದ್ದರು. ಮರುದಿನ ಅಕೆಯ ಕೈಬಳೆಗಳನ್ನು ಒಡೆದು ಆಕೆಯನ್ನು ವಿಧವೆ ಎಂದು ಘೋಷಿಸಿದ್ದರು. ಜ್ಯೋತಿಷಿ ಸಲಹೆ ನೀಡಿದ ಎಲ್ಲ ಆಚರಣೆಗಳನ್ನು ಪಾಲಿಸಲು ಶ್ರದ್ಧಾಂಜಲಿ ಸಭೆಯನ್ನೂ ನಡೆಸಿದ್ದರು.

ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ತೆಲಂಗಾಣ ಹೆಡ್ ಮಾಸ್ಟರ್ ಬಂಧನಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ತೆಲಂಗಾಣ ಹೆಡ್ ಮಾಸ್ಟರ್ ಬಂಧನ

ದೂರು ಹಿಂಪಡೆಯಲು ಒತ್ತಡ

ದೂರು ಹಿಂಪಡೆಯಲು ಒತ್ತಡ

ಬಾಲಕನನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದ ಮನೆಯವರು, ಆತನಿಂದ ಎಲ್ಲ ಕೆಲಸಗಳನ್ನೂ ಮಾಡಿಸಿದ್ದರು ಎಂದು ಆರೋಪಿಸಲಾಗಿದೆ. ಬಾಲಕನ ಕುಟುಂಬದವರು ದೂರು ದಾಖಲಿಸಿದ ಬಳಿಕ ಪೊಲೀಸ್ ಠಾಣೆಗೆ ತೆರಳಿದ್ದ ಶಿಕ್ಷಕಿ, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾಳೆ. ದೂರು ಹಿಂದಕ್ಕೆ ಪಡೆಯುವಂತೆ ಆಕೆಯ ಕುಟುಂಬದವರು ಒತ್ತಡ ಹೇರಿದ್ದಾರೆ.

ಕುಟುಂಬಗಳ ನಡುವೆ ಸಂಧಾನ

ಕುಟುಂಬಗಳ ನಡುವೆ ಸಂಧಾನ

ಎರಡೂ ಕುಟುಂಬದವರು ಕೊನೆಗೆ ರಾಜಿ ಸಂಧಾನ ಮಾಡಿಕೊಂಡಿದ್ದಾರೆ. ಬಳಿಕ ಬಾಲಕನ ಕುಟುಂಬ ದೂರು ಹಿಂದಕ್ಕೆ ಪಡೆದಿದೆ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ತನಿಖೆಗೆ ಆದೇಶಿಸಿದ್ದಾರೆ. ಬಾಲಕ ಅಪ್ರಾಪ್ತ ವಯಸ್ಸಿನವನಾಗಿದ್ದು, ಆತನನ್ನು ವಶದಲ್ಲಿರಿಸಿಕೊಂಡಿದ್ದು ಅಕ್ರಮ ಎಂದು ಪರಿಗಣಿಸಲಾಗಿದೆ. ಇದುವರೆಗೂ ಯಾರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ.

English summary
A tuition teacher married her 13 year old student to overcome Manglik Dosha in her Kundli as suggested by a priest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X