ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿ ಅತ್ಯಾಚಾರ, ಹತ್ಯೆ ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್

|
Google Oneindia Kannada News

ಹರಿಯಾಣ, ಡಿಸೆಂಬರ್ 23: ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಕೋರ್ಟ್ ಹತ್ತೊಂಬತ್ತು ವರ್ಷದ ಯುವಕನಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈತ ಈ ವರ್ಷದ ಜೂನ್ ನಲ್ಲಿ ಅತ್ಯಾಚಾರ ಎಸಗಿದ್ದ. ಅರು ತಿಂಗಳ ಒಳಗಾಗಿ ಪ್ರಕರಣದ ವಿಚಾರಣೆಯನ್ನು ಪೂರ್ತಿಗೊಳಿಸಲಾಗಿದೆ.

ಹಗಲು ವೇಳೆಯಲ್ಲೇ ನಡೆದ ಈ ಕೃತವನ್ನು ವಿರಳಾತಿ ವಿರಳ ಎಂದು ಪರಿಗಣಿಸಲಾಗಿದೆ. 2012ರಲ್ಲಿ ನಡೆದ ನಿರ್ಭಯಾ ಪ್ರಕರಣಕ್ಕಿಂತ ಇದು ಯಾವುದಕ್ಕೂ ಕಡಿಮೆಯಿಲ್ಲ. ಆದ್ದರಿಂದ ಆರೋಪಿಯು ಗಲ್ಲು ಶಿಕ್ಷೆಗೆ ಅರ್ಹ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನರೇಶ್ ಕುಮಾರ್ ಆದೇಶಿಸಿದ್ದಾರೆ.

48 ವರ್ಷದ ಬ್ರಿಟಿಷ್ ಪ್ರವಾಸಿ ಮೇಲೆ ಗೋವಾದಲ್ಲಿ ಅತ್ಯಾಚಾರ48 ವರ್ಷದ ಬ್ರಿಟಿಷ್ ಪ್ರವಾಸಿ ಮೇಲೆ ಗೋವಾದಲ್ಲಿ ಅತ್ಯಾಚಾರ

ಈ ವರ್ಷದ ಜೂನ್ ಒಂಬತ್ತನೇ ತಾರೀಕು ಈ ಘಟನೆ ನಡೆದಿತ್ತು. ಸಂತ್ರಸ್ತೆ ಒಬ್ಬಳೇ ಮನೆಯಲ್ಲಿರುವ ಸಮಯದಲ್ಲಿ ಆಕೆಗೆ ಆಮಿಷವೊಡ್ಡಿದ್ದ ಆರೋಪಿ, ಈ ಕೃತ್ಯ ಎಸಗಿದ್ದ. ಆ ಯುವಕ ಅತ್ಯಾಚಾರ ಎಸಗುವ ಮುನ್ನ ಎಂಟು ವರ್ಷದ ಬಾಲಕಿಗೆ ಅಶ್ಲೀಲ ದೃಶ್ಯಾವಳಿಗಳನ್ನು ತೋರಿಸಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿತ್ತು.

Teenager gets death penalty for raping, killing 8 year old in Haryana

ಯಾವಾಗ ಆ ಬಾಲಕಿ ತಡೆ ಒಡ್ಡಲು ಯತ್ನಿಸಿ, ಅಳಲು ಆರಂಭಿಸಿದ್ದಳೋ ಆಗ ಆಕೆಯ ಬಾಯಿಯನ್ನು ಮುಚ್ಚಿ, ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ, ಆ ನಂತರ ಅತ್ಯಾಚಾರ ಎಸಗಿದ್ದ. ಎಲ್ಲಿ ಆಕೆ ತನ್ನ ಕುಟುಂಬಕ್ಕೆ ಈ ಮಾಹಿತಿ ತಿಳಿಸುತ್ತಾಳೋ ಎಂಬ ಆತಂಕದಲ್ಲಿ ಬಾಲಕಿಯನ್ನು ಕೊಲೆ ಮಾಡಿ, ಶವವನ್ನು ತನ್ನ ಕೋಣೆಯ ಅಲ್ಮೇರಾದಲ್ಲಿ ಆರೋಪಿ ಬಚ್ಚಿಟ್ಟಿದ್ದ. ಆರೋಪಿಯ ಗೊಂದಲದ ಹೇಳಿಕೆಯಿಂದ ಪೊಲೀಸರಿಗೆ ಈ ಪ್ರಕರಣ ಭೇದಿಸಲು ಸಾಧ್ಯವಾಯಿತು.

ತಾಯಿ, ತಮ್ಮನನ್ನು ಕೊಲ್ಲುವುದಾಗಿ ಹೇಳಿ ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರತಾಯಿ, ತಮ್ಮನನ್ನು ಕೊಲ್ಲುವುದಾಗಿ ಹೇಳಿ ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರ

‌ಈ ಪ್ರಕರಣವನ್ನು ವಿರಳಾತಿವಿರಳ ಎಂದು ನ್ಯಾಯಾಲಯ ಪರಿಗಣಿಸುತ್ತದೆ. ಮರಣದಂಡನೆಗಿಂತ ಕಡಿಮೆ ಪ್ರಮಾಣದ ಶಿಕ್ಷೆ ನೀಡಲು ಸಾಧ್ಯವಿಲ್ಲ. ಆ ಬಾಲಕಿ ಅನುಭವಿಸಿದ ಯಾತನೆಯನ್ನು ಪರಿಗಣಿಸಲಾಗಿದೆ. ಇದನ್ನು ಕೋರ್ಟ್ ನಿರ್ಲಕ್ಷಿಸಲು ಸಾಧ್ಯವಿಲ್ಲ. ನಿರ್ಭಯಾ ಪ್ರಕರಣಕ್ಕಿಂತ ಇದು ಕಡಿಮೆ ಇಲ್ಲ. ಆ ಮಗುವಿನ ಉಜ್ವಲ ಭವಿಷ್ಯವನ್ನು ಅಪರಾಧಿ ನಾಶ ಪಡಿಸಿದ್ದಾನೆ. ಹಗಲು ವೇಳೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನರೇಶ್ ಕುಮಾರ್ ಹೇಳಿದ್ದಾರೆ.

English summary
A Rewari court in Haryana has awarded capital punishment to a 19-year-old boy for raping and murdering an eight-year-old girl in June earlier this year. Completing the trial in around six months, the court of additional sessions judge Naresh Kumar termed this daylight incident a rarest of rare and said it was no lesser than the 2012 Nirbhaya case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X