ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ನಿ ಡಿಯೋಲ್ ಸಂಸದ ಸ್ಥಾನಕ್ಕೆ ಕುತ್ತು, ಆಯೋಗದ ಅಂತಿಮ ವರದಿ ಔಟ್

|
Google Oneindia Kannada News

ಅಮೃತ್ ಸರ್, ಜುಲೈ 07: ಹಿಂದಿ ಚಿತ್ರರಂಗದ ಹಿರಿಯ ನಟ, ಗುರ್ ದಾಸ್ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ತಮ್ಮ ಸಂಸತ್ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿದ ಮೊತ್ತ ಮಿತಿ ಮೀರಿದ್ದರಿಂದ ಸನ್ನಿ ಡಿಯೋಲ್ ಗೆ ಚುನಾವಣಾ ಆಯೋಗವು ಕಳೆದ ತಿಂಗಳು ನೋಟಿಸ್ ನೀಡಿತ್ತು. ಈ ಬಗ್ಗೆ ಉತ್ತರಿಸಲು ಸನ್ನಿ ಡಿಯೋಲ್ ಗೆ ಸೂಚಿಸಲಾಗಿತ್ತು. ಈಗ ಈ ಕುರಿತಂತೆ ಅಂತಿಮ ವರದಿಯನ್ನು ಚುನಾವಣಾ ಆಯೋಗ ತಯಾರಿಸಿದೆ.

ಗುರ್ ದಾಸ್ಪುರ್ ಅಭ್ಯರ್ಥಿ ಸನ್ನಿ ಡಿಯೋಲ್ ಆಸ್ತಿ ವಿವರ ಗುರ್ ದಾಸ್ಪುರ್ ಅಭ್ಯರ್ಥಿ ಸನ್ನಿ ಡಿಯೋಲ್ ಆಸ್ತಿ ವಿವರ

ಅಭ್ಯರ್ಥಿಗೆ ಚುನಾವಣಾ ಖರ್ಚು ವೆಚ್ಚದ ಮಿತಿ 70 ಲಕ್ಷ ರು ಎಂದು ಆಯೋಗ ನಿಗದಿ ಪಡಿಸಲಾಗಿತ್ತು. ಆದರೆ, ಸನ್ನಿ ಡಿಯೋಲ್ ಅವರು ನಿಗದಿತ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಈ ಬಗ್ಗೆ ಪ್ರಶ್ನಿಸಿ ನೋಟಿಸ್ ಕಳಿಸಲಾಗಿತ್ತು. ಈ ಬಗ್ಗೆ ಅವರಿಂದ ಬಂದಿರುವ ಉತ್ತರವನ್ನು ಸೇರಿಸಿ, ಅಂತಿಮ ವರದಿಯನ್ನು ತಯಾರಿಸಲಾಗಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಗುರ್ ದಾಸ್ಪುರ್ ಜಿಲ್ಲಾಧಿಕಾರಿ ವಿಪುಲ್ ಉಜ್ವಲ್ ಅವರು ಹೇಳಿದ್ದಾರೆ.

Sunny Deols poll expenditure found Rs 8.51 lakh more than statutory limit

ಸನ್ನಿ ಡಿಯೋಲ್ ಅವರ ಚುನಾವಣಾ ಖರ್ಚು ವೆಚ್ಚ 86 ಲಕ್ಷ ರುಗೂ ಅಧಿಕವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಫ್ಯಾನ್ ಆಫ್ ಸನ್ನಿ ಡಿಯೋಲ್ ಎಂಬ ಫೇಸ್ ಬುಕ್ ಪುಟದ ಮೂಲಕ ಚುನಾವಣಾ ಪ್ರಚಾರ ನಡೆಸಿದ್ದರ ಬಗ್ಗೆ ಈ ಮುಂಚೆ ಪ್ರಶ್ನಿಸಲಾಗಿತ್ತು.

ಆದರೆ, ತನಿಖೆ ನಂತರ ಸನ್ನಿ ಡಿಯೋಲ್ ಅವರು 78,51,592 ರು ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದು ಆಯೋಗ ನಿಗದಿಪಡಿಸಿರುವ ಮೊತ್ತಕ್ಕಿಂತ 8.51 ಲಕ್ಷ ರು ಅಧಿಕವಾಗಿದೆ ಹೀಗಾಗಿ, ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಲೋಕಸಭೆ ಚುನಾವಣೆ 2019ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ 59 ವರ್ಷ ವಯಸ್ಸಿನ ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಜಖಾರ್ ಅವರನ್ನು 82,459 ಮತಗಳಿಂದ ಸೋಲಿಸಿ ಮೊದಲ ಪ್ರಯತ್ನದಲ್ಲೇ ಸಂಸದರಾಗಿ ಆಯ್ಕೆಯಾದರು. ಈ ಕ್ಷೇತ್ರದಲ್ಲಿ 1998,1999,2004 ಹಾಗೂ 2014ರಲ್ಲಿ ದಿವಂಗತ ವಿನೋದ್ ಖನ್ನಾ ಅವರು ಆಯ್ಕೆಯಾಗಿದ್ದರು. (ಪಿಟಿಐ)

English summary
The poll expenditure of Gurdaspur MP and actor Sunny Deol has been found exceeding the statutory limit of Rs 70 lakh, an election official said on Saturday. "The District Election Office of Gurdaspur has sent the final report of poll expenditure to the Election Commission of India," he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X