• search
 • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನಕ್ಕೆ ಹೋಗೋದಿಲ್ಲ ಎಂದ ರವಿಶಂಕರ್ ಗುರೂಜಿ

|

ಅಮೃತಸರ್, ನವೆಂಬರ್.08: ಪಾಕಿಸ್ತಾನದ ನರಿಬುದ್ಧಿ ಇಡೀ ವಿಶ್ವಕ್ಕೆ ಗೊತ್ತಿದೆ. ಒಂದು ಕಡೆ ಸ್ನೇಹಹಸ್ತ ಚಾಚುವ ಪಾಕಿಸ್ತಾನ್, ಇನ್ನೊಂದಡೆ ಕಡೆಯಿಂದ ದಾಳಿಗೆ ಸಂಚು ರೂಪಿಸುತ್ತಿರುತ್ತದೆ. ಇದನ್ನು ಅರಿತ ನೆರೆ ರಾಷ್ಟ್ರಗಳು ಪಾಕ್ ಜೊತೆ ವ್ಯವಹರಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿರುತ್ತವೆ. ಅಂಥದ್ದೆ ಒಂದು ನಡೆಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾಗಿರುವ ರವಿಶಂಕರ್ ಗುರೂಜಿ ತೋರಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಸಿಖ್ ರ ಪವಿತ್ರ ಕ್ಷೇತ್ರ ಕರ್ತಾಪುರ್ ಕಾರಿಡಾರ್ ಯೋಜನೆ ನವೆಂಬರ್.09ರಂದು ಉದ್ಘಾಟನೆಗೊಳ್ಳಲಿದೆ. ಈ ಸುಸಂದರ್ಭದಲ್ಲಿ ಉಪಸ್ಥಿತಿ ವಹಿಸುವಂತೆ ಪಾಕಿಸ್ತಾನ ಸ್ವಾಗತ ಕೋರಿತ್ತು. ನೆರೆ ರಾಷ್ಟ್ರದ ಈ ಮನವಿಯನ್ನು ರವಿಶಂಕರ್ ಗುರೂಜಿ, ನಾಜೂಕಾಗಿ ತಿರಸ್ಕರಿಸಿದ್ದಾರೆ.

   Bramanda guruji predicts the state politics | Oneindia Kannada

   ಕರ್ತಾರ್ ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ ಸಹಿ: ಏನೆಲ್ಲಾ ಉಪಯೋಗ?

   ಕರ್ತಾಪುರ್ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಲು ರವಿಶಂಕರ್ ಗುರೂಜಿ ಹಿಂದೇಟು ಹಾಕಿದ್ದಾರೆ. ತಮ್ಮ ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದಾರೆ.

   ಸಿಖ್ ರ ಪವಿತ್ರ ಕ್ಷೇತ್ರವಾಗಿರುವ ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯ ಡೇರಾ ಬಾಬಾ ನಾನಕ್ ದೇವಸ್ಥಾನದಿಂದ ಪಾಕಿಸ್ತಾನದ ಕರ್ತಾಪುರ್ ನಲ್ಲಿರುವ ಗುರು ನಾನಕ್ ರ ಜನ್ಮಸ್ಥಳ ದರ್ಬಾರ್ ಸಾಹೀಬ್ ಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕರ್ತಾಪುರ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಿಂದ ವೀಸಾ ಇಲ್ಲದೇ ಭಾರತೀಯ ಯಾತ್ರಿಕರು ಪ್ರಯಾಣ ಬೆಳೆಸಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಆದರೆ, ಅಗತ್ಯ ಪಾಸ್ ಪೋರ್ಟ್ ದಾಖಲೆಗಳನ್ನು ಯಾತ್ರಿಕರು ಹೊಂದಬೇಕಿದೆ.

   ಎರಡು ದೇಶಗಳ ನಡುವೆ ನಿರ್ಮಿಸಿರುವ ಕರ್ತಾಪುರ್ ಯೋಜನೆಗೆ ನವೆಂಬರ್.09ರಂದು ಚಾಲನೆ ಸಿಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಭಾಗದಲ್ಲಿ ಕರ್ತಾಪುರ್ ಯೋಜನೆಯನ್ನು ನಾಳೆ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ಕೇಂದ್ರ ಸಚಿವ ಹರ್ ದೀಪ್ ಪುರಿ, ಹರ್ಸಿಮ್ರತ್ ಕೌರ್ ಬಾದಲ್, ಉಪಸ್ಥಿತಿ ವಹಿಸಲಿದ್ದಾರೆ.

   English summary
   Sri Ravi Shankar Guruji Will Not Be Attend The KartapurCorridor Opening. Reject The Pakistan Affer For Due To Prior Commirment
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X