ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸ ಸಂಗ್ರಹ ಮಾಡುವ ಕಾರ್ಮಿಕನ ಮೇಲೆ ಹೂಮಳೆ ಸುರಿದ ನಾಗರಿಕರು

|
Google Oneindia Kannada News

ಪಟಿಯಾಲ (ಪಂಜಾಬ್), ಏಪ್ರಿಲ್ 2: ದಿನ ನಿತ್ಯ ತಮ್ಮ ಮನೆಯ ರಸ್ತೆಯನ್ನು ಸ್ವಚ್ಛ ಮಾಡಿ, ಕಸವನ್ನು ಸಂಗ್ರಹ ಮಾಡುವ ಪೌರ ಕಾರ್ಮಿಕನಿಗೆ ವಿಶೇಷ ಗೌರವವನ್ನು ಪಂಜಾಬ್‌ನಲ್ಲಿ ನೀಡಲಾಗಿದೆ. ಅಲ್ಲಿನ ನಾಗರಿಕರು ಪೌರ ಕಾರ್ಮಿಕರಿಗೆ ಹೂವಿನ ಮಳೆಯನ್ನು ಸುರಿಸಿದ್ದಾರೆ.

ಪಂಜಾಬ್ ಪಟಿಯಾಲದಲ್ಲಿ ಎಂದಿನಂತೆ ನಿನ್ನೆಯೂ ಪೌರ ಕಾರ್ಮಿಕ ಆಗಮಿಸಿ ತನ್ನ ಕೆಲಸದಲ್ಲಿ ನಿರತನಾಗಿದ್ದರು. ಆ ವೇಳೆ ಮೇಲಿಂದ ಹೂವಿನ ರಾಶಿ ಬಿಳಲು ಶುರು ಆಯ್ತು. ಏನಿದು ಎಂದು ನೋಡಿದ ಅವರಿಗೆ, ಅಲ್ಲಿನ ಜನರು ಮನೆಯ ಮಹಡಿ ಮೇಲೆ ನಿಂತು ಹೂ ಸುರಿಯುವ ದೃಶ್ಯ ಕಾಣಿಸಿತು. ಈ ರೀತಿ ಅವರನ್ನು ಅಲ್ಲಿನ ಜನರು ಸ್ವಾಗತ ಮಾಡಿದರು.

ಚಿಕ್ಕಬಳ್ಳಾಪುರದಲ್ಲಿ 9 ಜನರಿಗೆ ಕೊರೊನಾ ಸೋಂಕುಚಿಕ್ಕಬಳ್ಳಾಪುರದಲ್ಲಿ 9 ಜನರಿಗೆ ಕೊರೊನಾ ಸೋಂಕು

ಕೊರೊನಾ ವೈರಸ್‌ ಹರಡುತ್ತಿರುವ ಇಂತಹ ಅಪಾಯದ ಪರಿಸ್ಥಿತಿಯಲ್ಲಿಯೂ ತನ್ನ ಜೀವದ ಬಗ್ಗೆ ಯೋಚನೆ ಮಾಡಿದೆ ಆ ವ್ಯಕ್ತಿ ಕೆಲಸದಲ್ಲಿ ನಿರತರಾಗಿದ್ದಾರೆ. ಕೊರೊನಾ ತಡೆಯಲು, ತಮ್ಮ ಬಡಾವಣೆಯನ್ನು ಸ್ವಚ್ಛ ಮಾಡುತ್ತಿದ್ದಾರೆ ಎಂದು ಅಲ್ಲಿನ ನಾಗರಿಕರು ಪೌರ ಕಾರ್ಮಿಕನಿಗೆ ಗೌರವ ಸಲ್ಲಿಸಿದರು.

Residents Of Patiala Applauded Sanitation Workers By Showering Flower On Them

ರಸ್ತೆಯಲ್ಲಿ ಹೋಗುತ್ತಿರುವ ಪೌರ ಕಾರ್ಮಿಕನಿಗೆ ಚಪ್ಪಾಳೆ ತಟ್ಟುವ ಮೂಲಕ ನಮನ ಸಲ್ಲಿಸಿದರು. ಇನ್ನು ಕೆಲವರು ನೋಟಿನ ಹಾರವನ್ನು ಹಾಕಿ ಬೆನ್ನು ತಟ್ಟಿದರು. ಜನರ ಪ್ರೀತಿ ಕಂಡು ಆ ಪೌರ ಕಾರ್ಮಿಕ ತುಂಬ ಖುಷಿಯಾದರು.

ಅಂದಹಾಗೆ, ಪಂಜಾಬ್‌ನಲ್ಲಿ ಈವರೆಗೆ 46 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. 4 ಜನರು ಮರಣ ಹೊಂದಿದ್ದಾರೆ. ಒಬ್ಬ ವ್ಯಕ್ತಿ ಕೊರೊನಾದಿಂದ ಗುಣಮುಖವಾಗಿದ್ದಾನೆ.

English summary
Residents of Nabha in Patiala applauded sanitation workers by clapping for them and showering flower petals on them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X