ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ನನ್ನನ್ನು ಕಳಿಸಿದ್ದು ನನ್ನ ಕ್ಯಾಪ್ಟನ್ ರಾಹುಲ್ : ಸಿಧು

|
Google Oneindia Kannada News

Recommended Video

ಪಾಕಿಸ್ತಾನಕ್ಕೆ ನನ್ನನ್ನು ಕಳಿಸಿದ್ದು ನನ್ನ ಕ್ಯಾಪ್ಟನ್ ರಾಹುಲ್ : ಸಿಧು | Oneindia Kannada

ನವದೆಹಲಿ, ನವೆಂಬರ್ 30: 'ಪಾಕಿಸ್ತಾನಕ್ಕೆ ನನ್ನನ್ನು ಕಳಿಸಿದ್ದು ನನ್ನ ಕ್ಯಾಪ್ಟನ್ ರಾಹುಲ್ ಗಾಂಧಿ' ಎಂದು ಕಾಂಗ್ರೆಸ್ ನಾಯಕ, ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಹೇಳಿದ್ದಾರೆ.

ರಾಹುಲ್ ಗಾಂಧಿ ನನ್ನ ಕ್ಯಾಪ್ಟನ್, ನಾನು ಯಾವಾಗ ಅಲ್ಲಿಗೆ ಹೋದರೂ ಅವರ ಅನುಮತಿ ಕೇಳಿಕೊಂಡೆ ಹೋಗುತ್ತೇನೆ. ಕನಿಷ್ಟ 20ಕ್ಕೂ ಅಧಿಕ ಕಾಂಗ್ರೆಸ್ ನಾಯಕರು ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು.

ಪಾಕ್ ಏಜೆಂಟ್ ನಂತಾಗಿರುವ ಸಿಧು ಬಗ್ಗೆ ರಾಹುಲ್ ನಿಲುವೇನು?: ಬಾದಲ್ಪಾಕ್ ಏಜೆಂಟ್ ನಂತಾಗಿರುವ ಸಿಧು ಬಗ್ಗೆ ರಾಹುಲ್ ನಿಲುವೇನು?: ಬಾದಲ್

ಕ್ಯಾಪ್ಟನ್ ಅಮರೀಂದರ್ ಸಿಂಗ್ ನನಗೆ ತಂದೆ ಸಮಾನ. ನಾನು ಅವರಿಗೆ (ಪಾಕಿಸ್ತಾನ) ವಾಗ್ದಾನ ನೀಡಿದ್ದೇನೆ. ನಾನು ಅಲ್ಲಿಗೆ ಹೋಗುವ ವಿಷಯವನ್ನು ತಿಳಿಸಿದ್ದೆ ಎಂದಿದ್ದಾರೆ. ಆದರೆ, ಸಿಧು ಅವರ ಪಾಕಿಸ್ತಾನ ಭೇಟಿ ಬಗ್ಗೆ ಸಿಎಂ ಅಮರೀಂದರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

Rahul Gandhi sent me to Pakistan: Navjot Singh Sidhu

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ನವೆಂಬರ್ 28ರಂದು ಕರ್ತಾರ್ ಪುರ್ ಸಾಹೀಬ್ ಕಾರಿಡಾರ್ ಸಮಾರಂಭದಲ್ಲಿ ನವಜ್ಯೋತ್ ಸಿಂಗ್ ಸಿಧು ಅವರು ಪಾಲ್ಗೊಂಡಿದ್ದರು. ಕರ್ತಾರ್ ಪುರ್ ಬಗ್ಗೆ ಜನಮಾನಸದಲ್ಲಿ ನೆನಪು ಉಳಿಯುವಂಥ ಕೆಲಸವನ್ನು ಇಮ್ರಾನ್ ಖಾನ್ ಮಾಡಿದ್ದಾರೆ ಎಂದು ಸಿಧು ಹೊಗಳಿದ್ದರು.

ಸಿಧು ಪ್ರಧಾನಿ ಆಗೋ ತನಕ ಕಾಯಬೇಕಾದ ಅಗತ್ಯ ಇರಲ್ಲ ಅಂದುಕೊಳ್ತೀನಿ ಎಂದ ಇಮ್ರಾನ್ ಖಾನ್ಸಿಧು ಪ್ರಧಾನಿ ಆಗೋ ತನಕ ಕಾಯಬೇಕಾದ ಅಗತ್ಯ ಇರಲ್ಲ ಅಂದುಕೊಳ್ತೀನಿ ಎಂದ ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವ ಮೂಲಕ ಸಿಧು ಅವರು ಹೊಸ ವಿವಾದ ಹುಟ್ಟು ಹಾಕಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ಆಲಿಂಗಿಸಿಕೊಂಡಿದ್ದರು. ಈ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ.

English summary
Congress leader and Punjab minister Navjot Singh Sidhu on Friday said he was sent to Pakistan by Congress president Rahul Gandhi. He said his captain is Rahul Gandhi and wherever he went was with his permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X