ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಏನೇನಿದೆ?

|
Google Oneindia Kannada News

ಅಮೃತಸರ್, ಸಪ್ಟೆಂಬರ್.09: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಪಂಜಾಬ್ ಸರ್ಕಾರವು ಆರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕೆಲವು ನಿಯಮಗಳನ್ನು ಸಡಿಲಿಕೆಗೊಳಿಸಿದೆ.

ಪಂಜಾಬ್ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಿಡುಗಡೆಗೊಳಿಸಿದ್ದಾರೆ. ರಾಜ್ಯದಲ್ಲಿ ಶನಿವಾರ ರಾತ್ರಿ ಹೇರುತ್ತಿದ್ದ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದ್ದು, ಸಪ್ಟೆಂಬರ್.30ರವರೆಗೂ ಪ್ರತಿ ಭಾನುವಾರ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಸರ್ಕಾರವು ತಿಳಿಸಿದೆ.

ಅಸ್ಸಾಂನಲ್ಲಿ ಶಾಲಾ-ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗೆ ಅವಕಾಶ ಅಸ್ಸಾಂನಲ್ಲಿ ಶಾಲಾ-ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗೆ ಅವಕಾಶ

"ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಪಂಜಾಬ್ ನ 167 ಮುನ್ಸಿಪಲ್ ನಗರಗಳಲ್ಲೂ ಪ್ರತಿ ಭಾನುವಾರ ರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಶನಿವಾರವೂ ಹೇರುತ್ತಿದ್ದ ನಿಷೇಧಾಜ್ಞೆ ಮಾತ್ರ ತೆರವುಗೊಳಿಸಲಾಗಿದೆ" ಎಂದು ಪಂಜಾಬ್ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

Punjab Unlock 4 Guidelines: Night Curfew in Only On Sundays Till Sept 30


ಕೊವಿಡ್-19 ಪರಿಸ್ಥಿತಿ ಅವಲೋಕಿಸಿ ಸಿಎಂ ಕ್ರಮ:

ಪಂಜಾಬ್ ನ ನಗರ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪರಿಸ್ಥಿತಿಯ ಅವಲೋಕನ ನಡೆಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಕೆಲವು ನಿರ್ಬಂಧಗಳನ್ನು ಸಡಿಲಿಕೆಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ರಾತ್ರಿ 9.30 ರಿಂದ ಬೆಳಗ್ಗೆ 5 ಗಂಟೆವರೆಗೂ ಅನಗತ್ಯ ಸಂಚಾರಕ್ಕೆ ಈಗಲೂ ನಿರ್ಬಂಧ ವಿಧಿಸಲಾಗಿದೆ.

ಅನಗತ್ಯ ಪ್ರಯಾಣವನ್ನು ಹೊರತುಪಡಿಸಿದಂತೆ ಅಗತ್ಯ ಸರಕು ಸಾಮಗ್ರಿಗಳ ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ಅಂತರ್-ರಾಜ್ಯ, ಅಂತಾರಾಜ್ಯಗಳಿಂದ ಸರಕುಗಳ ಸಾಗಾಟ ಮತ್ತು ಕೂಲಿ ಕಾರ್ಮಿಕರು, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ.

ಅಗತ್ಯ ವಸ್ತುಗಳ ಖರೀದಿ, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು, ಹಾಲಿನ ಡೈರಿ, ಮೀನುಗಾರಿಕೆ, ಬ್ಯಾಂಕ್, ಎಟಿಎಂ, ಶೇರು ಮಾರುಕಟ್ಟೆ, ವಿಮಾ ಕಂಪನಿಗಳು, ಸಾರ್ವಜನಿಕ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

English summary
Punjab Unlock 4 Guidelines: Night Curfew in Only On Sundays Till Sept 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X