ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಜೋತ್ ಸಿಂಗ್ ಸಿಧು ರಾಜೀನಾಮೆಗೆ ಪಂಜಾಬ್ ಸಚಿವರ ಆಗ್ರಹ

|
Google Oneindia Kannada News

ಅಮೃತಸರ್, ಡಿಸೆಂಬರ್ 02: ಪಾಕಿಸ್ತಾನದ 'ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಬಂದ ಬಳಿಕ ಕಾಂಗ್ರೆಸ್ ನಾಯಕ, ಪಂಜಾಬ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಕೆಟ್ಟ ಸಮಯ ಆರಂಭವಾಗಿದೆ. ಸಿಧು ರಾಜೀನಾಮೆ ಪಂಜಾಬಿನ್ ಸಚಿವರು ಆಗ್ರಹಿಸಿದ್ದಾರೆ.

ಪಾಕಿಸ್ತಾನಕ್ಕೆ ನನ್ನನ್ನು ಕಳಿಸಿದ್ದು ನನ್ನ ಕ್ಯಾಪ್ಟನ್ ರಾಹುಲ್ ಗಾಂಧಿ ಎಂದಿದ್ದ ಸಿಧು ನಂತರ ಉಲ್ಟಾ ಹೊಡೆದಿದ್ದರು. "ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ. ರಾಹುಲ್ ಗಾಂಧಿಯವರೇ ನನ್ನನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಿದ್ದರು ಎಂದು ನಾನು ಹೇಳಿಯೇ ಇಲ್ಲ. ಅಷ್ಟಕ್ಕೂ ನನ್ನನ್ನು ರಾಹುಲ್ ಗಾಂಧಿ ಅವರು ಕಳಿಸಿಯೇ ಇಲ್ಲ. ಗೆಳೆಯ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆಮಂತ್ರಣದ ಮೇರೆಗೆ ನಾನು ಪಾಕಿಸ್ತಾನಕ್ಕೆ ತೆರಳಿದ್ದೆ" ಎಂದು ಮಾಜಿ ಕ್ರಿಕೆಟಿಗ ಸಿಧು ಇದೀಗ ಸಮಜಾಯಿಷಿ ನೀಡಿದ್ದರು. ಆದರೆ, ಸಿಧು ವಿರುದ್ಧ ಪಂಜಾಬ್ ಕಾಂಗ್ರೆಸ್ ಗರಂ ಆಗಿದ್ದು, ಸಿಧು ತಲೆದಂಡಕ್ಕೆ ಆಗ್ರಹಿಸಿದೆ.

ಪಾಕ್ ಏಜೆಂಟ್ ನಂತಾಗಿರುವ ಸಿಧು ಬಗ್ಗೆ ರಾಹುಲ್ ನಿಲುವೇನು?: ಬಾದಲ್ಪಾಕ್ ಏಜೆಂಟ್ ನಂತಾಗಿರುವ ಸಿಧು ಬಗ್ಗೆ ರಾಹುಲ್ ನಿಲುವೇನು?: ಬಾದಲ್

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಹ್ವಾನದ ಮೇರೆಗೆ ನವೆಂಬರ್ 28ರಂದು ಕರ್ತಾರ್ ಪುರ್ ಸಾಹೀಬ್ ಕಾರಿಡಾರ್ ಸಮಾರಂಭದಲ್ಲಿ ನವಜ್ಯೋತ್ ಸಿಂಗ್ ಸಿಧು ಅವರು ಪಾಲ್ಗೊಂಡಿದ್ದರು. ಕರ್ತಾರ್ ಪುರ್ ಬಗ್ಗೆ ಜನಮಾನಸದಲ್ಲಿ ನೆನಪು ಉಳಿಯುವಂಥ ಕೆಲಸವನ್ನು ಇಮ್ರಾನ್ ಖಾನ್ ಮಾಡಿದ್ದಾರೆ ಎಂದು ಸಿಧು ಹೊಗಳಿದ್ದರು.

Punjab Minister Seeks Navjot Singh Sidhus ResignationPunjab Minister Seeks Navjot Singh Sidhus Resignation

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವ ಮೂಲಕ ಸಿಧು ಅವರು ಹೊಸ ವಿವಾದ ಹುಟ್ಟು ಹಾಕಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ಆಲಿಂಗಿಸಿಕೊಂಡಿದ್ದರು. ಈ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ.

ವಿವಾದ ಸೃಷ್ಟಿಸಿತು ಖಲೀಸ್ತಾನ್ ಹೋರಾಟಗಾರನ ಜತೆಗಿನ ಸಿಧು ಫೋಟೋವಿವಾದ ಸೃಷ್ಟಿಸಿತು ಖಲೀಸ್ತಾನ್ ಹೋರಾಟಗಾರನ ಜತೆಗಿನ ಸಿಧು ಫೋಟೋ

ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕ್ಯಾಪ್ಟನ್ ಎಂದು ಪರಿಗಣಿಸದಿದ್ದರೆ ಸಿಧು ಅವರು ರಾಜೀನಾಮೆ ನೀಡಿ ಮನೆಗೆ ತೆರಳಲಿ, ಕ್ಯಾಬಿನೆಟ್ ನಲ್ಲಿ ಉಳಿಯುವ ಯಾವುದೇ ನೈತಿಕತೆ ಇಲ್ಲ ಎಂದು ಸಚಿವ ತ್ರಿಪ್ತ್ ರಾಜೀಂದರ್ ಸಿಂಗ್ ಬಾಜ್ವಾ ಹೇಳಿದ್ದಾರೆ.

English summary
A day after cricketer-turned-politician Navjot Singh Sidhu's remark on Chief Minister Amarinder Singh, a senior Punjab minister Saturday sought his resignation from the state cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X