ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀವ್ರ ಟೀಕೆಯ ನಂತರ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಮಾರಾಟದಿಂದ ಹಿಂದೆ ಸರಿದ ಪಂಜಾಬ್ ಸರ್ಕಾರ

|
Google Oneindia Kannada News

ಅಮೃತಸರ್, ಜೂನ್ 4: ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಬೆಲೆಗೆ ಲಸಿಕೆ ಮಾರಾಟಕ್ಕೆ ಮುಂದಾಗಿದ್ದ ಪಂಜಾಬ್ ಸರ್ಕಾರ ತೀವ್ರ ಟೀಕೆಗಳ ನಂತರ ತನ್ನ ನಿರ್ಧಾರವನ್ನು ಬದಲಿಸಿದೆ. ಕೋವಾಕ್ಸಿನ್ ಲಸಿಕೆಗಳನ್ನು ಹೆಚ್ಚಿನ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವ ಪಂಜಾಬ್ ಸರ್ಕಾರದ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಲಸಿಕೆಯನ್ನು ಪಂಜಾಬ್ ಸರ್ಕಾರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ ಎಂಬ ಆರೋಪಗಳನ್ನು ಬಿಜೆಪಿ ನಾಯಕರು ಮಾಡಿದ್ದರು.

ಪಂಜಾಬ್ ಸರ್ಕಾರ ಈಗ ಈ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡುವ ವಿವಾದಾತ್ಮಕ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಪಂಜಾಬ್‌ನ ಪ್ರಿನ್ಸಿಪಲ್ ಸೆಕ್ರೆಟರಿ ಹಸ್ಸನ್ ಲಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಸರ್ಕಾರ 40,000 ಲಸಿಕೆಗಳನ್ನು ನೀಡಿದೆ. ಇದರಲ್ಲಿ 1000ಕ್ಕೂ ಕಡಿಮೆ ಪ್ರಮಾಣದ ಲಸಿಕೆಗಳನ್ನು ಮಾತ್ರವೇ ಖಾಸಗಿ ಆಸ್ಪತ್ರೆಗಳು ವಿತರಿಸಿದೆ. ಉಳಿದವುಗಳನ್ನು ಸರ್ಕಾರ ಮರಳಿ ಪಡೆಯುತ್ತದೆ ಎಂದಿದ್ದಾರೆ.

ಬ್ರಿಟನ್‌ಗೆ ಮಾರಕವಾಗುತ್ತಿದೆ ಕೋವಿಡ್-19 ಡೆಲ್ಟಾ ರೂಪಾಂತರಿಬ್ರಿಟನ್‌ಗೆ ಮಾರಕವಾಗುತ್ತಿದೆ ಕೋವಿಡ್-19 ಡೆಲ್ಟಾ ರೂಪಾಂತರಿ

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಕೇಂದ್ರ ಸರ್ಕಾರದಿಂದ ಕೋವಾಕ್ಸಿನ್ ಲಸಿಕೆಯನ್ನು 400 ರೂಪಾಯಿಗೆ ಲಸಿಕೆಯನ್ನು ಪಡೆದುಕೊಂಡು ಪಂಜಾಬ್ ಸರ್ಕಾರ 1060 ರೂಪಾಯಿಗೆ 20 ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಳ್ಳುತ್ತಿದೆ ಎಂದಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಪಂಜಾಬ್ ಸರ್ಕಾರದ ವಿರುದ್ಧ ಕಟು ಟೀಕೆಯನ್ನು ಮಾಡಿದ್ದರು.

Punjab Government Cancels Sale Of Vaccines To Private Hospitals

ಇನ್ನು ಇದೇ ಸಂದರ್ಭದಲ್ಲಿ 18-44ರ ವಯೋಮಾನದವರಿಗೆ ಒಂದು ಬಾರಿ ಲಸಿಕೆಯ ಡೋಸ್‌ಅನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡುವ ಆದೇಶವನ್ನು ಕೂಡ ಸರ್ಕಾರ ವಾಪಾಸ್ ಪಡೆದುಕೊಂಡಿದೆ. ಇನ್ನು ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ತಮ್ಮ ಬಳಿ ಹೊಂದಿರುವ ಎಲ್ಲಾ ಕೊರೊನಾ ಲಸಿಕೆಗಳನ್ನು ಸರ್ಕಾರಕ್ಕೆ ವಾಪಾಸ್ ನೀಡುವಂತೆ ನಿರ್ದೇಶನ ನೀಡಿದೆ.

English summary
Punjab Government Cancels Sale Of Vaccines To Private Hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X