ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ; ಪಂಜಾಬ್ ಸರ್ಕಾರದ ಘೋಷಣೆ

|
Google Oneindia Kannada News

ಅಮೃತಸರ, ಮೇ 20: ಪಂಜಾಬ್ ಸರ್ಕಾರ 2022-23ರ ಶೈಕ್ಷಣಿಕ ಅವಧಿಯಲ್ಲಿ 1 ರಿಂದ 8 ನೇ ತರಗತಿವರೆಗಿನ 15,49,192 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಿದೆ ಎಂದು ಶಿಕ್ಷಣ ಸಚಿವ ಗುರ್ಮೀತ್ ಸಿಂಗ್‌ ಶುಕ್ರವಾರ ಘೋಷಿಸಿದರು.

ಉಚಿತ ಸಮವಸ್ತ್ರ ವಿತರಣೆಗಾಗಿಯೇ ಶಿಕ್ಷಣ ಇಲಾಖೆಯಿಂದ 92.95 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪಂಜಾಬ್‌ನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷದ ಸರ್ಕಾರ ಶಿಕ್ಷಣಕ್ಕೆ ಆದ್ಯತೆಯನ್ನು ನೀಡುತ್ತಿದೆ.

15,49,192 ಫಲಾನುಭವಿ ವಿದ್ಯಾರ್ಥಿಗಳಲ್ಲಿ 8,45,429 ಬಾಲಕಿಯರಿಗೆ 50.72 ಕೋಟಿ ರೂ., ಪರಿಶಿಷ್ಟ ಜಾತಿಯ 5,45,993 ಬಾಲಕರಿಗೆ 32.75 ಕೋಟಿ ರೂ., ಬಿಪಿಎಲ್ ಕಾರ್ಡ್‌ ಹೊಂದಿರುವ 1,57,770 ಬಾಲಕರಿಗೆ 9.46 ಕೋಟಿ ರೂ. ಮಂಜೂರಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Punjab Government Announces Free Uniform for 15.49 lakh govt school students

ವಿತರಿಸುವ ಜವಾಬ್ದಾರಿ ಯಾವುದು?; ಶಾಲಾ ಆಡಳಿತ ಸಮಿತಿಗಳು (ಎಸ್‌ಎಂಸಿ) ಸರ್ಕಾರ ನೀಡುವ ಅನುದಾನ ಪಡೆದು ಉಚಿತ ಸಮವಸ್ತ್ರಗಳನ್ನು ಖರೀದಿಸಿ ಪಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸಬೇಕಿದೆ. ಪ್ರತಿ ಶಾಲಾ ಆಡಳಿತ ಸಮಿತಿಗಳಿಗೆ ಇಲಾಖೆ ಪ್ರತಿ ವಿದ್ಯಾರ್ಥಿಗೆ 600 ರೂ. ನಂತೆ ಅನುದಾನ ಬಿಡುಗಡೆ ಮಾಡಲಿದೆ. ಸಚಿವಾಲಯ ಯಾವುದೇ ನಿರ್ದಿಷ್ಟ ಅಂಗಡಿಯಿಂದ ಸಮವಸ್ತ್ರವನ್ನು ಖರೀದಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಾಂಶುಪಾಲರ ಜೊತೆ ಸಿಎಂ ಸಭೆ; ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರಿ ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ ಮಟ್ಟವನ್ನು ಹೆಚ್ಚಿಸುವ ಕುರಿತು ಅವರಿಂದ ಸಲಹೆ ಪಡೆದುಕೊಂಡಿದ್ದರು.

Punjab Government Announces Free Uniform for 15.49 lakh govt school students

ಇದಕ್ಕಾಗಿಯೇ ಹೆಚ್ಚುವರಿಯಾಗಿ ಶಿಕ್ಷಕರಿಂದ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದ್ದರು. ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಮತ್ತು ಕಾಗದರಹಿತ, ಡಿಜಿಟಲ್ ಸಬಲೀಕರಣ ಸೇರಿದಂತೆ ಇನ್ನಿತರ ಸುಧಾರಣೆಗಳನ್ನು ಮಾಡಲು ಶಿಕ್ಷಕರು ತಮ್ಮ ಆಲೋಚನೆಗಳನ್ನು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸುವಂತೆ ಮನವಿ ಮಾಡಿದ್ದರು.

English summary
Punjab education minister Gurmeet Singh announced free uniforms to 15,49,192 government school students from class 1 to 8 in academic year 2022-23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X