• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್ ನಲ್ಲಿ ತಾವೇ ಬೆಳೆದ ಬೆಳೆಗೆ ಬೆಂಕಿ ಹಚ್ಚಿದ ರೈತರು

|
Google Oneindia Kannada News

ಅಮೃತಸರ್, ಅಕ್ಟೋಬರ್.08: ಕೊರೊನಾವೈರಸ್ ಸೋಂಕು ಹರಡುವಿಕೆಯ ಭೀತಿ. ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಕೃಷಿ ನೀತಿ. ಎದುರಾಗುತ್ತಿರುವ ಸಾಲು ಸಾಲು ಸವಾಲುಗಳು ಪಂಜಾಬ್ ರೈತರನ್ನು ಕಂಗೆಡಿಸಿವೆ.

ಪಂಜಾಬ್ ಅಮೃತಸರ್ ನ ಒಂದು ದಿಕ್ಕಿನಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ತೀವ್ರ ಹೋರಾಟ ನಡೆಸಲಾಗುತ್ತಿದೆ. ಅದೇ ಅಮೃತಸರ್ ನ ಮತ್ತೊಂದು ದಿಕ್ಕಿನಲ್ಲಿ ಕಂಗಾಲಾದ ರೈತರು ತಾವೇ ಬೆಳೆದ ಬೆಳೆಗೆ ಬೆಂಕಿ ಹಚ್ಚುತ್ತಿದ್ದಾರೆ.

ರೈತರನ್ನು ಗುಲಾಮರನ್ನಾಗಿಸಲು ಕೃಷಿ ಕಾಯ್ದೆ ಜಾರಿ ಎಂದ ರಾಹುಲ್ ಗಾಂಧಿರೈತರನ್ನು ಗುಲಾಮರನ್ನಾಗಿಸಲು ಕೃಷಿ ಕಾಯ್ದೆ ಜಾರಿ ಎಂದ ರಾಹುಲ್ ಗಾಂಧಿ

ಅಮೃತಸರ್ ನ ವಡಾಲಾ ಜೋಹಾಲ್ ಗ್ರಾಮದಲ್ಲಿ ರೈತರು ಹಗಲು-ರಾತ್ರಿ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ತಮ್ಮ ಕೈಯಾರೆ ತಾವೇ ಬೆಂಕಿ ಹಚ್ಚುತ್ತಿದ್ದಾರೆ. ನೋವಿನಲ್ಲಿ ಪ್ರತ್ರಿಕಿಯೆ ನೀಡಿರುವ ರೈತರು ನಮ್ಮ ಕಷ್ಟವನ್ನೂ ಸಹ ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಬೇಡಿಕೊಂಡಿದ್ದಾರೆ.


ಪ್ರಕೃತಿಗೆ ಹಾನಿ ಮಾಡುವ ಉದ್ದೇಶ ನಮಗಿಲ್ಲ:

ನಾವೇ ಬೆಳೆದ ಬೆಳೆಗಳಿಗೆ ಬೆಂಕಿ ಹಚ್ಚುತ್ತಿದ್ದೇವೆ ಎಂದರೆ ಪರಿಸರವನ್ನು ಹಾಳು ಮಾಡುವ ಉದ್ದೇಶ ನಮಗಿಲ್ಲ. ಬದಲಿಗೆ ನಮ್ಮ ಸಮಸ್ಯೆಗಳನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ನಮಗೆ ಯಾರೊಬ್ಬರೂ ಸಹಾಯ ಮಾಡುತ್ತಿಲ್ಲ. ಇದರಿಂದ ನಮ್ಮ ಮುಂದೆ ಬೇರೆ ಯಾವ ಆಯ್ಕೆಗಳು ಕೂಡಾ ಉಳಿದುಕೊಂಡಿಲ್ಲ. ಹೀಗಾಗಿ ನಾವು ದುಃಖದ ನಡುವೆಯೂ ನಾವೇ ಬೆಳೆಗೆ ಬೆಳೆಗಳನ್ನು ಸುಟ್ಟು ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ನಮ್ಮ ಕಷ್ಟಗಳನ್ನು ಕೂಡಾ ಸ್ವಲ್ಪ ಅರ್ಥ ಮಾಡಿಕೊಳ್ಳಿರಿ ಎಂದು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ರೈತರನ್ನು ಕಂಗೆಡಿಸಿದ ಕೃಷಿ ಸಂಬಂಧಿತ ಕಾಯ್ದೆಗಳು:

ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಸಪ್ಟೆಂಬರ್.27ರಂದು ಅನುಮೋದನೆ ನೀಡಿದ್ದರು. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ

2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ

3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ

English summary
Punjab: Farmers Burn Stubble In Their Fields In Wadala Johal village of Amritsar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X