• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಜವಾದ ರೈತರು ದೆಹಲಿ ಬಿಟ್ಟು ಗಡಿಗೆ ಬನ್ನಿ: ಅಮರಿಂದರ್ ಸಿಂಗ್

|
Google Oneindia Kannada News

ಪಂಜಾಬ್, ಜನವರಿ 26: ನಿಜವಾದ ರೈತರು ಈಗಲೇ ದೆಹಲಿ ಬಿಟ್ಟು ಗಡಿಗೆ ಬನ್ನಿ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದನ್ನು ಖಂಡಿಸಿದ್ದಾರೆ.ದೆಹಲಿಯಲ್ಲಿನ ಹಿಂಸಾಚಾರ ನಿಜಕ್ಕೂ ಆಘಾತ ತಂದಿದೆ. ಕೆಲವು ಅಂಶಗಳ ಹಿಂಸಾಚಾರವು ಸ್ವೀಕಾರಾರ್ಹವಲ್ಲ. ಶಾಂತಿಯುತವಾಗಿ ಪ್ರತಿಭಟಿಸುವ ರೈತರಿಂದ ಉಂಟಾಗುವ ಅಭಿಮಾನವನ್ನು ಅದು ನಿರಾಕರಿಸುತ್ತದೆ.

ದೆಹಲಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಗ್ರೇ ಮೆಟ್ರೋ ಮಾರ್ಗ, ಸಂಚಾರ ಆರಂಭ ದೆಹಲಿಯಲ್ಲಿ ಸಹಜ ಸ್ಥಿತಿಗೆ ಮರಳಿದ ಗ್ರೇ ಮೆಟ್ರೋ ಮಾರ್ಗ, ಸಂಚಾರ ಆರಂಭ

ದೆಹಲಿಯ ಮುಕರ್ಬಾ ಚೌಕ್‌ನಲ್ಲಿ ಘರ್ಷಣೆಗಳು ವರದಿಯಾಗಿದ್ದು, ಅಲ್ಲಿ ರೈತರು ಸಿಮೆಂಟೆಡ್ ಬ್ಯಾರಿಕೇಡ್‌ಗಳನ್ನು ಮುರಿದಿದ್ದಾರೆ. ನಂಗ್ಲಾಯ್‌ನಲ್ಲಿರುವ ಅಡೆತಡೆಗಳನ್ನು ಉಲ್ಲಂಘಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ರೈತರು ತಮ್ಮ ಟ್ರಾಕ್ಟರ್ ಜಾಥಾದೊಂದಿಗೆ ನಜಫ್‌ಗಡದ ಕಡೆಗೆ ಮುಂದುವರಿಯಬೇಕಿತ್ತು.

ದೆಹಲಿಯಲ್ಲಿ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ರೈತರು - ಪೊಲೀಸರು ನಡುವೆ ಘರ್ಷಣೆ ನಡೆದು ಪರಿಸ್ಥಿತಿ ನಿಯಂತ್ರಿಸಲು ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ.

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

English summary
As the farmers' tractor rally against the farm laws turned violent on Tuesday, Punjab Chief Minister Captain Amarinder Singh has urged all "genuine farmers" to vacate Delhi and return to its borders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X