ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ನಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೂ ನಿಷೇಧಾಜ್ಞೆ

|
Google Oneindia Kannada News

ಅಮೃತಸರ್, ನವೆಂಬರ್.25: ಪಂಜಾಬ್ ನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ರಾತ್ರಿಯಿಂದ ಬೆಳಗಿನವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಡಿಸೆಂಬರ್.01ರಿಂದ ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ರಾತ್ರಿಯಿಡೀ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಡೆದುಕೊಂಡವರ ವಿರುದ್ಧ ಶಿಸ್ತುಕ್ರಮದ ಜೊತೆಗೆ 1000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿ

ಪಂಜಾಬ್ ನಲ್ಲಿರುವ ಪ್ರತಿಯೊಂದು ನಗರ ಮತ್ತು ಪಟ್ಟಣಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನಿಷೇಧಾಜ್ಞೆ ನಿಯಮಗಳು ಜಾರಿಯಲ್ಲಿರಲಿದೆ. ಡಿಸೆಂಬರ್.01ರಿಂದ ರಾಜ್ಯಾದ್ಯಂತ ರಾತ್ರಿ 9.30ಕ್ಕೆ ಎಲ್ಲ ಅಂಗಡಿ-ಮುಂಗಟ್ಟು, ಹೋಟೆಲ್ ಮತ್ತು ರೆಸ್ಟೋರೆಂಟ್, ಮದುವೆ ಸಭಾಂಗಣಗಳನ್ನು ಮುಚ್ಚುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಡಿಸೆಂಬರ್.15ರ ನಂತರ ರಾಜ್ಯದಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ನೋಡಿಕೊಂಡು ನಿಯಮವನ್ನು ಮರು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

Punjab CM Captain Amarinder Singh Orders Night Curfew In All Towns And Cities From 10 PM To 5 AM

ಪಂಜಾಬ್ ನಲ್ಲಿ ಕೊರೊನಾವೈರಸ್ ಸ್ಥಿತಿಗತಿ:

ರಾಜ್ಯದಲ್ಲಿ 1,47,665 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಇದುವರೆಗೂ ವರದಿಯಾಗಿವೆ. ಈ ಪೈಕಿ 1,36,178 ಮಂದಿ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, 6834 ಸಕ್ರಿಯ ಪ್ರಕರಣಗಳು ಇರುವುದು ಗೊತ್ತಾಗಿದೆ. ಪಂಜಾಬ್ ನಲ್ಲಿ ಮಹಾಮಾರಿಗೆ ಈವರೆಗೂ 4653 ಜನರು ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 92 ಲಕ್ಷದ ಗಡಿ ದಾಟಿದೆ. ಒಂದೇ ದಿನ 44376 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 37,816 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 481 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 92,22,217ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,34,699 ಮಂದಿ ಪ್ರಾಣ ಬಿಟ್ಟಿದ್ದಾರೆ. 86,42,771 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 4,44,746 ಸಕ್ರಿಯ ಪ್ರಕರಣಗಳಿವೆ.

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

English summary
Punjab Chief Minister Captain Amarinder Singh Orders Night Curfew In All Towns And Cities From 10 PM To 5 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X