ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರ ಚುನಾವಣೆಗೆ ಈಗಲೇ ಜತೆಗೂಡಿದ ಅಮರಿಂದರ್ ಸಿಂಗ್-ಪ್ರಶಾಂತ್ ಕಿಶೋರ್

|
Google Oneindia Kannada News

ಚಂಡೀಗಡ, ಮಾರ್ಚ್ 1: ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಕಾವು ತೀವ್ರವಾಗುತ್ತಿರುವುದರ ನಡುವೆಯೇ ಪಂಜಾಬ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಈಗಿನಿಂದಲೇ ತಯಾರಿಗೆ ಮುಂದಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ತಂತ್ರ ರೂಪಿಸುತ್ತಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ತಮ್ಮ ತಂಡ ಸೇರಿಕೊಂಡಿರುವುದಾಗಿ ಅಮರಿಂದರ್ ಸಿಂಗ್ ಸೋಮವಾರ ತಿಳಿಸಿದ್ದಾರೆ.

ರೈತರ ಪ್ರತಿಭಟನೆ ಪರಿಣಾಮ: ಎರಡು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗ್ರಾಹಕರನ್ನು ಕಳೆದುಕೊಂಡ ಜಿಯೋರೈತರ ಪ್ರತಿಭಟನೆ ಪರಿಣಾಮ: ಎರಡು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗ್ರಾಹಕರನ್ನು ಕಳೆದುಕೊಂಡ ಜಿಯೋ

'ಪ್ರಶಾಂತ್ ಕಿಶೋರ್ ಅವರು ನನ್ನ ಪ್ರಧಾನ ಸಲಹೆಗಾರರಾಗಿ ಸೇರ್ಪಡೆಯಾಗಿದ್ದಾರೆ. ಪಂಜಾಬ್‌ ಜನತೆಯ ಪ್ರಗತಿಗಾಗಿ ಜತೆಯಾಗಿ ಕೆಲಸ ಮಾಡಲು ನೋಡುತ್ತಿದ್ದೇನೆ' ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Punjab CM Amarinder Singh Tie Up With Prashant Kishor Again For 2022 Election

ಪ್ರಶಾಂತ್ ಕಿಶೋರ್ ಹಾಗೂ ಅಮರಿಂದರ್ ಸಿಂಗ್ ಚುನಾವಣೆಯಲ್ಲಿ ಜತೆಗೂಡುತ್ತಿರುವುದು ಇದು ಎರಡನೆಯ ಬಾರಿ. 2017ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿಯೂ ಅಮರಿಂದರ್ ಸಿಂಗ್ ಅವರು ಪ್ರಶಾಂತ್ ಕಿಶೋರ್ ಅವರ 'ಐಪ್ಯಾಕ್' (ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ) ಅನ್ನು ಪ್ರಚಾರ ತಂತ್ರ ರೂಪಿಸಲು ಬಳಸಿಕೊಂಡಿದ್ದರು.

 ರೈತ ಪರ ಪ್ರತಿಭಟನೆ; ಸಾಮಾಜಿಕ ಕಾರ್ಯಕರ್ತೆ ನೊದೀಪ್‌ ಕೌರ್‌ಗೆ ಜಾಮೀನು ರೈತ ಪರ ಪ್ರತಿಭಟನೆ; ಸಾಮಾಜಿಕ ಕಾರ್ಯಕರ್ತೆ ನೊದೀಪ್‌ ಕೌರ್‌ಗೆ ಜಾಮೀನು

2017ರ ಚುನಾವಣೆಯಲ್ಲಿ 117 ಸೀಟುಗಳ ಪೈಕಿ 77ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿತ್ತು. ಆದರೆ ದಶಕಗಳ ಕಾಲದ ಎಸ್‌ಎಡಿ-ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧದ ಅಲೆ ಕೂಡ ಇದಕ್ಕೆ ನೆರವಾಗಿತ್ತು.

English summary
Punjab CM Amarinder Singh announced that election strategist Prashant Kishor had joined his team for 2022 assembly election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X