• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ 19: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಸ್ವಯಂ ದಿಗ್ಬಂಧನ

|

ಅಮೃತಸರ, ಆಗಸ್ಟ್ 28: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 7 ದಿನಗಳ ಕಾಲ ಸ್ವಯಂ ದಿಗ್ಬಂಧನದಲ್ಲಿರಲಿದ್ದಾರೆ.

ಅಮರಿಂದರ್ ಸಿಂಗ್ ಅವರನ್ನು ಭೇಟಿಯಾಗಿದ್ದ ಇಬ್ಬರು ಶಾಸಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಏಳು ದಿನಗಳ ಕಾಲ ಗೃಹಬಂಧನದಲ್ಲಿರುವುದಾಗಿ ತಿಳಿಸಿದ್ದಾರೆ.

ವಿಧಾನಸಭೆ ಅಧಿವೇಶನಕ್ಕೆ 2 ದಿನ ಬಾಕಿ: ಪಂಜಾಬಿನ 23 ಶಾಸಕರಿಗೆ ಕೊರೊನಾ ಸೋಂಕು

ಪಂಜಾಬ್‌ನಲ್ಲಿ 29 ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ. ಈ ಕೊರೊನಾ ಸೋಂಕಿತ ಶಾಸಕರ ಜೊತೆ ಯಾರು ಸಂಪರ್ಕದಲ್ಲಿದ್ದರೋ ಅವರು ವಿಧಾನಸಭೆಯಲ್ಲಿ ಪಾಲ್ಗೊಳ್ಳದಂತೆ ತಿಳಿಸಿದ್ದಾರೆ.

ಯಾರು 48 ಗಂಟೆಯ ಒಳಗೆ ನೆಗೆಟಿವ್ ವರದಿ ಬಂದಿರುತ್ತದೆಯೋ ಅವರು ಮಾತ್ರ ಅಧಿವೇಶನದಲ್ಲಿ ಪಾಲ್ಗೊಳ್ಳಬಹುದು. ಪಂಜಾಬ್‌ನಲ್ಲಿ 47,800 ಕೊರೊನಾ ಸೋಂಕಿತ ಪ್ರಕರಣಗಳಿವೆ 1256 ಮಂದಿ ಸಾವನ್ನಪ್ಪಿದ್ದಾರೆ.

ಇದೇ ಕಾರಣಕ್ಕೆ ಇದೀಗ ರಾಜ್ಯದಲ್ಲಿರುವ ಎಲ್ಲ ಶಾಸಕರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಪಂಜಾಬ್ ನಲ್ಲಿ ಒಟ್ಟು 117 ಶಾಸಕರಿದ್ದು, ಈ ಪೈಕಿ 29ಮಂದಿ ಶಾಸಕರು ಸೋಂಕಿಗೆ ತುತ್ತಾಗಿದ್ದಾರೆ. ಪಂಜಾಬ್ ನಲ್ಲಿ ಶಾಸಕರು ಮಾತ್ರವಲ್ಲದೇ ಸಚಿವರೂ ಕೂಡ ಸೋಂಕಿಗೆ ತುತ್ತಾಗಿದ್ದು, ಗ್ರಾಮೀಣಾಭಿವದ್ಧಿ ಸಚಿವ ಟ್ರಿಪ್ಟ್ ರಾಜಿಂದರ್ ಬಜ್ವಾ ಅವರು ಸೋಂಕಿಗೆ ತುತ್ತಾದ ಮೊದಲ ಸಚಿವರಾಗಿದ್ದಾರೆ.

ಬಳಿಕ ಸಹಕಾರ ಸಚಿವ ಸುಖ್ಜಿಂದರ್ ಸಿಂಗ್ ರಾಂಧವ, ಕಂದಾಯ ಸಚಿವ ಗುರುಪ್ರೀತ್ ಕಂಗಾರ್ ಮತ್ತು ಕೈಗಾರಿಕಾ ಸಚಿವ ಶಾಮ್ ಸುಂದರ್ ಅರೋರಾ ಅವರು ಸೋಂಕಿಗೆ ತುತ್ತಾಗಿದ್ದಾರೆ.

English summary
Punjab Chief Minister Amarinder Singh has gone into 7-day home quarantine after he met in the state assembly two MLAs who later tested positive for coronavirus, a senior state official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X