ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ವಿಧಾನಸಭೆ ಚುನಾವಣೆ 2022: ಶಿರೋಮಣಿ ಅಕಾಲಿ ದಳ 64 ಅಭ್ಯರ್ಥಿಗಳ ಪಟ್ಟಿ

|
Google Oneindia Kannada News

ಅಮೃತ್ ಸರ್, ಸೆಪ್ಟೆಂಬರ್ 13: ಪಂಜಾಬ್ ವಿಧಾನಸಭೆ ಚುನಾವಣೆ 2022ಗಾಗಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷವು ಸೋಮವಾರದಂದು ತನ್ನ 64 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.

ಅಕಾಲಿದಳ ಪ್ರಕಟಿಸಿರುವ ಪಟ್ಟಿಯಂತೆ ಗುರುದಾಸಪುರದಿಂದ ಗುರುಬಚನ್ ಸಿಂಗ್ ಬಾಬೆಹಾಲಿ, ಅಮೃತಸರ ಉತ್ತರದಿಂದ ಅನಿಲ್ ಜೋಶಿ, ಅಮೃತಸರ ಪಶ್ಚಿಮದಿಂದ ಡಾ ದಲ್ಬೀರ್ ಸಿಂಗ್ ವರ್ಕಾ, ಅಟ್ಟಾರಿಯಿಂದ ಗುಲ್ಜಾರ್ ಸಿಂಗ್ ರಾಣಿಕೆ, ತರ್ನ್ ತರನ್ ನಿಂದ ಹರ್ಮೀತ್ ಸಿಂಗ್ ಸಂಧು ಮತ್ತು ಜಲಂಧರ್ ಸೆಂಟ್ರಲ್ ನಿಂದ ಚಂದನ್ ಗ್ರೇವಾಲ್ ಅವರನ್ನು ಕಣಕ್ಕಿಳಿಸಿದೆ.

ಪಂಜಾಬ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಬಾದಲ್ ಅವರ ಶಿರೋಮಣಿ ಅಕಾಲಿ ದಳದ ಜೊತೆಗೆ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದೆ.

ಈ ವರ್ಷದ ಜೂನ್ ತಿಂಗಳಲ್ಲಿ ಅಕಾಲಿ ದಳ ಮತ್ತು ಬಿಎಸ್ಪಿೀ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಿತ್ತು. ಈ ಮೂಲಕ ಪಂಜಾಬ್ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉಭಯ ಪಕ್ಷಗಳು ಸಮ್ಮತಿಸಿವೆ. ಎಸ್ಎಡಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಈ ಮೈತ್ರಿ ಸಾಧ್ಯತೆ ಅಧಿಕೃತಗೊಂಡ ದಿನವನ್ನು ''ರಾಜ್ಯದ ರಾಜಕೀಯದಲ್ಲಿ ಹೊಸ ದಿನ..'' ಎಂದು ಬಣ್ಣಿಸಿದ್ದರು "ಇಂದು ಐತಿಹಾಸಿಕ ದಿನ ... ಪಂಜಾಬ್ ರಾಜಕೀಯದಲ್ಲಿ ಒಂದು ಮಹತ್ವದ ತಿರುವು" ಎಂದು ಅವರು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಸಮ್ಮುಖದಲ್ಲಿ ಹೇಳಿದ್ದರು.

Punjab Assembly Election 2022: Shiromani Akali Dal releases list of 64 candidates

ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಲ್ಲಿ ಬಿಎಸ್‌ಪಿ 20 ರಲ್ಲಿ ಸ್ಪರ್ಧಿಸಲಿದ್ದು, ಉಳಿದವುಗಳನ್ನು ಎಸ್‌ಎಡಿ ಸ್ಪರ್ಧಿಸುತ್ತದೆ. ಬಿಎಸ್‌ಪಿ ಸ್ಪರ್ಧಿಸಲಿರುವ ಕ್ಷೇತ್ರಗಳು ಜಲಂಧರ್, ಜಲಂಧರ್-ಪಶ್ಚಿಮ, ಜಲಂಧರ್-ಉತ್ತರ, ಫಗ್ವಾರಾ, ಹೋಶಿಯಾರ್‌ಪುರ ಅರ್ಬನ್, ದಾಸುಯ, ರೂಪನಗರ್ ಜಿಲ್ಲೆಯ ಚಮ್ಕೌರ್ ಸಾಹಿಬ್, ಪಠಾಣ್‌ಕೋಟ್‌ನ ಸುಜನ್‌ಪುರ್, ಮೊಹಾಲಿ, ಅಮೃತಸರ್ ಉತ್ತರ ಮತ್ತು ಅಮೃತಸರ ಸೆಂಟ್ರಲ್.

ಅಕಾಲಿದಳವು ಈ ಮೊದಲು ಬಿಜೆಪಿಯೊಂದಿಗೆ ಬಹುಕಾಲ ಮೈತ್ರಿಯಲ್ಲಿತ್ತು. ಕೇಂದ್ರ ಸಚಿವ ಸಂಪುಟದಲ್ಲೂ ಸೂಕ್ತ ಸ್ಥಾನ ಪಡೆದುಕೊಂಡಿತ್ತು. ಆದರೆ ಕಳೆದ ವರ್ಷ ನೂತನ ಕೃಷಿ ಕಾಯ್ದೆ ವಿಚಾರದಲ್ಲಿ ಮೂಡಿದ ಒಡಕಿನಿಂದಾಗಿ ಅದು ಮೈತ್ರಿಯಿಂದ ಹೊರನಡೆದಿತ್ತು. ಪ್ರತಿ ಬಾರಿ ಚುನಾವಣೆಯಲ್ಲಿ ಎಸ್‌ಎಡಿ ಜೊತೆಗಿನ ಮೈತ್ರಿ ಅಡಿಯಲ್ಲಿ ಬಿಜೆಪಿ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿತ್ತು.

ಎರಡನೇ ರಾಜ್ಯದಲ್ಲಿ ಎಎಪಿ ಅಧಿಕಾರ ಸ್ಥಾಪನೆ: ಸಿವೋಟರ್ ಸಮೀಕ್ಷೆ
ಸಮೀಕ್ಷೆಗಳ ವರದಿ:
117 ಕ್ಷೇತ್ರಗಳ ವಿಧಾನಸಭೆಯಲ್ಲಿ ಪ್ರತಿಪಕ್ಷ ಎಎಪಿ 25 ರಿಂದ 55ಕ್ಕೆ ಏರಲಿದೆ. ಕಾಂಗ್ರೆಸ್ 77 ರಿಂದ 42ಕ್ಕೆ ಕುಸಿಯಲಿದೆ. ಹಾಗೂ ಶಿರೋಮಣಿ ಅಕಾಲಿದಳ 15 ರಿಂದ 20ಕ್ಕೆ ಏರಲಿದೆ ಎಂದು ಇತ್ತೀಚಿನ ಸಮೀಕ್ಷೆ ಹೇಳಿದೆ.

ಶೇಕಡಾವಾರು ಮತ ಪ್ರಮಾಣವನ್ನು ಹೋಲಿಸಿದಾಗ ಕಾಂಗ್ರೆಸ್ ಶೇ.9.7ರಷ್ಟು ಮತವನ್ನು ಕಳೆದುಕೊಂಡು 28.8 ಮತ ಗಳಿಕೆ ಮಾಡಬಹುದು. ಶಿರೋಮಣಿ ಅಕಾಲಿದಳ ಶೇ.21.8 ಹಾಗೂ ಎಎಪಿ ಶೇ.35.1 ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದೆಡೆ ಬಿಜೆಪಿ ಸೀಟುಗಳಲ್ಲಿ ಶೂನ್ಯ ಗಳಿಕೆಯಾದರೂ ಶಿರೋಮಣಿ ಅಕಾಲಿದಳ ಮೈತ್ರಿಕೂಟದಿಂದ ಹೊರಬಂದಿರುವುದಕ್ಕೆ ಶೇ.5.4 ರಿಂದ ಶೇ.7.3ಕ್ಕೆ ಮತ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಗೆಲುವಿನ ರಣತಂತ್ರ: ಪಂಜಾಬ್ ವಿಧಾನಸಭೆಯ 45 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣುಗೆಲುವಿನ ರಣತಂತ್ರ: ಪಂಜಾಬ್ ವಿಧಾನಸಭೆಯ 45 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು

2022ರ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 117 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈತ ಪ್ರತಿಭಟನೆ ಹಾಗೂ ಇತರೆ ರಾಜಕೀಯ ಸಮೀಕರಣದ ಬಳಿಕ ಪಂಜಾಬ್‌ನ ರಾಜಕೀಯ ಚಿತ್ರಣ ಬದಲಾಗುತ್ತಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದ ಎಎಪಿ ಇದೀಗ ಅಧಿಕಾರ ಚುಕ್ಕಾಣಿಯ ಸನಿಹದಲ್ಲಿ ಬಂದು ನಿಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

English summary
Punjab Assembly Election 2022:The Shiromani Akali Dal (SAD) on Monday announced a list of 64 candidates for the upcoming polls to the Legislative Assembly of Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X