ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್: ಆಪ್ ಶಾಸಕ ಮಾಜ್ರ ಮನೆ ಮೇಲೆ ಸಿಬಿಐ ದಾಳಿ

|
Google Oneindia Kannada News

ನವದೆಹಲಿ, ಮೇ 7: ಬ್ಯಾಂಕ್ ವಂಚನೆ ಪ್ರಕರಣವೊಂದರ ಸಂಬಂಧ ಪಂಜಾಬ್‌ನ ಆಮ್ ಆದ್ಮಿ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಾಜ್ರಾಗೆ ಸೇರಿದ ಮನೆ, ಕಚೇರಿಗಳ ಮೇಲೆ ಸಿಬಿಐ ತಂಡಗಳು ದಾಳಿ ನಡೆಸಿ ಶೋಧ ಮಾಡಿವೆ. ಪಂಜಾಬ್ ರಾಜ್ಯದ ಸಂಗ್ರೂರ್ ಪಟ್ಟಣದಲ್ಲಿ ಅವರ ಮನೆ ಸೇರಿ ಮೂರು ಕಡೆ ರೇಡ್ ಮಾಡಲಾಗಿದೆ. ಇದು 41 ಕೋಟಿ ರೂ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಪ್ರಕರಣವಾಗಿದ್ದು ಸಿಬಿಐ ತನಿಖೆ ನಡೆಸುತ್ತಿದೆ.

ಸಿಬಿಐ ರೇಡ್‌ನಲ್ಲಿ ಸುಮಾರು 16.57 ಲಕ್ಷ ರೂ ಮೌಲ್ಯದ ನಗದು ಹಣ, ೮೮ ವಿದೇಶಿ ಕರೆನ್ಸಿ ನೋಟುಗಳು, ಕೆಲ ಆಸ್ತಿ ದಾಖಲೆಗಳು, ಹಲವು ಬ್ಯಾಂಕ್ ಖಾತೆಗಳು ಮತ್ತಿತರರ ಸಂಶಯಾಸ್ಪದ ದಾಖಲೆಗಳು ಅಧಿಕಾರಿಗಳಿಗೆ ಸಿಕ್ಕಿವೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ. ವಿವಿಧ ವ್ಯಕ್ತಿಗಳ ಸಹಿ ಇರುವ 94 ಬ್ಲ್ಯಾಂಕ್ ಚೆಕ್‌ಗಳು, ಅವರ ಆಧಾರ್ ಕಾರ್ಡ್‌ಗಳನ್ನು ಅಧಿಕಾರಿಗಳು ರೇಡ್ ವೇಳೆ ಮುಟ್ಟುಗೋಲು ಹಾಕಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಪಂಜಾಬ್ ಜೈಲಿನಲ್ಲಿ ನಿಂಬೆ ಹಗರಣ: ಜೈಲಾಧಿಕಾರಿ ಅಮಾನತುಪಂಜಾಬ್ ಜೈಲಿನಲ್ಲಿ ನಿಂಬೆ ಹಗರಣ: ಜೈಲಾಧಿಕಾರಿ ಅಮಾನತು

ಏನಿದು ವಂಚನೆ ಪ್ರಕರಣ?
ಅಮರ್ ಗಡ್ ಶಾಸಕ ಜಸ್ವಂತ್ ಸಿಂಗ್ ಮಾಜ್ರಾ ತಾರಾ ಕಾರ್ಪೊರೇಷನ್, ತಾರಾ ಹೆಲ್ತ್ ಫೂಡ್ಸ್ ಲಿ ಕಂಪನಿಗಳ ನಿರ್ದೇಶಕರಾಗಿದ್ದರು. ಲೂಧಿಯಾನದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 2011ರಿಂದ 2014ರ ಅವಧಿಯಲ್ಲಿ ನಾಲ್ಕು ಬಾರಿ ತಾರಾ ಕಾರ್ಪೊರೇಶನ್ ಕಂಪನಿ ಸಾಲ ಪಡೆದಿತ್ತು. ಸಾಲ ಮರುಪಾವತಿ ಮಾಡದ ಕಾರಣ ವಸೂಲಿಗೆ ಬಂದಾಗ ಹಲವು ದಾಖಲೆಗಳನ್ನ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಬ್ಯಾಂಕ್‌ಗೆ ಇದರಿಂದ 40.92 ಕೋಟಿ ರೂ ನಷ್ಟವಾಗಿದೆ ಎಂಬುದು ಸಿಬಿಐ ಮಾಡುತ್ತಿರುವ ಆರೋಪ.

Punjab AAP MLA Majras premises raided by CBI on bank fraud scam

ತಾರಾ ಕಾರ್ಪೊರೇಶನ್ ಯಾವ ಉದ್ದೇಶದಿಂದ ಸಾಲ ಪಡೆದಿತ್ತೋ ಅದಕ್ಕೆ ಆ ಹಣ ವಿನಿಯೋಗವಾಗಿಲ್ಲ. ಆ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಿರುವುದು ತಿಳಿದುಬಂದಿದೆ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 2014, ಮಾರ್ಚ್ 31ರಂದು ಈ ಸಾಲವನ್ನು ಎನ್‌ಪಿಎ ಎಂದು ಬ್ಯಾಂಕ್ ಘೋಷಿಸಿತು.

ದೆಹಲಿ: 'ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರುವುದಿಲ್ಲ' ಮನೆಗೆ ಬಂದ ಬಗ್ಗಾದೆಹಲಿ: 'ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರುವುದಿಲ್ಲ' ಮನೆಗೆ ಬಂದ ಬಗ್ಗಾ

Punjab AAP MLA Majras premises raided by CBI on bank fraud scam

ಸಿಬಿಐ ಸಲ್ಲಿಸಿರುವ ಎಫ್‌ಐಅರ್‌ನಲ್ಲಿ ತಾರಾ ಕಾರ್ಪೊರೇಷನ್, ತಾರಾ ಹೆಲ್ತ್ ಫೂಡ್ಸ್, ಅದರ ನಿರ್ದೇಶಕರಾಗಿದ್ದ ಆಪ್ ಶಾಸಕ ಜಸ್ವಂತ್ ಸಿಂಗ್ ಮಾಜ್ರಾ, ಅವರ ಸಹೋದರರಾದ ಬಲವಂತ್ ಸಿಂಗ್ ಮತ್ತು ಕುಲವಂತ್ ಸಿಂಗ್, ಹಾಗು ಅವರ ಸಂಬಂಧಿ ತೇಜಿಂದರ್ ಸಿಂಗ್ ಇವರ ಹೆಸರೂ ಎಫ್‌ಐಆರ್‌ನಲ್ಲಿದೆ. ಎಫ್‌ಐಆರ್‌ನಲ್ಲಿರುವ ವ್ಯಕ್ತಿಗಳೆಲ್ಲರೂ ಆ ಕಂಪನಿಗಳ ನಿರ್ದೇಶಕರು ಮತ್ತು ಗ್ಯಾರಂಟರ್‌ಗಳಾಗಿದ್ಧಾರೆ.

(ಒನ್ಇಂಡಿಯಾ ಸುದ್ದಿ)

English summary
The Central Bureau of Investigation today carried out searches at the premises of Punjab Aam Aadmi Party MLA Jaswant Singh Gajjan Majra in an alleged ₹ 40 crore bank fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X