ಪಾಕ್ ನುಸುಳುಕೋರರನ್ನು ಸದೆಬಡಿದ ಭಾರತೀಯ ಸೇನೆ
ಪಂಜಾಬ್, ಅಕ್ಟೋಬರ್ 25: ಪಂಜಾಬಿನ ಭರೋವಾಲ್ ಗಡಿ ಪ್ರದೇಶದಲ್ಲಿ ಅಕ್ರಮವಾಗಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ನುಸುಳುಕೋರರನ್ನು ಭಾರತೀಯ ಸೇನೆ ಸದೆಬಡಿದಿದೆ.
ಚೀನಾ ಒಳನುಗ್ಗುವಿಕೆ: ಬಿಜೆಪಿ ಸಂಸದನ ಹೇಳಿಕೆ ತಿರಸ್ಕರಿಸಿದ ಭಾರತೀಯ ಸೇನೆ
ಗುರುವಾರ ರಾತ್ರಿ 9.45ರ ಸುಮಾರಿಗೆ ಅಕ್ರಮವಾಗಿ ಭಾರತ-ಪಾಕಿಸ್ತಾನ ಗಡಿಯಿಂದ ಗಡಿ ನುಸುಳಲು ನುಸುಳುಕೋರ ಯತ್ನ ನಡೆಸುತ್ತಿದ್ದ. ಇದನ್ನು ಗಮನಿಸಿದ ಗಡಿ ಭದ್ರತಾ ಪಡೆಗಳು ದಿಟ್ಟ ಉತ್ತರ ನೀಡುವ ಮೂಲಕ ನುಸುಳುಕೋರನನ್ನು ಹತ್ಯೆ ಮಾಡಿದೆ.
ಹುಲ್ಲಿನ ನಡುವೆ ನುಸುಳುಕೋರ ಗಡಿ ನುಸುಳಲು ಯತ್ನ ನಡೆಸುತ್ತಿದ್ದ. ಈ ವೇಳೆ ಗುಂಡು ಹಾರಿಸಲಾಗಿದ್ದು, ಹತ್ಯೆ ಮಾಡಲಾಗಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ. ಭತ್ತದ ಗದ್ದೆಯೊಳಗೆ ಏನೋ ಶಬ್ದ ಕೇಳಿಬಂದಿತ್ತು. ಹಾಗಾಗಿ ತಕ್ಷಣವೇ ಯೋಧರು ಕಾರ್ಯಾಚರಣೆ ಆರಂಭಿಸಿದ್ದರು, ಬಳಿಕ ಒಳ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ನುಸುಳುಕೋರರನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.