ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಸ್ ನೇಷನ್ ಪಂಜಾಬ್ ಸಮೀಕ್ಷೆ: ಮೋದಿ ಮೊದಲ ಆಯ್ಕೆ, ರಾಹುಲ್ ನಂ.2

|
Google Oneindia Kannada News

ಅಮೃತ್ ಸರ್, ಫೆಬ್ರವರಿ 15: ಹಿಂದಿ ಭಾಷಿಕ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವೈಫಲ್ಯ ಕಂಡರೂ, ದೇಶದ ಪ್ರಧಾನಿ ಪಟ್ಟಕ್ಕೆ ಮೋದಿ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ರಾಜಸ್ಥಾನದ ನಂತರ ಪಂಜಾಬ್ ನಲ್ಲೂ ಮೋದಿ ಅಲೆ ಸ್ಥಿರವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಹೊರಹಾಕಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷಾ ವರದಿ ತಿಳಿಸಿದೆ.

ನ್ಯೂಸ್ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈನ್ಯೂಸ್ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈ

ರಾಜಸ್ಥಾನದಲ್ಲಿ ನ್ಯೂಸ್ ನೇಷನ್ ನಡೆಸಿದ ಸಮೀಕ್ಷೆ ಪ್ರಕಾರ, ರಾಜಸ್ಥಾನದಲ್ಲಿ ಬಿಜೆಪಿ 16 ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆಲ್ಲಲಿದೆ. ಇದೇ ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳ-ಬಿಜೆಪಿ ಮೈತ್ರಿ ಕೂಟಕ್ಕೆ 5, ಕಾಂಗ್ರೆಸ್ಸಿಗೆ 6, ಆಮ್ ಆದ್ಮಿ ಪಕ್ಷಕ್ಕೆ 1 ಹಾಗೂ ಇತರೆ 1 ಲಭಿಸಬಹುದು ಎಂದು ಸಮೀಕ್ಷಾ ವರದಿಯಲ್ಲಿದೆ.

ರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯ

ಪಂಜಾಬ್ ನ ಯಾವ ಪಕ್ಷ ಹೇಗೆ ಕಾರ್ಯನಿರ್ವಹಿಸಲಿದೆ? ರಫೆಲ್ ಒಪ್ಪಂದ ಯಾವ ರೀತಿ ಚುನಾವಣೆಯಲ್ಲಿ ಚರ್ಚಿತವಾಗಲಿದೆ? ಮುಂದಿನ ಪ್ರಧಾನಿಯಾಗಿ ಯಾರನ್ನು ಕಾಣಲು ಬಯಸುತ್ತೀರಿ? ಇವೆ ಮುಂತಾದ ಪ್ರಶ್ನೆಗಳನ್ನು ಹೊತ್ತುಕೊಂಡು ಸಮೀಕ್ಷೆ ನಡೆಸಲಾಗಿದೆ.

ಪ್ರಧಾನಿ ಪಟ್ಟಕ್ಕೆ ಯಾರು ಸೂಕ್ತ?

ಪ್ರಧಾನಿ ಪಟ್ಟಕ್ಕೆ ಯಾರು ಸೂಕ್ತ?

ನರೇಂದ್ರ ಮೋದಿ : ಶೇ 38
ರಾಹುಲ್ ಗಾಂಧಿ : ಶೇ 30
ಜಮ್ಮು ಮತ್ತು ಕಾಶ್ಮೀರದಲ್ಲೂ ಮೋದಿಗೆ ನೆಚ್ಚಿನ ಆಯ್ಕೆ
ಮೋದಿ ಪರ ಶೇ 37
ರಾಹುಲ್ ಗಾಂಧಿ ಪರ ಶೇ 30ರಷ್ಟು ಮತಗಳು ಬಂದಿವೆ.

ಶೇಕಡಾವಾರು ಮತಗಳಿಕೆ ಲೆಕ್ಕಾಚಾರ

ಶೇಕಡಾವಾರು ಮತಗಳಿಕೆ ಲೆಕ್ಕಾಚಾರ

ಸಮೀಕ್ಷಾ ವರದಿ ಪ್ರಕಾರ, ಶೇಕಡಾವಾರು ಮತಗಳಿಕೆ ಪ್ರಕಾರ, ಬಿಜೆಪಿ-ಎಸ್ಎಡಿ ಪರ ಶೇ 32ರಷ್ಟು ಮಂದಿ ಮತ ಹಾಕಿದ್ದಾರೆ. ಕಾಂಗ್ರೆಸ್ ಪರ ಶೇ 32, ಆಮ್ ಆದ್ಮಿ ಪಕ್ಷಕ್ಕೆ ಶೇ 19ರಷ್ಟು ಹಾಗೂ ಇತರೆ ಪಕ್ಷಗಳಿಗೆ ಶೇ 7 ಸಿಗಲಿದೆ. ಶೇ 10ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಯಾವ ಸಮಸ್ಯೆಗಳು ಚುನಾವಣೆ ವಿಷಯವಾಗಲಿವೆ

ಯಾವ ಸಮಸ್ಯೆಗಳು ಚುನಾವಣೆ ವಿಷಯವಾಗಲಿವೆ

ಯಾವ ಸಮಸ್ಯೆಗಳು ಚುನಾವಣೆ ವಿಷಯವಾಗಲಿವೆ
ಸಮಸ್ಯೆಗಳು
ನಿರುದ್ಯೋಗ: ಶೇ 27
ಹಣದುಬ್ಬರ :ಶೇ 16
ಭ್ರಷ್ಟಾಚಾರ : ಶೇ 9
ಡ್ರಗ್ಸ್ : ಶೇ 7
ಧಾರ್ಮಿಕ ಭಾವನೆ: ಶೇ 5
ಇತರೆ : ಶೇ 13

ಪಂಜಾಬ್ ನ ಕಾಂಗ್ರೆಸ್ ಸರ್ಕಾರದಿಂದ ತೃಪ್ತಿಯಾಗಿದೆಯೆ?

ಪಂಜಾಬ್ ನ ಕಾಂಗ್ರೆಸ್ ಸರ್ಕಾರದಿಂದ ತೃಪ್ತಿಯಾಗಿದೆಯೆ?

ಪಂಜಾಬ್ ನ ಕಾಂಗ್ರೆಸ್ ಸರ್ಕಾರದಿಂದ ತೃಪ್ತಿಯಾಗಿದೆಯೆ?

ಹೌದು : ಶೇ 52
ಇಲ್ಲ: ಶೇ 42
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ : ಶೇ 6

ಕೇಂದ್ರದ ಎನ್ಡಿಎ ಸರ್ಕಾರದಿಂದ ತೃಪ್ತಿಯಾಗಿದೆಯೆ?
ಹೌದು : ಶೇ 33
ಇಲ್ಲ: ಶೇ 53
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ : ಶೇ 14

ಚೀನಾ ಹಾಗೂ ಪಾಕಿಸ್ತಾನದಿಂದ ಮೋದಿ ಸರ್ಕಾರಕ್ಕೆ ಲಾಭವಾಗುತ್ತಿದೆಯೇ?
ಹೌದು : ಶೇ 32
ಇಲ್ಲ : ಶೇ 49
ಯಾವುದೇ ಪ್ರತಿಕ್ರಿಯೆ ಇಲ್ಲ: ಶೇ 19

English summary
As per the News Nation poll survey in Punjab, #NNOpinionPoll, when we asked 'who is the first choice for Prime Minister', 38 per cent of the people said Narendra Modi whereas Congress president Rahul Gandhi is at the second position with 30 per cent votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X