ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ತಾರ್ಪುರ್ ಕಾರಿಡಾರ್ ನಿರ್ಮಾಣ: ಭಾರತ-ಪಾಕಿಸ್ತಾನ ಮಾತುಕತೆ

|
Google Oneindia Kannada News

ಅಮೃತಸರ, ಮಾರ್ಚ್ 14: ಉಗ್ರರ ದಾಳಿ ಮತ್ತು ಅದಕ್ಕೆ ಭಾರತದ ಪ್ರತಿಕಾರದ ಪ್ರತಿಕ್ರಿಯೆಯ ಬೆನ್ನಲ್ಲೇ ಪಾಕಿಸ್ತಾನದ ಕರ್ತಾರ್ಪುರ ಪಟ್ಟಣದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಪಂಜಾಬ್‌ನ ಗುರುದಾಸಪುರ ಜಿಲ್ಲೆಯಿಂದ ಸಂಪರ್ಕ ಕಲ್ಪಿಸುವ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಅಧಿಕಾರಿಗಳ ಮಟ್ಟದ ಮಾತುಕತೆ ಗುರುವಾರ ನಡೆದಿದೆ.

ಪಂಜಾಬ್‌ನ ಅಟ್ಟಾರಿ-ವಾಘಾ ಗಡಿಯಲ್ಲಿನ ಭಾರತದ ನೆಲೆಯೊಳಗೆ ಈ ಸಭೆ ನಡೆದಿದ್ದು, ಕಾರಿಡಾರ್ ರೂಪುರೇಷೆಯನ್ನು ಅಂತಿಮಗೊಳಿಸಲಾಗುತ್ತದೆ.

ಭಾರತ-ಪಾಕ್ ನಿಂದ ಮಹತ್ವದ ಹೆಜ್ಜೆ; ಕರ್ತರ್ ಪುರ್ ಕಾರಿಡಾರ್ ಯೋಜನೆ ಘೋಷಣೆ ಭಾರತ-ಪಾಕ್ ನಿಂದ ಮಹತ್ವದ ಹೆಜ್ಜೆ; ಕರ್ತರ್ ಪುರ್ ಕಾರಿಡಾರ್ ಯೋಜನೆ ಘೋಷಣೆ

ಕರ್ತಾರ್ಪುರ ಕಾರಿಡಾರ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ಅಧಿಕಾರಗಳ ನಡುವೆ ನಡೆದಿರುವ ಮೊದಲ ಸಭೆ ಇದಾಗಿದೆ.

India pakistan talks on Kartarpur corridor agreement

ಭಾರತೀಯ ಸಿಖ್ ಯಾತ್ರಿಕರಿಗೆ ಯಾತ್ರಾಸ್ಥಳಕ್ಕೆ ಅಡೆತಡೆಯಿಲ್ಲದ ಮುಕ್ತ ಪ್ರವೇಶಾವಕಾಶ ಕಲ್ಪಿಸಲು ಭಾರತ ಆಗ್ರಹಿಸಿದೆ.

ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆ ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆ

ಭಾರತದ ಪರವಾಗಿ ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರ, ಬಿಎಸ್‌ಎಫ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪಂಜಾಬ್ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

ಕರ್ತರ್ ಪುರ್ ಕಾರಿಡಾರ್: ಭಾರತದ ಕ್ರಮಕ್ಕೆ ಪಾಕಿಸ್ತಾನದಿಂದ ಮೆಚ್ಚುಗೆ ಕರ್ತರ್ ಪುರ್ ಕಾರಿಡಾರ್: ಭಾರತದ ಕ್ರಮಕ್ಕೆ ಪಾಕಿಸ್ತಾನದಿಂದ ಮೆಚ್ಚುಗೆ

ಸಿಖ್ ಧರ್ಮಗುರು ಗುರು ನಾನಕ್ ಅವರ ಸಮಾಧಿ ಸ್ಥಳವಾಗಿರುವ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭಾರತದಲ್ಲಿನ ಸಿಖ್ಖರಿಗೆ ಪ್ರವೇಶ ಕಲ್ಪಿಸಲು ಅನುಕೂಲವಾಗುವಂತೆ ಗಡಿಯಾಚೆಗಿನ ವಿಶೇಷ ಸಂಪರ್ಕ ತೆರೆಯಲು ಉಭಯ ದೇಶಗಳು ಕಳೆದ ವರ್ಷ ಒಪ್ಪಂದ ಮಾಡಿಕೊಂಡಿದ್ದವು.

English summary
Officials of India and Pakistan met on Thursday to finalise the modalities for setting up of a corridor linking the Gurudwar Drabar Sahib in Pakistan town Kartarpur with Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X