• search
 • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

600 ಕಿಲೋ ಮೀಟರ್‌ ಪ್ರಯಾಣದಲ್ಲಿ, ಒಬ್ಬರೂ ನೀರು ಕೊಡಲಿಲ್ಲ

|

ಲುಧಿಯಾನ, ಮೇ 18: 21 ದಿನದ ಕ್ವಾರಂಟೈನ್ ಮುಗಿಸಿದ ಪಂಜಾಬ್‌ ಸುಖದೇವ್ ಸಿಂಗ್ ಎಂಬ ವ್ಯಕ್ತಿ ತಮ್ಮ ಪ್ರಯಾಣ ನೋವನ್ನು ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ರಾಜಸ್ಥಾನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕುಟುಂಬ ಮರಳಿ ಮನೆಗೆ ಬರಲು ಎಷ್ಟೊಂದು ಕಷ್ಟಪಟ್ಟಿದೆ. ತಮ್ಮ ಕಣ್ಣೀರಿನ ಕಥೆಯನ್ನು ಆ ಗುಂಪು ಹೇಳಿಕೊಂಡಿದೆ.

   Virat Kohli : RSS ಅಂಗ ಸಂಸ್ಥೆ ಸೇವಾಭಾರತಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು | Oneindia Kannada

   ಪಂಜಾಬ್‌ನ ಮುಕ್ತರ್‌ನ ಗಂದರ್ ಗ್ರಾಮದ ಕಾರ್ಮಿಕರ ಗುಂಪು ಮಾರ್ಚ್‌ನಲ್ಲಿ ರಾಜಸ್ತಾನದ ಜೈಸಲ್ಮೇರ್‌ನ ಸುತಾರ್ ಮಂಡಿಗೆ ಹೋಗಿತ್ತು. ಪ್ರತಿ ವರ್ಷ ಮಾರ್ಚ್‌ ತಿಂಗಳಿನಲ್ಲಿ ಕೆಲಸಕ್ಕೆ ಅಲ್ಲಿಗೆ ಈ ಗುಂಪು ಹೋಗುತ್ತಿತ್ತು. ಆದರೆ, ಲಾಕ್‌ಡೌನ್ ಘೋಷಣೆಯಾದ ಕಾರಣ ಈ ಬಾರಿ ಅಲ್ಲಿಯೇ ಸಿಕ್ಕಿಹಾಕಿಕೊಂಡರು.

   ಪಂಜಾಬ್ : ಕರ್ಫ್ಯೂ ಸಡಿಲ, ಮೇ 31ರ ತನಕ ಲಾಕ್ಡೌನ್ ಮುಂದುವರಿಕೆ

   ಕೆಲಸ ನಿಂತು ಊಟಕ್ಕೂ ತೊಂದರೆಯಾದಾಗ, ಪಂಜಾಬ್‌ನಿಂದ ರಾಜಸ್ಥಾನಕ್ಕೆ ಮರಳುವ ನಿರ್ಧಾರವನ್ನು ಈ ಗುಂಪು ಮಾಡಿತ್ತು. 21 ಜನರ ಗುಂಪಿನ ಮೂರು ಕುಟುಂಬಗಳು 600 ಕಿಲೋ ಮೀಟರ್‌ ಪ್ರಯಾಣ ಶುರು ಮಾಡಿದರು. ಏಪ್ರಿಲ್ 16ರಿಂದ ಏಪ್ರಿಲ್ 25ರವರೆಗೆ ಕಾಲು ನಡೆಗೆಯಲ್ಲಿ ಬಂದು ಊರು ಸೇರಿದರು.

   ಮಹಾರಾಷ್ಟ್ರದಿಂದ ಪಂಜಾಬ್ ಗೆ ತೆರಳಿದ 23 ಮಂದಿಗೂ ಕೊರೊನಾ!

   ತಮ್ಮ ಪ್ರಯಾಣದ ಅನುಭವ ಹಂಚಿಕೊಂಡಿರುವ ಈ ಗುಂಪು ತಮ್ಮ ಪ್ರಯಾಣವನ್ನು ಎಂದಿಗೂ ಮರೆಯುವುದಿಲ್ಲ ಎಂದಿದೆ. ಆ ಪ್ರಯಾಣದಲ್ಲಿಯಾದ ಕಷ್ಟಗಳನ್ನು ಹೇಳಿಕೊಂಡಿದೆ.

   ಯಾರೊಬ್ಬರು ನೀರು ನೀಡಲಿಲ್ಲ

   ಯಾರೊಬ್ಬರು ನೀರು ನೀಡಲಿಲ್ಲ

   ''ನಾವು ಏಪ್ರಿಲ್ 16 ರಂದು ಪ್ರಯಾಣ ಪ್ರಾರಂಭಿಸಿದಾಗ ಕಟ್ಟುನಿಟ್ಟಿನ ಕರ್ಫ್ಯೂ ಇತ್ತು. ಮುಖ್ಯ ರಸ್ತೆಗಳಲ್ಲಿ ಪೊಲೀಸರು ಇದ್ದರು. ಆಗ ಬೇರೆ ಬೇರೆ ದಾರಿಗಳ ಮೂಲಕ ಬಂದೆವು. ಸುತಾರ್ ಮಂಡಿಯಿಂದ ನಮ್ಮ ಹಳ್ಳಿಗೆ ಸುಮಾರು 602 ಕಿ.ಮೀ ದೂರದಲ್ಲಿದೆ. ಆದರೆ, ಬೇರೆ ದಾರಿಯಿಂದ ದೂರ ಹೆಚ್ಚಾಯ್ತು. ನಮ್ಮ ಪ್ರಯಾಣದಲ್ಲಿ ಯಾರೂ ನೀರು ಸಹ ನೀಡಲಿಲ್ಲ. ಹಳ್ಳಿಗರು ನೀರಿಗೆ ಸೋಂಕು ತಗುಲುತ್ತದೆ ಎಂದು ಹೇಳುತ್ತಿದ್ದರು.''

   ಮರದ ನೆರಳಿನಲ್ಲಿ ವಿಶ್ರಾಂತಿ

   ಮರದ ನೆರಳಿನಲ್ಲಿ ವಿಶ್ರಾಂತಿ

   ''ನಾವು ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದೆವು. ದಾರಿಯುದ್ದಕ್ಕೂ ಯಾವುದೇ ಹಳ್ಳಿಗೆ ಪ್ರವೇಶಿಸಲು ನಮಗೆ ಅವಕಾಶವಿರಲಿಲ್ಲ. ನಾನು ನನ್ನ ಹೆಂಡತಿ ಮತ್ತು 6 ವರ್ಷದ ಮಗಳು ಜೊತೆಗಿದ್ದರು. ನಾವು ಹೋಗುವಾಗ, ಇತರ ಅನೇಕ ಪಂಜಾಬಿಗಳು ಸಹ ಬರುತ್ತಿದ್ದರು. ನೀರಿನ ಕೊರತೆಯಿಂದ ಒಬ್ಬ ವ್ಯಕ್ತಿ ಕುಸಿದು ಸಾವನಪ್ಪಿದರು. ಮೃತ ದೇಹದೊಂದಿಗೆ ಅವರು ತಮ್ಮ ಗ್ರಾಮವನ್ನು ಹೇಗೆ ತಲುಪುತ್ತಿದ್ದರು ಎಂದು ನಮಗೆ ತಿಳಿದಿಲ್ಲ.''

   ಮಕ್ಕಳಿದ್ದರೂ ಸಹಾಯ ಮಾಡಲಿಲ್ಲ

   ಮಕ್ಕಳಿದ್ದರೂ ಸಹಾಯ ಮಾಡಲಿಲ್ಲ

   ''ಗೋಧಿ ಹಿಟ್ಟು ಸೇರಿದಂತೆ ಕೆಲವು ಆಹಾರ ಪದಾರ್ಥ, ಹಾಲಿನ ಪುಡಿ ಇಟ್ಟುಕೊಂಡಿದ್ದೆವು. ನಾವು ದಾರಿಯುದ್ದಕ್ಕೂ ಮರದ ಒಣ ಕೊಂಬೆಗಳನ್ನು ಬಳಸಿ ರೊಟ್ಟಿಗಳನ್ನು ಬೇಯಿಸುತ್ತೇವೆ. ಹಾಲಿನ ಪುಡಿ ಮೂಲಕ ನಮ್ಮ ಮಕ್ಕಳಿಗೆ ಆಹಾರ ಮತ್ತು ಚಹಾ ನೀಡಿದೆವು. ನಮ್ಮ ಗುಂಪಿನಲ್ಲಿ ಮಕ್ಕಳಿದ್ದರು ಯಾರೂ ನಮಗೆ ಸಹಾಯ ಮಾಡಲಿಲ್ಲ. ಇದು ನಮಗೆ ತುಂಬ ನೋವುಂಟು ಮಾಡಿತು.''

   ಪಡಿತರ ಕೊಡಿಸುವ ವಿಶ್ವಾಸ

   ಪಡಿತರ ಕೊಡಿಸುವ ವಿಶ್ವಾಸ

   ಹೇಗೆ ಇಷ್ಟೊಂದು ಕಷ್ಟಪಟ್ಟು ಬರೋಬ್ಬರಿ 600 ಕಿಲೋ ಮೀಟರ್‌ ಪ್ರಯಾಣವನ್ನು ಈ ಗುಂಪು ಮಾಡಿದೆ. ಇವರ ಕಥೆ ಕೇಳಿ ತುಂಬ ನೋವಾಗಿದೆ ಎಂದು ಪಂಜಾಬ್‌ ಕಾಂಗ್ರೆಸ್ ಮುಖಂಡ ಜೈಜೀತ್ ಸಿಂಗ್ ಜೋಹಾಲ್ ಹೇಳಿದ್ದಾರೆ. ಈ ಗುಂಪಿಗೆ ಆರ್ಥಿಕವಾಗಿ ಸಹಾಯ ಮಾಡುತ್ತೇನೆ ಮತ್ತು ಸರ್ಕಾರದ ಕಡೆಯಿಂದ ಪಡಿತರವನ್ನು ಸಹ ನೀಡುತ್ತೇನೆ. ಎಂದು ವಿಶ್ವಾಸ ನೀಡಿದ್ದಾರೆ.

   English summary
   A group of 21 villages walked over 600 km Rajasthan’s Jaislamer to Punjab’s Muktsar amid a strict lockdown.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more