ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬಿನಲ್ಲಿ ಮಹಿಳಾ ತಪಾಸಣಾಧಿಕಾರಿಯ ಬರ್ಬರ ಹತ್ಯೆ

|
Google Oneindia Kannada News

ಚಂಡಿಗಢ, ಮಾರ್ಚ್ 30: ಪಂಜಾಬಿನ ಖಾರರ್ ಎಂಬಲ್ಲಿ ಡ್ರಗ್ ಇನ್ಸ್ ಪೆಕ್ಟರ್(ಔಷಧ ತಪಾಸಣಾಧಿಕಾರಿ) ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನೆಹಾ ಶೌರಿ ಎಂಬ ಮಹಿಳೆ ಖಾರರ್ ನ ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೋರೇಟರಿಯಲ್ಲಿ ಝೋನಲ್ ಲೈಸೆನ್ಸಿಂಗ್ ಆಫೀಸರ್ ಆಗಿದ್ದರು. ಆಕೆ ಶುಕ್ರವಾರ ತಮ್ಮ ಕಚೇರಿಯಲ್ಲಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಬಂದು ಆಕೆಯ ಮೇಲೆ ಎರಡು ಬಾರಿ ಗುಂಡುಹಾರಿಸಿದ್ದರು.

ಕೊಲೆ ಆರೋಪಿಯಿಂದ ಪೊಲೀಸ್ ಮೇಲೆ ಕಲ್ಲು ತೂರಾಟ, ಪೊಲೀಸರಿಂದ ಫೈರಿಂಗ್ಕೊಲೆ ಆರೋಪಿಯಿಂದ ಪೊಲೀಸ್ ಮೇಲೆ ಕಲ್ಲು ತೂರಾಟ, ಪೊಲೀಸರಿಂದ ಫೈರಿಂಗ್

ಪರಿಣಾಮ ನೇಹಾ ಅವರು ಸ್ಥಳದಲ್ಲೇ ಮೃತರಾದರು. ನೇಹಾ ಅವರಿಗೆ ಗುಂಡಿಕ್ಕಿದ ಆರೋಪಿ, ನಂತರ ತಾವೂ ಗುಂಡಿಕ್ಕಿಕ್ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರಿಂದ ಅವರು ಬದುಕುಳಿದಿದ್ದಾರೆ.

Drug inspector shot dead in Punjab

ಆರೋಪಿಗೆ ಚಂಡಿಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಚ್ಚಿನ ತನಿಖೆ ನಡೆಯಬೇಕಿದೆ.

ವೃತ್ತಿಗೆ ಸಂಬಂಧಿಸಿದ ವೈಮನಸ್ಯದಿಂದ ಈ ಘಟನೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಅಭಿಪ್ರಾಯ ಪಡಲಾಗಿದ್ದು, ಕೂಲಂಕಷವಾಗಿ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ಶರವಣ ಭವನ್ ಹೋಟೆಲ್ ಮಾಲೀಕರಿಗೆ ಜೀವಾವಧಿ ಶಿಕ್ಷೆ ಕಾಯಂಶರವಣ ಭವನ್ ಹೋಟೆಲ್ ಮಾಲೀಕರಿಗೆ ಜೀವಾವಧಿ ಶಿಕ್ಷೆ ಕಾಯಂ

ತಪಾಸಣಾಧಿಕಾರಿಯ ಕೊಲೆಗೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆ, ತನಿಖೆ ನಡೆಯಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶಿಸಿದ್ದು, ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತೆ ಹೇಳಿದ್ದಾರೆ.

English summary
A drug inspector in Punjab's Kharar town on Friday was shot dead in her office. The accused then shot himself, but survived.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X