ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ಗೂ ವ್ಯಾಪಿಸಿದ ಮಾರಕ ಕೊರೊನಾ ಸೋಂಕು

|
Google Oneindia Kannada News

ಅಮೃತಸರ, ಮಾರ್ಚ್ 7: ಬಾರತದಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕು ಪಂಜಾಬ್‌ಗೂ ವ್ಯಾಪಿಸಿದೆ. ಪಂಜಾಬ್‌ನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ.

ಇಟಲಿಗೆ ಹೋಗಿ ಬಂದಿದ್ದ ಪಂಜಾಬ್‌ನ ಇಬ್ಬರು ಗಂಡಸರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅಮೃತಸರ ವೈದ್ಯಕೀಯ ಕಾಲೇಜು ಖಚಿತಪಡಿಸಿದೆ. ಸೋಂಕಿತರ ರಕ್ತದ ಮಾದರಿಯನ್ನು ದೆಹಲಿಗೆ ಹಾಗೂ ಪುಣೆಗೆ ಕಳಿಸಲಾಗಿದೆ ಎಂದು ತಿಳಿಸಿದೆ. ಇಟಲಿಯಿಂದ ಮರಳಿದ ಇಬ್ಬರನ್ನೂ ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಹೊಸಹರಿಪುರ್ ಪ್ರದೇಶದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ಬಗ್ಗೆ 30 ವರ್ಷಗಳ ಹಿಂದೆಯೇ ಕನ್ನಡ ಪತ್ರಿಕೆಯಲ್ಲಿ ಮಾಹಿತಿ!ಕೊರೊನಾ ಬಗ್ಗೆ 30 ವರ್ಷಗಳ ಹಿಂದೆಯೇ ಕನ್ನಡ ಪತ್ರಿಕೆಯಲ್ಲಿ ಮಾಹಿತಿ!

ಇದುವರೆಗೆ ಭಾರತದಲ್ಲಿ ಒಟ್ಟು 33 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಇಟಲಿಯ 16 ಪ್ರವಾಸಿಗರೂ ಸೇರಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಸೋಂಕು ಹರಡದಂತೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ.

Deadly Coronavirus Infection In Punjab

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೋಂಕು ಬಗ್ಗೆ ಜನರು ವದಂತಿಗಳನ್ನು ಹಬ್ಬಿಸಬಾರದು. ಅನುಮಾನ ಇದ್ದರೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಹೋಳಿ ಮಿಲನ್ ಕಾರ್ಯಕ್ರಮದಿಂದ ಹಿಂದೆ ಸರಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್‌ ಸೋಂಕಿನ ಭಯದಿಂದಾಗಿ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಮುಂದಿನ ವಾರ ಯುರೋಪ್‌ನ ಬ್ರೂಸೆಲ್ಸ್‌ನಲ್ಲಿ ನಡೆಯಬೇಕಿದ್ದ ಯೂರೋಪಿನ್ ಯೂನಿಯನ್‌ನ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳಬೇಕಿತ್ತು. ಆದರೆ, ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು ತಲ್ಲಣ ಸೃಷ್ಠಿಸಿರುವುದರಿಂದ ತಜ್ಞರ ಸಲಹೆ ಮೇರೆಗೆ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿಲು ನಿರ್ಧರಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

English summary
Deadly Coronavirus Infection In Punjab. 2 cases are ditected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X