• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್ : ಕರ್ಫ್ಯೂ ಸಡಿಲ, ಮೇ 31ರ ತನಕ ಲಾಕ್ಡೌನ್ ಮುಂದುವರಿಕೆ

|

ಅಮೃತ್ ಸರ್, ಮೇ 17: ಕೊರೊನಾ ವೈರಸ್ ಸೋಂಕು ಹರಡದಂತೆ ವಿಧಿಸಿರುವ್ಚ ಲಾಕ್ ಡೌನ್ ಮೂರನೇ ಅವಧಿ ಮೇ.17ಕ್ಕೆ ಅಂತ್ಯವಾಗಲಿದೆ. ಮೇ.18ರಿಂದ ಮತ್ತೆ ಎರಡು ವಾರ ಲಾಕ್ ಡೌನ್ ಮುಂದುವರಿಸುವಂತೆ ಕೇಂದ್ರ ಸರ್ಕಾರವನ್ನು ಅನೇಕ ರಾಜ್ಯಗಳು ಕೇಳಿಕೊಂಡಿವೆ.

ಈ ನಡುವೆ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗೂ ಮುನ್ನವೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪಂಜಾಬ್ ರಾಜ್ಯದಲ್ಲಿ ಲಾಕ್ಡೌನ್ ಮುಂದುವರಿಕೆ ಬಗ್ಗೆ ಘೋಷಿಸಿದ್ದಾರೆ.

ಶಾಲೆ, ಕಾಲೇಜುಗಳಿಗೆ ಬೇಸಿಗೆ ರಜೆ ಘೋಷಿಸಿದ ಅಸ್ಸಾಂ, ಪಂಜಾಬ್

ತಮಿಳುನಾಡು, ಪಂಜಾಬ್, ಮಹಾರಾಷ್ಟ್ರ, ತೆಲಂಗಾಣ ಲಾಕ್‌ಡೌನ್ ನಿಯಮ ಸಡಿಲಗೊಳಿಸುವಂತೆ ಕೇಳಿಕೊಂಡ ಪ್ರಮುಖ ರಾಜ್ಯಗಳಾಗಿವೆ. ಅಸ್ಸಾಂ, ಬಿಹಾರ, ತೆಲಂಗಾಣ ರಾಜ್ಯಗಳು ಮೇ 31ರತನಕ ಲಾಕ್ಡೌನ್ ವಿಸ್ತರಣೆಗೆ ಮುಂದಾಗಿವೆ.

ಕರ್ಫ್ಯೂ ಸಡಿಲ: ಮೇ 18ರಿಂದ ರಾಜ್ಯದಲ್ಲಿ ಕರ್ಫ್ಯೂ ಇರುವುದಿಲ್ಲ, ಆದರೆ, ಲಾಕ್ಡೌನ್ ಮೇ 31ರ ತನಕ ಮುಂದುವರೆಯಲಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಮನೆ ಬಾಗಿಲಿಗೆ ಬರಲಿದೆ ಮದ್ಯ; ಒಬ್ಬರಿಗೆ 2 ಲೀಟರ್ ಮಾತ್ರ!

ಕಂಟೈನ್‌ಮೆಂಟ್ ಝೋನ್ ಇರುವ ಕಡೆಗೆ ವಾಹನಗಳ ಸಂಚಾರ, ಸಾರ್ವಜನಿಕ ಸಾರಿಗೆ ಸಂಚಾರ ನಿರ್ಬಂಧಿಸಲಾಗಿದೆ. ನಿರ್ಬಂಧಿತ ಸಾರ್ವಜನಿಕ ಸಾರಿಗೆ ಸೇವೆ, ಆಟೋ, ಟ್ಯಾಕ್ಸಿ ಆರಂಭಿಸುವುದು, ಅಂಗಡಿ, ಸಣ್ಣ ವ್ಯಾಪಾರಿಗಳಿಗೆ ನೆರವು ಸೇರಿದಂತೆ ಅನೇಕ ವಿನಾಯಿತಿಗಳನ್ನು ಲಾಕ್ಡೌನ್ 4.0ನಲ್ಲಿ ನಿರೀಕ್ಷಿಸಿಬಹುದು ಎಂದು ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಮುಕ್ತ ಸಂಚಾರ ಸದ್ಯಕ್ಕಿಲ್ಲ: ಶಾಲಾ, ಕಾಲೇಜು ತೆರೆಯುವುದು, ಅಂತರ ರಾಜ್ಯ ಬಸ್ ಸಂಚಾರ, ವಿಮಾನ, ರೈಲು ಮಾರ್ಗಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದರೂ ರಾಜ್ಯಗಳು ಒಪ್ಪಿಗೆ ಸೂಚಿಸಿಲ್ಲ.

English summary
Punjab Chief Minister Amarinder Singh on Saturday evening said the coronavirus lockdown in the state will continue till May 31, though his government will lift the curfew restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X