• search
 • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

137 ಹಜೂರ್ ಸಾಹಿಬ್ ಯಾತ್ರಿಕರಿಗೆ ಕೋವಿಡ್-19 ಪಾಸಿಟಿವ್

|

ಅಮೃತಸರ, ಮೇ 2: ಮಹಾರಾಷ್ಟ್ರದ ನಾಂದೇಡ್ ನಲ್ಲಿನ ಹಜೂರ್ ಸಾಹೇಬ್ ನಿಂದ ವಾಪಸ್ ಆದ 137 ಯಾತ್ರಿಕರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಪಂಜಾಬ್ ನ ವೈದ್ಯಕೀಯ ಶಿಕ್ಷಣ ಸಚಿವ ಓ.ಪಿ.ಸೋನಿ ಹೇಳಿದ್ದಾರೆ.

   ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಮಾತು ಕೇಳೋಲ್ಲ ಮದ್ಯದ ಅಂಗಡಿ ಓಪನ್..? | Sriramulu | Siddaramaiah

   ''ಶುಕ್ರವಾರ ಸಂಜೆ 55 ಯಾತ್ರಿಕರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಹೀಗಾಗಿ, ಎಲ್ಲರೂ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಎಲ್ಲರೂ ಮನೆಯಲ್ಲೇ ಇರಿ'' ಎಂದು ಓ.ಪಿ.ಸೋನಿ ತಿಳಿಸಿದ್ದಾರೆ.

   ಶುಭ ಸುದ್ದಿ ನೀಡಿದ ಅಧ್ಯಯನ: ಮೇ 21 ಕ್ಕೆ ಭಾರತದಲ್ಲಿ ಕೊರೊನಾ ಮಾಯ!

   ಅಷ್ಟಕ್ಕೂ, ಶುಕ್ರವಾರ (ಮೇ 1) ಪಂಜಾಬ್ ನಲ್ಲಿ 105 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದವು. ರಾಜ್ಯದಲ್ಲಿ ಈಗ ಸೋಂಕಿತರ ಸಂಖ್ಯೆ 585 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಪಂಜಾಬ್ ನಲ್ಲಿ 20 ಮಂದಿ ಮೃತಪಟ್ಟಿದ್ದಾರೆ.

   ಭಾರತದಲ್ಲಿ ಈಗ ಕೊರೊನಾ ಸೋಂಕಿತರ ಸಂಖ್ಯೆ 37,336 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ 10,060 ಮಂದಿ ಸಂಪೂರ್ಣವಾಗಿ ಗುಣಮುಖರಾದರೆ, 1226 ಜನ ಪ್ರಾಣ ಕಳೆದುಕೊಂಡಿದ್ದಾರೆ.

   English summary
   Coronavirus: 137 Hazur Sahib Pilgrims who returned to Punjab tested Covid 19 Positive.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X