ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BSF ಕಚೇರಿಯಲ್ಲಿ ಕಾನ್‌ಸ್ಟೆಬಲ್‌ನಿಂದ ಗುಂಡಿನ ದಾಳಿ: 5 ಸಾವು, ಹಲವರಿಗೆ ಗಾಯ

|
Google Oneindia Kannada News

ಅಮೃತಸರ ಮಾರ್ಚ್ 06: ಅಮೃತಸರದಲ್ಲಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೇಂದ್ರ ಕಚೇರಿಯಲ್ಲಿ ಕಾನ್‌ಸ್ಟೇಬಲ್ ಒಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗುತ್ತಿದೆ. 10 ರಿಂದ 12 ಸೈನಿಕರು ಗುಂಡು ಹಾರಿಸಿದ ವರದಿಗಳಿವೆ. ಈ ಘಟನೆಯ ನಂತರ ಕಾನ್‌ಸ್ಟೇಬಲ್ ಸ್ವತಃ ಗುಂಡು ಹಾರಿಸಿಕೊಂಡಿರುವುದು ವರದಿಯಾಗಿದೆ. ನಂತರ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಲಾಗಿದೆ. ಗುಂಡು ಹಾರಿಸಿದ ಕಾನ್‌ಸ್ಟೇಬಲ್ ಕೂಡ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಎಸ್‌ಎಫ್‌ನ ಕಾನ್‌ಸ್ಟೇಬಲ್ ಸುತಪ್ಪ ಮನನೊಂದು ಗುಂಡು ಹಾರಿಸುವುದು ಮಾತ್ರವಲ್ಲದೇ ಸ್ವತ: ಗುಂಡು ಹಾರಿಸಿಕೊಂಡಿದ್ದಾರೆ.

ಅತಿಯಾದ ಕರ್ತವ್ಯದಿಂದ BSF ಕಾನ್‌ಸ್ಟೆಬಲ್ ಕಂಗಾಲು

ವರದಿಗಳ ಪ್ರಕಾರ, ಬಿಎಸ್‌ಎಫ್‌ನ ಕಾನ್‌ಸ್ಟೇಬಲ್ ಸುತಪ್ಪ ಕೋಪದ ಭರದಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗುತ್ತಿದೆ. ಈತ ಮಹಾರಾಷ್ಟ್ರದ ನಿವಾಸಿ. ಅತಿಯಾದ ಕರ್ತವ್ಯದಿಂದಾಗಿ ಸೂತಪ್ಪ ಮನನೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಅಧಿಕಾರಿಯೊಂದಿಗೆ ವಾಗ್ವಾದವನ್ನೂ ನಡೆಸಿದ್ದರು. ಭಾನುವಾರ ಬೆಳಗ್ಗೆ ತನ್ನ ರೈಫಲ್‌ನಿಂದ ಗುಂಡು ಹಾರಿಸಲು ಆರಂಭಿಸಿದ್ದಾನೆ. ಗುಂಡಿನ ದಾಳಿಯ ನಂತರ ಅವ್ಯವಸ್ಥೆಯಲ್ಲಿ ನೂಕುನುಗ್ಗಲು ಉಂಟಾಯಿತು ಮತ್ತು ಅನೇಕ ಜನರು ಗಾಯಗೊಂಡರು. ಇದಾದ ಬಳಿಕ ಇಬ್ಬರು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Constable Opened Fire at BSF Headquarters in Amritsar, 5 Killed, Many Injured

English summary
A jawan opened fire at the Border Security Force (BSF) headquarters in Amritsar. It is being told that four soldiers were martyred in this incident. At the same time, there are reports of 10 to 12 soldiers being shot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X